BSNL New Offer: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಎಸ್‌ಎನ್‌ಎಲ್ ಕೇವಲ 1 ರೂಪಾಯಿಗೆ ಹೊಸ ಸಿಮ್ ಕಾರ್ಡ್‌ಗಳನ್ನು ನೀಡುತ್ತಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ ತಿಂಗಳ ವ್ಯಾಲಿಡಿಟಿಯಲ್ಲಿ 62GB ಡೇಟಾ ಸಿಗಲಿದೆ. ಈ ಆಫರ್ ಆಗಸ್ಟ್ 1 ರಿಂದ 31 ರವರೆಗೆ ಮಾನ್ಯವಾಗಿರುತ್ತದೆ.
ದೇಶದ ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್‌ಎನ್‌ಎಲ್ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಆಫರ್ ಪ್ರಕಟಿಸಿದೆ. ಈ ಆಫರ್ ನಿಮ್ಮದಾಗಿಸಿಕೊಳ್ಳಲು ಗ್ರಾಹಕರು ಕೇವಲ 1 ರೂಪಾಯಿ ಮಾತ್ರ ಪಾವತಿಸಬೇಕು. ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್ ಮುಂದಾಗಿದೆ.
25
ನಮ್ಮ ಸ್ವಾತಂತ್ರ್ಯ, ಸ್ವದೇಶಿ ನೆಟ್‌ವರ್ಕ್
ನಮ್ಮ ಸ್ವಾತಂತ್ರ್ಯ, ಸ್ವದೇಶಿ ನೆಟ್‌ವರ್ಕ್ (ಅಪನಿ ಅಜಾದಿ, ಸ್ವದೇಶಿ ನೆಟ್‌ವರ್ಕ್) ಎಂಬ ಸಾಲುಗಳ ಜೊತೆ ಬಿಎಸ್‌ಎನ್‌ಎಲ್ ಹೊಸ ಆಫರ್ ಬಿಡುಗಡೆ ಮಾಡಿದೆ. ಹೊಸ ಬಳಕೆದಾರರಿಗೆ ಉಚಿತವಾಗಿ ಬಿಎಸ್‌ಎನ್‌ಎಲ್ ಸಿಮ್ ವಿತರಣೆ ಮಾಡಲಾಗುತ್ತಿದೆ. ಗ್ರಾಹಕರು ಸಮೀಪದ ಬಿಎಸ್‌ಎನ್‌ಎಲ್ ಕಚೇರಿಗೆ ಭೇಟಿ ನೀಡಿ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಿ ಸಿಮ್ ಪಡೆದುಕೊಳ್ಳಬಹುದು.
35
4G ನೆಟ್‌ವರ್ಕ್
ಬಿಎಸ್‌ಎನ್ಎಲ್ ಯಾವುದೇ ಅಡೆತಡೆಗಳಿಲ್ಲದೇ 4G ನೆಟ್‌ವರ್ಕ್ ಆನಂದಿಸಬಹುದಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದಾಗಿದೆ. ಪ್ರತಿದಿನ 2GB ಇಂಟರ್‌ನೆಟ್ ಲಭ್ಯವಾಗುತ್ತದೆ. ಇದೆಲ್ಲದರ ಜೊತೆಯಲ್ಲಿ ಗ್ರಾಹಕರು ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ.
ಹೊಸ ಸಿಮ್ ಪಡೆದುಕೊಳ್ಳಲು 1 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಆಫರ್ ಆಗಸ್ಟ್ 1 ರಿಂದ ಆಗಸ್ಟ್ 31ರವರೆಗೆ ಮಾತ್ರ ಇರಲಿದೆ. 1 ರೂಪಾಯಿಯಲ್ಲಿ ನಿಮಗೆ ಬರೋಬ್ಬರಿ ತಿಂಗಳ ವ್ಯಾಲಿಡಿಟಿಯಲ್ಲಿ 62GB ಡೇಟಾ ಸಿಗುತ್ತದೆ.
55
ಫ್ರೀಡಂ ಆಫರ್
ಬಿಎಸ್‌ಎನ್ಎಲ್ ಬಿಡುಗಡೆ ಮಾಡಿರುವ ಫ್ರೀಡಂ ಆಫರ್ ಮೂರು ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆ ಕೆಡಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಬಿಎಸ್‌ಎನ್‌ಎಲ್ ಸಹ 4ಜಿ ನೆಟ್‌ವರ್ಕ್ ನೀಡಲು ಆರಂಭಿಸಿದೋರಿಂದ ಗ್ರಾಹಕರು ದೇಶಿ ನೆಟ್‌ವರ್ಕ್‌ನತ್ತ ಮುಖ ಮಾಡುವ ಸಾಧ್ಯತೆಗಳಿವೆ.