ರಿಲಯನ್ಸ್ ತನ್ನ 'ಬಾಂಬೆ ಕ್ರೀಮರಿ' ಬ್ರ್ಯಾಂಡ್‌ನೊಂದಿಗೆ ಐಸ್‌ಕ್ರೀಂ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಐಸ್‌ಕ್ರೀಂ, ಪ್ರೀಮಿಯಂ ಗುಣಮಟ್ಟವನ್ನು ಕೈಗೆಟುಕುವ ದರದಲ್ಲಿ ನೀಡುವುದರ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ಸೃಷ್ಟಿಸುವ ಗುರಿ ಹೊಂದಿದೆ.
ಬಾಂಬೆ ಕ್ರೀಮರಿ ಐಸ್‌ಕ್ರೀಂಗಳನ್ನು ಸಾಮಾನ್ಯ ಜನರೂ ಖರೀದಿಸುವಂತೆ ಮಾಡಲು ರಿಲಯನ್ಸ್ ಮುಂದಾಗಿದೆ. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಗುಣಮಟ್ಟ ನೀಡುವುದೇ ರಿಲಯನ್ಸ್‌ನ ಗುರಿಯಾಗಿದೆ. ಈ ಐಸ್ ಕ್ರೀಂ ಬೆಲೆ 10 ರೂ.ಯಿಂದ ಆರಂಭವಾಗುತ್ತದೆ. ಕೋನ್, ಕಪ್, ಟಬ್, ಬಾರ್, ಸ್ಟಿಕ್ ಹೀಗೆ ಹಲವು ರೂಪಗಳಲ್ಲಿ ಐಸ್ ಕ್ರೀಂ ಗ್ರಾಹಕರಿಗೆ ಸಿಗಲಿದೆ.
25
ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ
'ಬಾಂಬೆ ಕ್ರೀಮರಿ' ಐಸ್‌ಕ್ರೀಂಗಳನ್ನು ಅಪ್ಪಟ ಡೈರಿ ಕ್ರೀಮ್‌ನಿಂದ ತಯಾರಿಸಲಾಗಿದೆ ಎಂದು RCPL ಸಂಸ್ಥೆ ಹೇಳಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಆರ್‌ಸಿಪಿಎಲ್ ನಿರ್ದೇಶಕ ಟಿ. ಕೃಷ್ಣಕುಮಾರ್ ಹೇಳಿದ್ದಾರೆ. ಪ್ರತಿಯೊಂದು ಭಾರತೀಯ ಕುಟುಂಬಕ್ಕೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಐಸ್‌ಕ್ರೀಂ ನೀಡುವುದು ತಮ್ಮ ಗುರಿ ಎಂದು ಟಿ. ಕೃಷ್ಣಕುಮಾರ್ ತಿಳಿಸಿದ್ದಾರೆ.
35
ಭಾರತದ ಐಸ್ ಕ್ರೀಂ ಮಾರುಕಟ್ಟೆ
ಬಾಂಬೆ ಕ್ರೀಮರಿ ಐಸ್‌ಕ್ರೀಂಗಳನ್ನು ಮೊದಲು ಭಾರತದ ಪಶ್ಚಿಮ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗುವುದು. ನಂತರ, ಹಂತ ಹಂತವಾಗಿ ದೇಶದಾದ್ಯಂತ ಮಾರಾಟ ವಿಸ್ತರಿಸಲು ಆರ್‌ಸಿಪಿಎಲ್ ಯೋಜಿಸಿದೆ. ರಿಲಯನ್ಸ್‌ನ ಬಲಿಷ್ಠ ವಿತರಣಾ ಜಾಲದಿಂದ ಇದು ಸುಲಭವಾಗಿ ಸಾಧ್ಯವಾಗಲಿದೆ.
ರಿಲಯನ್ಸ್ ಈಗಾಗಲೇ ಆಹಾರ, ಪಾನೀಯ, ಪರ್ಸನಲ್ ಕೇರ್‌ನಂತಹ ಎಫ್‌ಎಂಸಿಜಿ ವಲಯದಲ್ಲಿ ಬಲವಾಗಿ ನೆಲೆಯೂರಿದೆ. 'ಕ್ಯಾಂಪಾ' ಕೂಲ್ ಡ್ರಿಂಕ್ಸ್, 'ಇಂಡಿಪೆಂಡೆನ್ಸ್' ಬ್ರ್ಯಾಂಡ್‌ನ ಅಡುಗೆ ಎಣ್ಣೆ, ಹಿಟ್ಟು, ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿದೆ. ಈಗ ಐಸ್‌ಕ್ರೀಂ ಮಾರುಕಟ್ಟೆಗೂ ಕಾಲಿಟ್ಟು ತನ್ನ ವ್ಯಾಪಾರವನ್ನು ವಿಸ್ತರಿಸಿದೆ.
55
ಐಸ್‌ಕ್ರೀಂ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆ
ಇದು ಕೇವಲ ತಾತ್ಕಾಲಿಕ ಪ್ರಯತ್ನವಲ್ಲ ಎಂದು ಆರ್‌ಸಿಪಿಎಲ್ ಸ್ಪಷ್ಟಪಡಿಸಿದೆ. ಗುಣಮಟ್ಟದ ಉತ್ಪನ್ನಗಳು, ಕೈಗೆಟುಕುವ ಬೆಲೆ ಮತ್ತು ವ್ಯಾಪಕ ವಿತರಣಾ ಜಾಲದ ಮೂಲಕ ಭಾರತದ ಐಸ್‌ಕ್ರೀಂ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗಿ ಬೆಳೆಯುವ ಗುರಿಯನ್ನು ರಿಲಯನ್ಸ್ ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.