ಸ್ವಿಗ್ಗಿ, ಜೊಮಾಟೋಗೆ ರಾಜ್ಯ ಸರ್ಕಾರದ ಬರೆ, ಶೇ.1ರಷ್ಟು ಕಲ್ಯಾಣ ಶುಲ್ಕ ವಿಧಿಸಲು ಅಧಿಸೂಚನೆ!

Published : Feb 17, 2026, 01:29 PM IST

karnataka govt notifies 1 percent welfare fee ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಶುಲ್ಕವನ್ನು ಅಧಿಸೂಚಿಸಿದೆ. ಇದರ ಅಡಿಯಲ್ಲಿ, ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್‌ನಂತಹ ಅಗ್ರಿಗೇಟರ್‌ಗಳು ಪ್ರತಿ ವಹಿವಾಟಿನ ಮೇಲೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

PREV
18

ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರ ಕಲ್ಯಾಣ ಶುಲ್ಕದ ಪ್ರಮಾಣದ ಅಧಿಸೂಚನೆ ಹೊರಡಿಸಿದ್ದು, ವಿವಿಧ ಅಗ್ರಿಗೇಟರ್‌ ವೇದಿಕೆಗಳು ಗಿಗ್ ಕಾರ್ಮಿಕರ ಕಲ್ಯಾಣ ನಿಧಿಗೆ ಕೊಡುಗೆಯಾಗಿ ಈ ಹಣವನ್ನು ಪಾವತಿ ಮಾಡಬೇಕಿದೆ.

28

ಇದರ ನಂತರ, ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್ ಮುಂತಾದ ಅಗ್ರಿಗೇಟರ್‌ ಫ್ಲಾಟ್‌ಫಾರ್ಮ್‌ಗಳು ಫೆಬ್ರವರಿ 13 ರಿಂದ ಗಿಗ್ ಕಾರ್ಮಿಕರ ಮಂಡಳಿಗೆ ಅಗತ್ಯವಾದ ಕಲ್ಯಾಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಂಡಳಿಯ ನೇತೃತ್ವವನ್ನು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ವಹಿಸಿದ್ದಾರೆ.

38

ಫೆಬ್ರವರಿ 13 ರಂದು ಗೆಜೆಟ್‌ನಲ್ಲಿ ಪ್ರಕಟವಾದ ಸರ್ಕಾರಿ ಆದೇಶದ ಪ್ರಕಾರ ರೈಡ್-ಹೇಲಿಂಗ್ ಸರ್ವೀಸ್‌ಗಳು, ಆಹಾರ ಮತ್ತು ವಿತರಣೆ ಮತ್ತು ಲಾಜಿಸ್ಟಿಕಲ್ ಸೇವೆಗಳಿಗೆ ವಿಭಿನ್ನ ಪ್ರಮಾಣದ ಕಲ್ಯಾಣ ಶುಲ್ಕವನ್ನು ನಿರ್ದಿಷ್ಟಪಡಿಸಿದೆ. ಮೂಲ ಕಲ್ಯಾಣ ಶುಲ್ಕವು ಪ್ರತಿ ವಹಿವಾಟಿಗೆ ಎಲ್ಲಾ ರೀತಿಯ ಅಅಗ್ರಿಗೇಟರ್‌ಗಳಿಗೆ ಏಕರೂಪದ 1% ಆಗಿದ್ದರೆ, ಪ್ರತಿ ವಹಿವಾಟಿನ ಮಿತಿಯು ವಿವಿಧ ರೀತಿಯ ಸೇವೆಗಳು ಮತ್ತು ವಾಹನಗಳಿಗೆ ಬದಲಾಗುತ್ತದೆ.

48

ಸ್ವಿಗ್ಗಿ, ಜೊಮಾಟೊ ಮುಂತಾದ ಫುಡ್‌ ಮತ್ತು ಡೆಲಿವರಿ ಸೇವೆಗಳನ್ನು (ದ್ವಿಚಕ್ರ ವಾಹನಗಳು) ಒದಗಿಸುವ ಅಗ್ರಿಗೇಟರ್‌ಗಳ ಮೇಲೆ ಸರ್ಕಾರ 0.50 ರೂ.ಗಳ ಮಿತಿಯನ್ನು ವಿಧಿಸಿದೆ.

58

ರೈಡ್-ಹೇಲಿಂಗ್ ಸರ್ವೀಸ್‌ಗಳನ್ನು ಒದಗಿಸುವ ಓಲಾ, ಉಬರ್‌ನಂತಹ ಅಗ್ರಿಗೇಟರ್‌ಗಳ, ದ್ವಿಚಕ್ರ ವಾಹನಗಳಿಗೆ ಗರಿಷ್ಠ 0.50 ರೂ., ತ್ರಿಚಕ್ರ ವಾಹನಗಳಿಗೆ ಗರಿಷ್ಠ 0.75 ರೂ. ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ಗರಿಷ್ಠ 1 ರೂ. ಶುಲ್ಕ ವಿಧಿಸಲಾಗುತ್ತದೆ.

68

ಜೆಪ್ಟೊ, ಬ್ಲಿಂಕಿಟ್ ಮುಂತಾದ ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುವ ಅಗ್ರಿಗೇಟರ್‌ಗಳಿಗೆ, ದ್ವಿಚಕ್ರ ವಾಹನಗಳಿಗೆ ಗರಿಷ್ಠ 0.50 ರೂ., ತ್ರಿಚಕ್ರ ವಾಹನಗಳಿಗೆ ಗರಿಷ್ಠ 0.75 ರೂ., ಲಘು ವಾಣಿಜ್ಯ ವಾಹನಗಳಿಗೆ ಗರಿಷ್ಠ 1 ರೂ. ಮತ್ತು ಭಾರೀ ವಾಣಿಜ್ಯ ವಾಹನಗಳಿಗೆ ಗರಿಷ್ಠ 1.5 ರೂ. ಮಿತಿ ವಿಧಿಸಲಾಗಿದೆ.

78

ಇ-ಮಾರ್ಕೆಟ್‌ ಸರ್ವೀಸ್‌ಗಳ, ದ್ವಿಚಕ್ರ ವಾಹನಗಳಿಗೆ ಗರಿಷ್ಠ 0.5 ರೂ., ತ್ರಿಚಕ್ರ ವಾಹನಗಳಿಗೆ ಗರಿಷ್ಠ 0.75 ರೂ. ಮತ್ತು ನಾಲ್ಕು ಚಕ್ರ ವಾಹನಗಳಿಗೆ ಗರಿಷ್ಠ 1 ರೂ., ವೃತ್ತಿಪರ ಚಟುವಟಿಕೆ ಪೂರೈಕೆದಾರರಿಗೆ ಗರಿಷ್ಠ 1.5 ರೂಪಾಯಿ ನಿಗದಿ ಮಾಡಲಾಗಿದೆ.

88

ಕರ್ನಾಟಕ ಫ್ಲಾಟ್‌ಫಾರ್ಮ್‌ ಬೇಸ್ಡ್‌ ಗಿಗ್ ವರ್ಕರ್ಸ್ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ, 2025 ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಪರಿಶೀಲಿಸಲು ಕಲ್ಯಾಣ ಮಂಡಳಿ ಮತ್ತು ಈ ಉಪಕ್ರಮಗಳಿಗೆ ಹಣಕಾಸು ಒದಗಿಸುವ ಕಲ್ಯಾಣ ನಿಧಿಯನ್ನು ರಚಿಸುವುದನ್ನು ಕಡ್ಡಾಯಗೊಳಿಸುತ್ತದೆ. ಕಲ್ಯಾಣ ನಿಧಿಗೆ ನೀಡುವ ಕೊಡುಗೆಗಳಲ್ಲಿ ಅಗ್ರಿಗೇಟರ್‌ಗಳು ಪಾವತಿಸುವ ಕಲ್ಯಾಣ ಶುಲ್ಕ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನಗಳು ಮತ್ತು ಗಿಗ್ ಕೆಲಸಗಾರರ ವೈಯಕ್ತಿಕ ಕೊಡುಗೆಗಳು ಸೇರಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories