ಭಾರತದಿಂದ ರಫ್ತಾಗುವ ಟಾಪ್ 10 ಕೃಷಿ ಸಂಬಂಧಿ ಉತ್ಪನ್ನಗಳಿವು..! ಎಮ್ಮೆ ಮಾಂಸ ರಫ್ತಿನಲ್ಲೂ ಭಾರತ ಮುಂದು..!

First Published | Sep 4, 2023, 4:21 PM IST

ಬೆಂಗಳೂರು: ಅಭಿವೃದ್ದಿಶೀಲ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಭಾರತ ಇಂದಿಗೂ ಕೃಷಿ ಪ್ರಧಾನ ರಾಷ್ಟ್ರವಾಗಿಯೇ ಗುರುತಿಸಿಕೊಂಡಿದೆ. ದೇಶದ ಅರ್ಧದಷ್ಟು ಜನಸಂಖ್ಯೆ ಇಂದಿಗೂ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಅವಲಂಭಿಸಿದ್ದಾರೆ. 2022-23ರ ಸಾಲಿನಲ್ಲಿ ಭಾರತವು ವಿದೇಶಗಳಿಗೆ ರಫ್ತು ಮಾಡಿದ ಟಾಪ್ 10 ಕೃಷಿ ಸಂಬಂಧಿತ ಉತ್ಫನ್ನಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

* ಇದು ಕೃಷಿ ಹಾಗೂ ಆಹಾರ ಉತ್ಫನ್ನ ಸಂಸ್ಕರಣ ಅಭಿವೃದ್ದಿ ರಫ್ತು ಇಲಾಖೆ ನೀಡಿದ ಅಧಿಕೃತ ಅಂಕಿ-ಅಂಶಗಳಾಗಿವೆ.
 

1. ಬಾಸ್‌ಮತಿಯೇತರ ಅಕ್ಕಿ: 23.1%

ಭಾರತದಲ್ಲಿ ಅತಿಹೆಚ್ಚು ಆಹಾರದ ರೂಪದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಈ ಪೈಕಿ ಬಾಸ್‌ಮತಿಯೇತರ ಅಕ್ಕಿಯನ್ನು ಭಾರತ ಶೇ.23.1% ವಿದೇಶಗಳಿಗೆ ರಫ್ತು ಮಾಡುವ ಮೂಲಕ ಮೊದಲ ಸ್ಥಾನ ಕಾಯ್ದುಕೊಂಡಿದೆ.

2. ಬಾಸ್‌ಮತಿ ಅಕ್ಕಿ: 17.4%

ಭಾರತದ ನಂ.1 ಆಹಾರಕ್ಕೆ ಬಳಸುವ ಅಕ್ಕಿಯೆಂದರೆ ಅದು ಬಾಸ್‌ಮತಿ ಅಕ್ಕಿ. ಕೃಷಿ ಉತ್ಫನ್ನದ ಒಟ್ಟು ರಫ್ತಿನ ಪೈಕಿ ಶೇ 17.4% ಪ್ರಮಾಣವನ್ನು ಭಾರತ ವಿದೇಶಗಳಿಗೆ ಬಾಸ್‌ಮತಿ ಅಕ್ಕಿಯನ್ನು ಕಳೆದ ವರ್ಷ ರಫ್ತು ಮಾಡಿದೆ

Tap to resize

3. ಎಮ್ಮೆಯ ಮಾಂಸ: 11.6%

ಎಮ್ಮೆಯನ್ನು ಹೈನುಗಾರಿಕೆಗೆ ಮಾತ್ರವಲ್ಲದೇ ಮಾಂಸ ಉತ್ಫಾದನೆಗೂ ಸಾಕುವವರ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಕಳೆದ ವರ್ಷ ತಮ್ಮ ಕೃಷಿ ಉತ್ಫನ್ನದ ರಫ್ತಿನ ಪೈಕಿ 11.6% ಮೌಲ್ಯದ ಎಮ್ಮೆ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಿದೆ
 

4. ಗೋಧಿ: 5.5%

ಉತ್ತರ ಭಾರತೀಯರ ಪ್ರಮುಖ ಆಹಾರ ಪದಾರ್ಥವಾದ ಗೋಧಿಯನ್ನು ರಫ್ತು ಮಾಡುವುದರಲ್ಲೂ ಭಾರತ ಹಿಂದೆ ಬಿದ್ದಿಲ್ಲ. ಕಳೆದ ವರ್ಷ ಭಾರತ ತಮ್ಮ ಕೃಷಿ ಉತ್ಫನ್ನದ ರಫ್ತಿನ ಪೈಕಿ 5.5% ಮೌಲ್ಯದ ಗೋಧಿಯನ್ನು ವಿದೇಶಗಳಿಗೆ ರಫ್ತು ಮಾಡಿದೆ.
 

5. ಮೆಕ್ಕೆಜೋಳ: 4.1%

ಮೆಕ್ಕೆಜೋಳ ಕೂಡಾ ಕೃಷಿ ಉತ್ಫನ್ನಗಳ ಪೈಕಿ ಪ್ರಮುಖವಾದುದ್ದಾಗಿದೆ. ಕಳೆದ ವರ್ಷದ ಭಾರತದ ಕೃಷಿ ಉತ್ಫನ್ನ ರಫ್ತಿನ ಮೌಲ್ಯದ ಪೈಕಿ 4.1% ಮೌಲ್ಯದ ಮೆಕ್ಕೆಜೋಳವನ್ನು ನಮ್ಮ ದೇಶ ವಿದೇಶಗಳಿಗೆ ರಫ್ತು ಮಾಡಿದೆ.
 

6. ಸಂಸ್ಕರಿಸಿದ ಆಹಾರೋತ್ಫನ್ನಗಳು: 4%

ಕೃಷಿ ಉತ್ಫನ್ನಗಳನ್ನು ಬಳಸಿಕೊಂಡು ಸಂಸ್ಕರಿಸಿದ ಆಹಾರೋತ್ಫನ್ನಗಳಾದ ಸಾಸ್, ಕೆಚೆಪ್‌, ಸಾಫ್ಟ್ ಡ್ರಿಂಕ್ಸ್‌ಗಳು, ಪಾನ್ ಮಸಾಲಾ, ಅಡಿಕೆಯ ಉತ್ಫನ್ನಗಳು ಇತ್ಯಾದಿಗಳಾಗಿದ್ದು, ಕಳೆದ ವರ್ಷ 4% ಮೌಲ್ಯದ ಸಂಸ್ಕರಿಸಿದ ಆಹಾರ ಉತ್ಫನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ.

7. ನೆಲಗಡಲೆ: 3%

ಬಡವರ ಪಾಲಿನ ಬಾದಾಮಿ ಎಂದೇ ಕರೆಸಿಕೊಳ್ಳುವ ಅತಿಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುವ ಶೇಂಗಾ ರಫ್ತಿನಲ್ಲೂ ಭಾರತ ಮುಂದಿದೆ. ಕಳೆದ ವರ್ಷ ಭಾರತ ಶೇ 3% ಮೌಲ್ಯದ ಶೇಂಗಾವನ್ನು ವಿದೇಶಗಳಿಗೆ ರಫ್ತು ಮಾಡಿದೆ.

8. ಸಿರೆಲ್ ಉತ್ಫನ್ನಗಳು: 2.7%

ಗೋದಿ, ಕಾರ್ನ್‌, ಓಟ್ಸ್, ಸಕ್ಕರೆ ಹಾಗೂ ಅಕ್ಕಿ ಹಿಟ್ಟು ಬಳಸಿ ತಯಾರು ಮಾಡುವ ಸಿರೆಲ್ ಉತ್ಫನ್ನಗಳ ರಫ್ತು ಮಾಡುವುದರಲ್ಲೂ ಭಾರತ ಮುಂದಿದೆ. ಭಾರತ ಸಿರೆಲ್ ಉತ್ಫನ್ನಗಳನ್ನು 2.7% ಮೌಲ್ಯದ ಉತ್ಫನ್ನಗಳನ್ನು ರಫ್ತು ಮಾಡಿದೆ.
 

9. ದ್ವಿದಳ ಧಾನ್ಯಗಳು: 2.4%


ಒಣ ಬೀನ್ಸ್‌, ಅವರೆಕಾಳು, ಕಡಲೆಬೀಜ, ಬಟಾಣಿಯಂತಹ ಧಾನ್ಯಗಳನ್ನು ದ್ವಿದಳ ಧಾನ್ಯಗಳೆಂದು ಕರೆಯಲಾಗುತ್ತದೆ. ಭಾರತ ಕಳೆದ ವರ್ಷ 2.4% ಮೌಲ್ಯದ ದ್ವಿದಳ ಧಾನ್ಯಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ.

10.ಸಂಸ್ಕರಿಸಿದ ತರಕಾರಿಗಳು: 2.3%

ಸಂಸ್ಕರಣೆ ಮಾಡಿದ ತರಕಾರಿಗಳು ವಿದೇಶಗಳಿಗೆ ರಫ್ತು ಮಾಡುತ್ತಾ ಬಂದಿದೆ ಭಾರತ. ತಾಜಾ ಹಣ್ಣುಗಳು ಹಾಗು ವಿವಿಧ ತರಕಾರಿಗಳನ್ನು ಸೂಕ್ತವಾಗಿ ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡುತ್ತಾ ಬಂದಿದ್ದು, ಕಳೆದ ವರ್ಷ 2.3% ಮೌಲ್ಯದ ಸಂಸ್ಕರಿತ ತರಕಾರಿಗಳನ್ನು ರಫ್ತು ಮಾಡಿದೆ.
 

11. ಇನ್ನಿತರೇ ಕೃಷಿ ಉತ್ಫನ್ನಗಳು: 23.9%

ಇನ್ನು ಮೇಲ್ಕಂಡ ಉತ್ಫನ್ನಗಳನ್ನು ಹೊರತುಪಡಿಸಿ ಶೇ.23.9% ಮೌಲ್ಯದ ಇನ್ನಿತರ ಕೃಷಿ ಉತ್ಫನ್ನಗಳನ್ನು ಭಾರತ ವಿದೇಶಗಳಿಗೆ ರಫ್ತು ಮಾಡಿದೆ.

Latest Videos

click me!