ಗುಡ್ ನ್ಯೂಸ್, ಒಂದು ವಾರದಲ್ಲಿ ಚಿನ್ನದ ಬೆಲೆ 35,000 ರೂ ಕಡಿತ, ಇನ್ನೂ ಇಳಿಯುತ್ತಾ ದರ?

Published : May 18, 2025, 03:47 PM IST

ಭಾರತೀಯರಿಗೆ ಗುಡ್ ನ್ಯೂಸ್. ಕಳೆದ ಒಂದು ವಾರ ಅಂದರೆ ಮೇ.12ರಿಂದ ಮೇ.16ರ ವರೆಗೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 35,000 ರೂಪಾಯಿ ಇಳಿಕೆಯಾಗಿದೆ. ಮೇ.24ರ ವೇಳೆಗೆ ಇನ್ನೂ ಇಳಿಯುತ್ತಾ ಬಂಗಾರ ಬೆಲೆ? ಚಿನ್ನ ಖರೀದಿಸಲು ಇದು ಸೂಕ್ತ ಸಮಯವೇ ಅಥವಾ ಇನ್ನೊಂದು ವಾರ ಕಾಯಬೇಕಾ? 

PREV
16
ಗುಡ್ ನ್ಯೂಸ್, ಒಂದು ವಾರದಲ್ಲಿ ಚಿನ್ನದ ಬೆಲೆ 35,000 ರೂ ಕಡಿತ, ಇನ್ನೂ ಇಳಿಯುತ್ತಾ ದರ?

ಬಂಗಾರ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿ ದಾಖಲೆ ಬರೆದಿತ್ತು. ಚಿನ್ನ ಬಲು ದುಬಾರಿಯಾದ ಕಾರಣ ಭಾರತೀಯರು ನಿರಾಸೆಗೊಂಡಿದ್ದರು. ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಕಳದೆರಡು ದಿನ ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸವಿಲ್ಲ. ಆದರೆ ಕಳೆದೊಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದೀಗ ಚಿನ್ನದ ಬೆಲೆ ಸಹಜ ದರಕ್ಕೆ ಮರಳುತ್ತಿದೆ. ಕೈಗೆಟುಕದಂತಾಗಿದ್ದ ಬಂಗಾರ ಭರ್ಜರಿ ಇಳಿಕೆ ಕಾಣುವ ಮೂಲಕ ಹೊಸ ದಾಖಲೆ ಬರೆದಿದೆ.  

26

ಮೇ.12 ರಿಂದ ಮೇ.16ರ ಒಳಗೆ 24ಕಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 35,000 ರೂಪಾಯಿ ಇಳಿಕೆಯಾಗಿದೆ. ಅಂದರೆ 10 ಗ್ರಾಂ ಚಿನ್ನದಲ್ಲಿ 3,500 ರೂಪಾಯಿ ಇಳಿಕೆಯಾಗಿದೆ. ಇದಕ್ಕೆ ಕೆಲ ಅಂತಾರಾಷ್ಟ್ರೀಯ ಕಾರಣಗಳಿವೆ. ಹೀಗಾಗಿ ಈ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಿದೆ. ಇದೀಗ ಭಾರತೀಯರ ಪ್ರಶ್ನೆ, ಮುಂದಿನ ವಾರದಲ್ಲಿ ಅಂದರೆ ಮೇ.24ರೊಳಗೆ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುತ್ತಾ? ಇಲ್ಲಾ ಇದುವೇ ಚಿನ್ನ ಖರೀದಿಗೆ ಅಥವಾ ಹೂಡಿಕೆಗೆ ಸೂಕ್ತ ಸಮಯವೇ ಅನ್ನೋದು ಪ್ರಶ್ನೆ ಎದ್ದಿದೆ.ಇದಕ್ಕೆ ತಜ್ಞರು ಉತ್ತರಿಸಿದ್ದಾರೆ.

36

ಚಿನ್ನ ಹಾಗೂ ಬೆಳ್ಳಿ ಬೆಲೆ ಕಳೆದ ಒಂದು ವಾರದಲ್ಲಿ ಇಳಿಕೆಯಾಗಿದೆ. ಚಿನ್ನ ಶೇಕಡಾ 3.5ರಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ಶೇಕಡಾ 1 ರಷ್ಟು ಇಳಿಕೆಯಾಗಿದೆ. ಇದು ಕಳೆದ ಕೆಲ ತಿಂಗಳಲ್ಲಿ ಇಳಿಕೆಯಾದ ಗರಿಷ್ಟ ದರವಾಗಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕ ಹಾಗೂ ಚೀನಾ ನಡುವಿನ ತೆರಿಗೆ ಯುದ್ಧ ತಾರ್ಕಿಕ ಅಂತ್ಯಕಂಡಿದೆ. ಉಭಯ ದೇಶಗಳು ತೆರಿಗೆಯಲ್ಲಿನ ಏರಿಕೆಯನ್ನು ಮಾತುಕತೆ ಮೂಲಕ ಬಗೆ ಹರಿಸಿದ್ದಾರೆ. ಚೀನಾ ಹಾಗೂ ಅಮೆರಿಕಾ ಟ್ರೇಡಿಂಗ್‌ನಲ್ಲಿ ಆದ ಮಹತ್ತರ ಬದಲಾವಣೆಯಿಂದ ಚಿನ್ನದ ದರ ಇದೀಗ ಇಳಿಕೆಯಾಗಿದೆ.

46

90 ದಿನಗಳ ಅಮೆರಿಕ ಚೀನಾ ತೆರಿಗೆ ಯುದ್ದದಿಂದ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ. ಇದೀಗ ಉಭಯ ದೇಶಗಳ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದೆ. ಇದೀಗ ಅಮೆರಿಕ, ಚೀನಾ ಉತ್ಪನ್ನಗಳಿಗೆ ವಿಧಿಸಿದ್ದ ಶೇಕಡಾ 145ರ ತೆರಿಗೆಯನ್ನು ಕಡಿತಗೊಳಿಸಿ ಶೇಕಡಾ 30ಕ್ಕೆ ಇಳಿಕೆ ಮಾಡಿದೆ.  ಇತ್ತ ಚೀನಾ ಕೂಡ ಅಮೆರಿಕ ಮೇಲೆ ವಿಧಿಸಿದ್ದ ಶೇಕಡಾ 125ರ ತೆರಿಗೆಯನ್ನು ಇದೀಗ ಶೇಕಡಾ 10ಕ್ಕೆ ಇಳಿಸಿದೆ. ಉಭಯ ದೇಶಗಳ ನಡುವಿನ ಈ ಟ್ರೇಡ್ ಒಪ್ಪಂದ ಚಿನ್ನದ ದರದ ಮೇಲೆ ನೇರವಾಗಿ ಪರಿಣಾಮ ಬೀರಿದೆ.

56

ಇದರ ಜೊತೆಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನ ವಿರಾಮ ಕೂಡ ಚಿನ್ನದ ದರ ಇಳಿಕೆಯಲ್ಲಿ ನೆರವಾಗಿದೆ. ಇನ್ನೂ ಇಳಿಕೆಯಾಗುತ್ತಾ ಚಿನ್ನದ ದರ? ಅನ್ನೋ ಹಲವರ ಪ್ರಶ್ನೆಗೆ ತಜ್ಞರು ಕೆಲ ವಿಚಾರ ಮುಂದಿಟ್ಟಿದ್ದಾರೆ. ಚಿನ್ನದ ದರದಲ್ಲಿ ಮತ್ತಷ್ಟು ಇಳಿಕೆಯಾಗು ಸಾಧ್ಯತೆ ಇದೆ. ಆದರೆ ಇದಕ್ಕೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಅಂತ್ಯಗೊಳ್ಳಬೇಕು. ಈ ಯುದ್ಧ ಅಂತ್ಯಗೊಂಡರೆ ಚಿನ್ನದ ದರಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

66

ಮೇ.17 ಹಾಗೂ 18ರಂದು ಚಿನ್ನದ ದರದಲ್ಲಿ ವ್ಯತ್ಯಾಸವಾಗಿಲ್ಲ. ಸದ್ಯ ಭಾರತದಲ್ಲಿ 24 ಕಾರೆಟ್ ಚಿನ್ನದ  ದರ 100 ಗ್ರಾಂಗೆ  9,51,300 ರೂಪಾಯಿ. ಇನ್ನು 18 ಕಾರೆಟ್ ಚಿನ್ನದ ದರ 7,13,500 ರೂಪಾಯಿ. 22 ಕಾರೆಟ್ ಚಿನ್ನದ ದರ 8,72,000 ರೂಪಾಯಿ. ಇನ್ನು 10 ಗ್ರಾಂ 24 ಕಾರೆಟ್ ಚಿನ್ನದ ಬೆಲೆ 95,130 ರೂಪಾಯಿ ಆಗಿದೆ. 22 ಕಾರೆಟ್ 87,200 ರೂಪಾಯಿ ಹಾಗೂ 19 ಕಾರೆಟ್ ಚಿನ್ನದ ಬೆಲೆ 71,350 ರೂಪಾಯಿ ಆಗಿದೆ.  

Read more Photos on
click me!

Recommended Stories