ಜುಕರ್‌ಬರ್ಗ್‌ To ಜೆಕೆ ರೋಲಿಂಗ್‌...40 ವರ್ಷಕ್ಕೂ ಮುಂಚೆ ಕೋಟ್ಯಧಿಪತಿಗಳಾದ ವ್ಯಕ್ತಿಗಳಿವರು!

Published : Sep 04, 2023, 05:35 PM IST

ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಎಷ್ಟನೇ ವಯಸ್ಸಿನಲ್ಲಿ ಕೋಟ್ಯಧಿಪತಿ ಆಗಿದ್ದರೂ ಅನ್ನೋದು ನಿಮಗೆ ಗೊತ್ತಾ? ವೈದ್ಯ ದಂಪತಿಗಳ ಪುತ್ರನಾಗಿದ್ದ ಮಾರ್ಕ್‌ ಜುಕರ್‌ಬರ್ಗ್‌ ಫೇಸ್‌ಬುಕ್‌ ಸ್ಥಾಪನೆ ಮಾಡಿದ ಮೂರೇ ವರ್ಷದಲ್ಲಿ ಕೋಟ್ಯಧಿಪತಿ ಎನಿಸಿಕೊಂಡಿದ್ದ,

PREV
111
ಜುಕರ್‌ಬರ್ಗ್‌ To  ಜೆಕೆ ರೋಲಿಂಗ್‌...40 ವರ್ಷಕ್ಕೂ ಮುಂಚೆ ಕೋಟ್ಯಧಿಪತಿಗಳಾದ ವ್ಯಕ್ತಿಗಳಿವರು!

ಜೆಕೆ ರೋಲಿಂಗ್‌: 1997 ರಿಂದ 2007ರ ಅವಧಿಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಮಕ್ಕಳ ಫ್ಯಾಂಟಸಿ ಸಿರೀಸ್‌ ಆದ ಹ್ಯಾರಿ ಪಾಟರ್‌ನ ಲೇಖಕಿ ಜೆಕೆ ರೋಲಿಂಗ್‌ ಅಮೆರಿಕ ಮೂಲದವರು. 58 ವರ್ಷದ ಈಕೆ ತಮ್ಮ 38ನೇ ವರ್ಷಕ್ಕೆ ಕೋಟ್ಯಧಿಪತಿಯಾಗಿದ್ದರು.

211

ಸ್ಟೀವ್ ಬಾಲ್ಮರ್: 2000 ಇಸವಿಯಿಂದ 2014ರವರೆಗೂ ಮೈಕ್ರೋಸಾಫ್ಟ್‌ನ ಸಿಒಓ ಆಗಿದ್ದ ಸ್ಟೀವ್‌ ಬಾಲ್ಮರ್‌ ಇಂದು ವಿಶ್ವದ 6ನೇ ಶ್ರಿಮಂತ ವ್ಯಕ್ತಿ. 67 ವರ್ಷದ ಇವರು ತಮ್ಮ 38ನೇ ವರ್ಷದಲ್ಲಿ ಬಿಲಿಯನೇರ್‌ ಆಗಿದ್ದರು.

311

ಲೆಬ್ರಾನ್‌ ಜೇಮ್ಸ್‌: ಅಮೆರಿಕದ ಖ್ಯಾತ ಬ್ಯಾಸ್ಕೆಟ್‌ಬಾಲ್‌ ಆಟಗಾರ. 38 ವರ್ಷ ಲೆಬ್ರಾನ್‌ ಜೇಮ್ಸ್‌ ತಮ್ಮ 37ನೇ ವರ್ಷದಲ್ಲಿ ಕೋಟ್ಯಧಿಪತಿ ಎನಿಸಿಕೊಂಡಿದ್ದರು.

411

ಜೆಫ್‌ ಬೆಜೋಸ್‌: ಅಮೆಜಾನ್‌ ಕಂಪನಿಯ ಸಂಸ್ಥಾಪಕ ಜೆಫ್‌ ಬೆಜೋಸ್‌ ಇಂದು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದಾರೆ. 59 ವರ್ಷದ ಬೆಜೋಸ್‌ ತಮ್ಮ 35ನೇ ವರ್ಷದಲ್ಲಿ ಕೋಟ್ಯಧಿಪತಿ ಎನಿಸಿದ್ದರು.

511

ಟೈಗರ್‌ ವುಡ್ಸ್‌: ಅಮೆರಿಕದ ವಿಶ್ವವಿಖ್ಯಾತ ಗಾಲ್ಫ್‌ ಆಟಗಾರ ಟೈಗರ್‌ ವುಡ್ಸ್‌. 47 ವರ್ಷದ ಟೈಗರ್‌ ವುಡ್ಸ್‌ ತಮ್ಮ 33ನೇ ವರ್ಷದಲ್ಲಿ ಕೋಟ್ಯಧಿಪತಿ ಸ್ಥಾನಕ್ಕೆ ಏರಿದ್ದರು.

611

ರಿಹಾನ್ನಾ: ಬಾರ್ಬಡೋಸ್‌ ಮೂಲದ ರಿಹಾನ್ನಾ, ಜಗತ್ಪ್ರಸಿದ್ಧ ಸಿಂಗರ್‌. 35 ವರ್ಷದ ಈಕೆ ತನ್ನ 33ನೇ ವರ್ಷದಲ್ಲಿ ಕೋಟ್ಯಧಿಪತಿ ಎನಿಸಿಕೊಂಡಿದ್ದರು,

711

ಬಿಲ್‌ ಗೇಟ್ಸ್‌: ಮೈಕ್ರೋಸಾಫ್ಟ್‌ನ ಸಂಸ್ಥಾಪಕ ಬಿಲ್‌ ಗೇಟ್ಸ್‌, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲೊ ಒಬ್ಬರು. 67 ವರ್ಷದ ಬಿಲ್‌ ಗೇಟ್ಸ್‌ ತಮ್ಮ 31ನೇ ವರ್ಷದಲ್ಲಿ ಬಿಲಿಯನೇರ್‌ ಎನಿಸಿಕೊಂಡಿದ್ದರು.

811

ಸೆರ್ಗಿ ಬ್ರಿನ್‌: ಅಮೆರಿಕದ ಬಿಲಿಯನೇರ್‌ ಸೆರ್ಗಿ ಬ್ರಿನ್‌ಗೆ ಈಗ 50 ವರ್ಷ. ಲ್ಯಾರಿ ಪೇಜ್‌ ಜೊತೆಗೂ ಗೂಗಲ್‌ ಸಂಸ್ಥೆಯನ್ನು ಕಟ್ಟಿದ ಇವರು, ತಮ್ಮ 31ನೇ ವರ್ಷದಲ್ಲಿ ಬಿಲಿಯನೇರ್‌ ಆಗಿದ್ದರು.

911

ಲ್ಯಾರಿ ಪೇಜ್‌: ಸರ್ಗಿ ಬ್ರಿನ್‌ ಜೊತೆಗೂ ಗೂಗಲ್‌ ಸಂಸ್ಥೆಯನ್ನು ಕಟ್ಟಿದ ಲ್ಯಾರಿ ಪೇಜ್‌ಗೆ ಈಗ 50 ವರ್ಷ. ತಮ್ಮ 30ನೇ ವರ್ಷದಲ್ಲಿ ಪೇಜ್‌ ಬಿಲಿಯನೇರ್‌ ಎನಿಸಿಕೊಂಡಿದ್ದರು,

1011

ಇವಾನ್‌ ಸ್ಪೀಗಲ್‌: ಇಂದು ಜನಮಾನಸದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವ ಸ್ನ್ಯಾಪ್‌ಚಾಟ್‌ನ ಸಂಸ್ಥಾಪಕ ಇವಾನ್‌ ಸ್ಪೀಗಲ್‌. 33 ವರ್ಷದ ಸ್ಪೀಗಲ್‌ ತಮ್ಮ 25ನೇ ವರ್ಷದಲ್ಲಿಯೇ ಬಿಲಿಯನೇರ್‌ ಆಗಿದ್ದರು.

1111

ಮಾರ್ಕ್‌ ಜುಕರ್‌ಬರ್ಗ್‌: ಜಾಗತಿಕ ಸೋಶಿಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌. 39 ವರ್ಷದ ಜುಕರ್‌ಬರ್ಗ್‌ ತಮ್ಮ 23ನೇ ವಯಸ್ಸಿನಲ್ಲಿಯೇ ಬಿಲಿಯನೇರ್ ಆಗಿದ್ದರು.

Read more Photos on
click me!

Recommended Stories