ಮೋದಿ ಪ್ರಧಾನಿ ಆದ ಅವಧಿಯಲ್ಲಿ ಅಂಬಾನಿ ಆಸ್ತಿ ಬೆಳೆದಿದ್ದೆಷ್ಟು?

Published : Sep 23, 2024, 05:13 PM IST

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಮುಕ್ತಾಯವಾಗಿದೆ. ಮೂರನೇ ಅವಧಿಗೆ ಮೋದಿ ಮತ್ತೆ ಅಧಿಕಾರ ವಹಿಸಿಕೊಂಡಿದೆ. 2015ರಿಂದ 2014ರವರೆಗೆ ದೇಶದ ಅತ್ಯಂತ ಪ್ರತಿಷ್ಠಿತ  ಉದ್ಯಮಿ ಮುಖೇಶ್‌ ಅಂಬಾನಿ ಅವರ ಆಸ್ತಿ ಬೆಳೆದ ರೀತಿ ಇಲ್ಲಿದೆ.

PREV
111
ಮೋದಿ ಪ್ರಧಾನಿ ಆದ ಅವಧಿಯಲ್ಲಿ ಅಂಬಾನಿ ಆಸ್ತಿ ಬೆಳೆದಿದ್ದೆಷ್ಟು?

ಮುಖೇಶ್‌ ಅಂಬಾನಿ ದೇಶದ ಮಾತ್ರವಲ್ಲ, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಪೆಟ್ರೋಕೆಮಿಕಲ್ಸ್‌ನಿಂದ ಹಿಡಿದು ರಿಟೇಲ್‌ ಶಾಪ್‌ಗಳವರೆಗೆ ಇಂದು ರಿಲಯನ್ಸ್‌ನ ಉಪಸ್ಥಿತಿ ಇದೆ.2024ರ ಜುಲೈ 15ರ ವೇಳೆಗೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್‌ ಅಂಬಾನಿ ಅವರ ಆಸ್ತಿ ಎಷ್ಟು? ಕಳೆದ 10 ವರ್ಷದಲ್ಲಿ ಅವರ ಆಸ್ತ ಬೆಳೆದಿದ್ದು ಹೇಗೆ ಎನ್ನುವುದರ ವಿವರ ಇಲ್ಲಿದೆ.
 

211

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರ ವಹಿಸಿಕೊಂಡರೆ, 2015ರ ವೇಳೆಗೆ ಮುಖೇಶ್‌ ಅಂಬಾನಿ ಅವರ ಆಅಸ್ತಿ 21 ಬಿಲಿಯುನ್‌ ಯುಎಸ್‌ ಡಾಲರ್‌ ಮೊತ್ತವಾಗಿತ್ತು. ಪ್ರಸ್ತುತ ಭಾರತೀಯ ರೂಪಾಯಿಯಲ್ಲಿ  ಇದರ ಮೊತ್ತ 1 ಲಕ್ಷದ 75 ಸಾವಿರ ಕೋಟಿ ರೂಪಾಯಿ.

311

2016ರಲ್ಲಿ ಮುಖೇಶ್‌ ಅಂಬಾನಿ ಅವರ ಆಸಕ್ತಿಯಲ್ಲಿ ಕೊಂಚ ಮಟ್ಟದಲ್ಲಿ ಇಳಿಕೆ ಕಂಡಿತ್ತು. ಅಂಬಾನಿ ಅವರ ಆಸ್ತಿ 19.3 ಬಿಲಿಯನ್‌ ಯುಎಸ್‌ ಡಾಲರ್‌. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 1 ಲಕ್ಷದ 61 ಸಾವಿರ ಕೋಟಿ ರೂಪಾಯಿ.
 

411

2017ರಲ್ಲಿ ಅಂಬಾನಿ ಅವರ ಆಸ್ತಿಯಲ್ಲಿ ಕೊಂಚ ಮಟ್ಟದ ಏರಿಕೆ ಕಂಡಿತ್ತು. ಆ ವರ್ಷ ಅವರ ಆಸ್ತಿ 23.2 ಬಿಲಿಯನ್‌ ಯುಎಸ್‌ ಡಾಲರ್‌. ಅಂದರೆ, 1 ಲಕ್ಷದ 94 ಸಾವಿರ ಕೋಟಿ ರೂಪಾಯಿ.
 

511

2018ರಲ್ಲಿ ರಿಲಯನ್ಸ್‌ ಚೇರ್ಮನ್‌ ಮುಖೇಶ್‌ ಅಂಬಾನ ಅವರ ಆಸ್ತಿ ಹೆಚ್ಚೂ ಕಡಿಮೆ ಡಬಲ್‌ ಆಗಿತ್ತು. ಈ ವರ್ಷ ಅವರ ಆಸ್ತಿ 40.1 ಬಿಲಿಯನ್‌ ಯುಎಸ್‌ ಡಾಲರ್‌. ಅಂದರೆ, 3 ಲಕ್ಷದ 35 ಸಾವಿರ ಕೋಟಿ ರೂಪಾಯಿ.
 

611

2019ರಲ್ಲಿ ಅಂಬಾನಿ ಆಸ್ತಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಕೊಂಚ ಮಟ್ಟದ ಏರಿಕೆ ಕಂಡಿತ್ತು. 50 ಬಿಲಿಯನ್‌ ಯುಎಸ್‌ ಡಾಲರ್‌ ಮೊತ್ತದ ನೆಟ್‌ವರ್ತ್‌ ಇವರದಾಗಿತ್ತು. ಅಂದರೆ 4 ಲಕ್ಷದ 17 ಸಾವಿರ ಕೋಟಿ ರೂಪಾಯಿ.

711

2020ರಲ್ಲಿ ಕೊರೋನಾ ಪರಿಣಾಮದಿಂದಾಗಿ ಮುಖೇಶ್‌ ಅಂಬಾನಿ ನೆಟ್‌ವರ್ತ್‌ನಲ್ಲೂ ದೊಡ್ಡ ಮಟ್ಟದ ಇಳಿಕೆ ಕಂಡಿತ್ತು. 50 ಬಿಲಿಯನ್‌ ಯುಎಸ್‌ ಡಾಲರ್‌ನಿಂದ 36.8 ಬಿಲಿಯನ್‌ ಯುಎಸ್‌ ಡಾಲರ್‌ಗೆ ಇಳಿದಿತ್ತು. ಅಂದರೆ, 3 ಲಕ್ಷದ 7 ಸಾವಿರ ಕೋಟಿ ರೂಪಾಯಿ ನೆಟ್‌ವರ್ತ್‌ ಇವರದಾಗಿತ್ತು.
 

811

2021ರಲ್ಲಿ ಮುಖೇಶ್‌ ಅಂಬಾನಿ ಅವರ ಆಸ್ತಿ ದೊಡ್ಡ ಮಟ್ಟದಲ್ಲಿ ಏರಿಕೆಯಾಯಿತು. ಈ ವರ್ಷ ಅವರ ಆಸ್ತಿ 84.5 ಬಿಲಿಯನ್‌ ಯುಎಸ್‌ ಡಾಲರ್‌. ಅಂದರೆ, ಭಾರತೀಯ ರೂಪಾಯಿಯಲ್ಲಿ 7 ಲಕ್ಷದ 6 ಸಾವಿರ ಕೋಟಿ ರೂಪಾಯಿ.

911

2022ರಲ್ಲಿ ಮುಖೇಶ್‌ ಅಂಬಾನಿ ಅವರ ಆಸ್ತಿಯಲ್ಲಿ ಕೊಂಚ ಮಟ್ಟದಲ್ಲಿ ಏರಿಕೆಯಾಗಿತ್ತು. ಅವರ ಆಸ್ತಿ 90.7 ಬಿಲಿಯನ್‌ ಯುಎಸ್‌ ಡಾಲರ್‌. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 7 ಲಕ್ಷದ 57 ಸಾವಿರ ಕೋಟಿ ರೂಪಾಯಿ. ಅಂದರೆ ಬರೀ 51 ಸಾವಿರ ಕೋಟಿ ರೂಪಾಯಿ ಆಸ್ತಿ ಏರಿಕೆಯಾಗಿತ್ತು.
 

1011

2023 ಅಂದರೆ ಕಳೆದ ವರ್ಷದಲ್ಲಿ ಮುಖೇಶ್‌ ಅಂಬಾನಿ ಅವರ ಆಸ್ತಿ ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. 2023ರಲ್ಲಿ ಇವರ ಆಸ್ತಿ 83.4 ಬಿಲಿಯನ್‌ ಯುಎಸ್‌ ಡಾಲರ್‌. ಭಾರತೀಯ ರೂಪಾಯಿಯಲ್ಲಿ 6 ಲಕ್ಷದ 96 ಸಾವಿರ ಕೋಟಿ ರೂಪಾಯಿ.
 

1111

2024ರಲ್ಲಿ ಮುಖೇಶ್‌ ಅಂಬಾನಿ ಆಸ್ತಿ ಇಲ್ಲಿಯವರೆಗೂ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಇದರಲ್ಲಿ 124 ಬಿಲಿಯನ್‌ ಯುಎಸ್‌ ಡಾಲರ್‌. ಅಂದರೆ, ಮುಖೇಶ್‌ ಅಂಬಾನಿ ಅವರ ಆಸ್ತಿ ಈಗ 10 ಲಕ್ಷದ 36 ಸಾವಿರ ಕೋಟಿ ರೂಪಾಯಿ.
 

Read more Photos on
click me!

Recommended Stories