ಒಂದು ಕಾಲದಲ್ಲಿ ಸಾಲ ಪಡೆಯುವುದು ದೊಡ್ಡ ಪ್ರಕ್ರಿಯೆಯಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಸಾಲ ಪ್ರಕ್ರಿಯೆ ಸುಲಭವಾಗಿದೆ. ಸಾಮಾನ್ಯ ಜನರು ಸಹ ಸುಲಭವಾಗಿ ಸಾಲ ಪಡೆಯುವ ಅವಕಾಶ ಸಿಕ್ಕಿದೆ. ನಾವು ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಿದ್ದೇವೆ ಎಂಬುದರ ಆಧಾರದ ಮೇಲೆ ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ. ಕೃಷಿಗಾಗಿ ಸಾಲ ಪಡೆಯುವ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಹಾಗಲ್ಲದೆ ವೈಯಕ್ತಿಕ ಸಾಲ, ಗೃಹ ಸಾಲ ಪಡೆದರೆ ಬಡ್ಡಿ ದರ ಹೆಚ್ಚಾಗಿರುತ್ತದೆ. ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಬಡ್ಡಿಗೆ ಸಂಬಂಧಿಸಿದ ನಿಯಮಗಳು, ಸಬ್ಸಿಡಿಗಳು ವಿಭಿನ್ನವಾಗಿವೆ.