ಲಕ್ಕಿ ಭಾಸ್ಕರ್ ಚಿತ್ರಕ್ಕೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದುಲ್ಕರ್ ಸಲ್ಮಾನ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್‌ಲ್ಲೂ ಉತ್ತಮ ಗಳಿಕೆ ಮಾಡಿದೆ. ಈ ಚಿತ್ರದ ಕ್ಲೈಮಾಕ್ಸ್‌ನಲ್ಲಿ ಹೀರೋ ತನ್ನ ಪತ್ನಿಗೆ ಅಮೆರಿಕನ್ ಎಕ್ಸ್‌ಪ್ರೆಸ್ ಸಂಸ್ಥೆಯ ವಿಶೇಷ ಕ್ರೆಡಿಟ್ ಕಾರ್ಡ್ ನೀಡುತ್ತಾನೆ. ಬಳಿಕ ಯಾವುದೇ ಲಿಮಿಟ್ ಇಲ್ಲದೆ ಬಳಸಬುಹುದು ಎನ್ನುತ್ತಾನೆ. ಅಷ್ಟಕ್ಕೂ ಈ ಅಮೆರಿಕನ್ ಎಕ್ಸ್‌ಪ್ರೆಸ್ ಬ್ಲಾಕ್ ಅಮೆಕ್ಸ್ ಕಾರ್ಡ್ ಎಲ್ಲರಿಗೂ ಸಿಗುತ್ತಾ, ಇದಕ್ಕೆ ಯಾವುದೇ ಲಿಮಿಟ್ ಇಲ್ಲಾ ಎಂದು ಹೇಳುವುದು ಯಾಕೆ? ಇದರ ಸವಲತ್ತುಗಳೇನು?
ಭಾರತದಲ್ಲಿ ಬಹುತೇಕರಿಗೆ ಪ್ರತಿ ದಿನ ಕ್ರೆಡಿಟ್ ಬೇಕಾ ಎಂದು ಕರೆ ಬರುತ್ತದೆ. ಶಾಪಿಂಗ್ ಮಾಲ್ ಸೇರಿದಂತೆ ಕೆಲ ಶಾಪಿಂಗ್ ಸ್ಥಳಗಳಲ್ಲಿ ಬ್ಯಾಂಕ್ ಉದ್ಯೋಗಿಗಳು ಕ್ರಿಡಿಟ್ ಕಾರ್ಡ್ ಬೇಕಾ ಎಂದು ನಿಂತಿರುತ್ತಾರೆ. ಭಾರತ ಮಾತ್ರವಲ್ಲ ಯಾವುದೇ ದೇಶದಲ್ಲಿ ಕ್ರೆಡಿಟ್ ಕಾರ್ಡ್ ಪಡೆಯುವುದು ದೊಡ್ಡ ವಿಚಾರವಲ್ಲ. ಆದರೆ ಅಮೆರಿಕನ್ ಎಕ್ಸ್‌ಪ್ರೆಸ್ ಸ್ಪೆಷಲ್ ಕಾರ್ಡ್ ಎಲ್ಲರಿಗೂ ಸಿಗುವುದಿಲ್ಲ.
ಲಕ್ಕಿ ಭಾಸ್ಕರ್ ಚಿತ್ರದ ಕೊನೆಯ ದೃಶ್ಯದಲ್ಲಿ ಹೀರೋ ಅಮೆರಿಕನ್ ಎಕ್ಸ್‌ಪ್ರೆಸ್‌ನ Amex ಸೆಂಚೂರಿಯನ್ ಬ್ಲಾಕ್ ಕಾರ್ಡ್ ಪತ್ನಿಗೆ ನೀಡುತ್ತಾನೆ. ಬ್ಲಾಕ್, ಪ್ಲಾಟಿನಂ, ಗೋಲ್ಡ್ ಸೇರಿದಂತೆ ಕೆಲ ಸ್ಪೆಷಲ್ ಕಾರ್ಡನ್ನು ಅಮೆರಿಕನ್ ಎಕ್ಸ್‌ಪ್ರೆಸ್ ನೀಡುತ್ತಿದೆ. ಈ ಕಾರ್ಡ್ ನೀವು ಬೇಕು ಎಂದರೂ ಸಿಗುವುದಿಲ್ಲ. ಇದಕ್ಕೆ ಕೆಲ ಅರ್ಹತೆಗಳಿವೆ. ಈ ಮಾನದಂಡಗಳು ಇದ್ದರೆ ಮಾತ್ರ ಸ್ಪೆಷಲ್ ಕ್ರಿಡಿಟ್ ಕಾರ್ಡ್ ನಿಮಗೆ ಸಿಗಲಿದೆ.
ಹೊಸದಾಗಿ Amex ಸೆಂಚೂರಿಯನ್ ಬ್ಲಾಕ್ ಕಾರ್ಡ್ ಪಡೆಯಲು ನೀವು ಅಪ್ಲೈ ಮಾಡಲು ಸಾಧ್ಯವಿಲ್ಲ. ನಿಮಗೆ ಅಮೆರಿಕನ್ ಎಕ್ಸ್‌ಪ್ರೆಸ್ ಆಮಂತ್ರಣ ಕಳುಹಿಸಿದರೆ ಮಾತ್ರ. ಆದರೆ ಈಗಾಗಲೇ ಅಮೆರಿಕನ್ ಎಕ್ಸ್‌ಪ್ರೆಸ್ ಇತರ ನಾರ್ಮಲ್ ಕಾರ್ಡ್ ಇರುವ ಗ್ರಾಹಕರು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಹುದು. ಇನ್ನುಳಿದಂತೆ ಕಂಪನಿ ಆಮಂತ್ರಣ ನೀಡಿದವರಿಗೆ ಮಾತ್ರ ಕಾರ್ಡ್ ಸಿಗಲಿದೆ.
ಈ ಕಾರ್ಡ್ ಪಡೆಯಲು ಪ್ರಮುಖ ಮಾನದಂಡಗಳ ಪೈಕಿ ವಾರ್ಷಿಕ ನಿಮ್ಮ ಖಾತೆಯಲ್ಲಿ ಕನಿಷ್ಠ 1.5 ಕೋಟಿ ರೂಪಾಯಿ ವ್ಯವಾಹರ ನಡೆಯಬೇಕು. ಇದಕ್ಕಿಂತ ಒಂದು ರೂಪಾಯಿ ಕಡಿಮೆ ಇದ್ದರೂ ಅರ್ಹರಲ್ಲ. ಇನ್ನು ಅದರ ಫೀಸ್, ಇತರ ಶುಲ್ಕಗಳು ದುಬಾರಿಯಾಗಿದೆ. ಇವೆಲ್ಲವನ್ನೂ ಭರಿಸುವ ಶಕ್ತಿ ಕಾರ್ಡ್ ಪಡೆಯುವಾತನಿಗಿರಬೇಕು.
ಈ ಕಾರ್ಡ್ ಪಡೆಯುವಾಗ ಬರೋಬ್ಬರಿ 8.47 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಹೌದು, ಇದು ಒನ್ ಟೈಮ್ ಶುಲ್ಕವಾಗಿದೆ. ಈ ಮೊತ್ತ ನಿಮ್ಮ ಖಾತೆಗೆ ಸೇರುವುದಿಲ್ಲ. ಇದು ಅಮೆರಿಕನ್ ಎಕ್ಸ್‌ಪ್ರೆಸ್ ಅಮೆಕ್ಸ್ ಸ್ಪೆಷಲ್ ಕಾರ್ಡ್‌ನಲ್ಲಿ ಸೇವೆಗೆ ನೀಡಬೇಕಾದ ಶುಲ್ಕವಾಗಿದೆ. ಇದು ಕಡ್ಡಾಯ ಶುಲ್ಕವಾಗಿದೆ. ಇನ್ನು ವಾರ್ಷಿಕ ಶುಲ್ಕ 4.23 ಲಕ್ಷ ರೂಪಾಯಿ ಪಾವತಿಸಬೇಕು.ಮೊದಲ ವರ್ಷ ಶುಲ್ಕವಾಗಿ 12.70 ಲಕ್ಷ ರೂಪಾಯಿ ಪಾವತಿಸಬೇಕು.
ಇಷ್ಟು ದುಡ್ಡು ಪಾವತಿಸಿದರೆ ಬಳಕಿ ಯಾವುದೇ ವಸ್ತು ಖರೀದಿಸಿದರೂ ಇಎಂಐ ಅಥವಾ ಬಿಲ್ ಪಾವತಿಸಬೇಕು, ಮತ್ಯಾಕೆ ಈ ಕಾರ್ಡ್ ಎಂದು ಪ್ರಶ್ನೆ ಮೂಡುವುದು ಸಹಜ. ಆದರೆ ಈ ಕಾರ್ಡ್ ಇದ್ದವರಿಗೆ ಅಮೆರಿಕನ್ ಎಕ್ಸ್‌ಪ್ರೆಸ್ ಕೆಲ ವಿಶೇಷ ಸವಲತ್ತು ನೀಡಲಿದೆ. ಯಾವುದೇ ದೇಶದಲ್ಲಿದ್ದರೂ ಅಮೆರಿಕನ್ ಎಕ್ಸ್‌ಪ್ರೆಸ್ ತಡೆ ರಹಿತ ಸೇವೆ ನೀಡಲಿದೆ. ಅಮೆರಿಕನ್ ಎಕ್ಸ್‌ಪ್ರೆಸ್ ವಿಶೇಷ ಕಾರ್ಡ್ ಮೂಲಕ ಏನೇ ಬುಕ್ ಮಾಡಿದರೂ ನೀವು ಎಲ್ಲೆ ಇದ್ದರೂ ಅಲ್ಲಿಗೆ ತಲುಪಿಸುತ್ತಾರೆ. ದಟ್ಟ ಕಾಡಿನಲ್ಲಿದ್ದರೂ ತಲುಪಿಸಲೇಬೇಕು.
ಕಾರ್ಡ್ ಹೋಲ್ಡರ್ ಹಾಗೂ ಕುಟುಬಂಕ್ಕೆ ವಿಮೆ ಸೌಲಭ್ಯ ಲಭ್ಯವಾಗಲಿದೆ. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಇತರ ವೆಚ್ಚಗಳು ವಿಮೆ ಮೂಲಕ ಭರಿಸಲು ಸಾಧ್ಯವಾಗುತ್ತದೆ. ಇನ್ನು ಐಷಾರಾಮಿ ಹೊಟೆಲ್, ವಿಮಾನ ಪ್ರಯಾಣ ಸೇರಿದಂತೆ ಹಲವು ಸವಲತ್ತುಗಳಲ್ಲಿ ವಿಶೇಷ ಆದ್ಯತೆ, ಡಿಸ್ಕೌಂಟ್ ಹಾಗೂ ಉಚಿತವಾಗಿಯೂ ನೀಡಲಿದೆ.
ಅಮೆರಿಕನ್ ಎಕ್ಸ್‌ಪ್ರೆಸ್ ಸ್ಪೆಷಲ್ ಕಾರ್ಡ್ ವಿಐಪಿ ಸ್ಟೇಟಸ್ ನೀಡಲಿದೆ. ನಿಮಗೆ ಹಲವು ಪ್ರದೇಶಗಳಿಗೆ ಎಂಟ್ರಿ ಸಿಗಲಿದೆ. ವೇದಿಕೆಯಲ್ಲಿ ಸ್ಥಾನ ಸಿಗಲಿದೆ. ಪ್ರತಿಷ್ಠಿತ ಪಟ್ಟ ನೀಡಲಿದೆ. ಕೆಲ ಐಷಾರಾಮಿ ಹೊಟೆಲ್ ಸೇರಿದಂತೆ ಕೆಲ ಲಕ್ಷುರಿ ಸ್ಥಳಗಳಿಗೆ ಬುಕ್ ಮಾಡಿ, ಅಥವಾ ಟಿಕೆಟ್ ಖರೀದಿಸಿ ಹೋಗಬೇಕೆಂದಿಲ್ಲ, ಈ ಕಾರ್ಡ್ ಇದ್ದರೆ ಉಚಿತ ಪ್ರವೇಶ ನೀಡಲಾಗುತ್ತದೆ.