ಹೀಗಿದೆ ನೋಡಿ ಅಮೆರಿಕಾ ಅಧ್ಯಕ್ಷನ ಮಗಳ ಐಷಾರಾಮಿ ಬಂಗಲೆ!

First Published Jul 14, 2019, 5:03 PM IST

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿದೆ ಉದ್ಯಮಿಯಾಗಿದ್ದ ಇವಾಂಕಾ ಶ್ವೇತ ಭವನದಲ್ಲಿ ಪ್ರಮುಖ ಪಾತ್ರ ನಿಭಾಯಿಸುವವರೆಗೆ ಬೆಳೆದು ಬಂದ ಸ್ಟೋರಿ

ಅಮೆರಿಕಾದಲ್ಲಿ ಅಧ್ಯಕ್ಷ ಟ್ರಂಪ್ ಆಡಳಿತದಲ್ಲಿ ಯಾವ ಮಹಿಳೆಯ ಪ್ರಭಾವ ಅತಿ ಹೆಚ್ಚು ಇದೆ ಎಂಬ ಪ್ರಶ್ನೆ ಕೇಳಿದ್ರೆ, ಎಲ್ಲಕ್ಕಿಂತ ಮೊದಲು ಬರುವ ಹೆಸರೇ ಅವರ ಮಗಳು ಇವಾಂಕಾ ಟ್ರಂಪ್ ಹೆಸರು.
undefined
ಇವಾಂಕಾ ಓರ್ವ ಯಶಸ್ವೀ ಉದ್ಯಮಿ ಮಾತ್ರವಲ್ಲದೇ ತನ್ನ ತಂದೆ, ಅಮೆರಿಕಾ ಅಧ್ಯಕ್ಷರಿಗೆ ಮಹತ್ವಪೂರ್ಣ ವಿಚಾರಗಳಲ್ಲಿ ಸೂಕ್ತ ಸಲಹೆ ನೀಡುವ ಸಲಹೆಗಾರ್ತಿ ಕೂಡಾ ಹೌದು.
undefined
ಇವಾಂಕಾಗೆ ಅಮೆರಿಕಾದ ಫಸ್ಟ್ ಡಾಟರ್(ಮೊದಲ ಮಗಳು) ಎಂಬ ಗೌರವವೂ ಇದೆ. ಈಕೆ ಸಾಮಾನ್ಯವಾಗಿ ತನ್ನ ತಂದೆಯೊಂದಿಗೆ ವಿದೇಶೀ ಪ್ರವಾಸದಲ್ಲೂ ಪಾಲ್ಗೊಳ್ಳುತ್ತಾರೆ.
undefined
ಟ್ರಂಪ್ ಅಮೆರಿಕಾ ಅಧ್ಯಕ್ಷರಾಗುವುದಕ್ಕೂ ಮೊದಲು ಇವಾಂಕಾ ಫ್ಯಾಷನ್ ಕಂಪೆನಿ ನಡೆಸುತ್ತಿದ್ದರು ಹಾಗೂ ಅವರು ತಮ್ಮ ಗಮನವನ್ನು ಸಂಪೂರ್ಣವಾಗಿ ಉದ್ಯಮದಲ್ಲಿ ಕೇಂದ್ರೀಕರಿಸಿದ್ದರು.
undefined
ತಂದೆ ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾದ ಬಳಿಕ ಇವಾಂಕಾ ಕರಿಯರ್ ರಾಜಕೀಯದೆಡೆ ತಿರುಗಿತು. ಅವರು ಅಮೆರಿಕಾ ಅಧ್ಯಕ್ಷರ ಸಲಹೆಗಾರ್ತಿಯಾಗಿ ಗುರುತಿಸಿಕೊಂಡರು.
undefined
ಅಮೆರಿಕಾ ಸರ್ಕಾರದಲ್ಲಿ ತನ್ನ ನೂತನ ಜವಾಬ್ದಾರಿ ನಿಭಾಯಿಸಲು ಇವಾಂಕಾ ನ್ಯೂಯಾರ್ಕ್ ನಿಂದ ವಾಷಿಂಗ್ಟನ್ ಕಡೆ ಮುಖ ಮಾಡಿದರು.
undefined
ಇವಾಂಕಾ ವಾಸಿಸುತ್ತಿರುವ ಬಂಗಲೆ ಕೋಟ್ಯಂತರ ಮೌಲ್ಯ ಬೆಲೆ ಬಾಳುತ್ತದೆ ಎನ್ನಲಾಗಿದೆ.
undefined
ಇವಾಂಕಾ, ಡೊನಾಲ್ಡ್ ಟ್ರಂಪ್ ರವರ ಮೊದಲ ಹೆಂಡತಿ ಇವಾನಾ ಟ್ರಂಪ್ ಮಗಳು.
undefined
ಸುಮಾರು 37 ವರ್ಷದ ಇವಾಂಕಾ ಅಮೆರಿಕಾದ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು, ಫ್ಯಾಷನ್ ಡಿಸೈನರ್ ಹಾಗೂ ರಿಯಾಲಿಟಿ ಟಿವಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು.
undefined
2009ರಲ್ಲಿ ಇವಾಂಕಾ ಟ್ರಂಪ್ ಜೆರೆಡ್ ಕುಶ್ನರ್ ಮದುವೆಯಾದರು. ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಇವಾಂಕಾ ಜೆರೆಡ್ ರನ್ನು ಮದುವೆಯಾಗಲು ಯಹೂದಿ ಧರ್ಮವನ್ನು ತಮ್ಮದಾಗಿಸಿಕೊಂಡರು.
undefined
ಟ್ರಂಪ್ ಆಡಳಿತಾವಧಿಯಲ್ಲಿ ಇವಾಂಕಾ ಮಾತ್ರವಲ್ಲ, ಆಕೆಯ ಗಂಡ ಜೆರೆಡ್ ಪ್ರಭಾವವೂ ಬಹಳಷ್ಟಿದೆ. ಟ್ರಂಪ್ ತನ್ನ ಅಳಿಯ ಜೆರೆಡ್ ನನ್ನೂ ಹಿರಿಯ ಸಲಹೆಗಾರನನ್ನಾಗಿ ನೇಮಿಸಿದ್ದಾರೆ.
undefined
click me!