ಇಶಾ ಅಂಬಾನಿ ಅತ್ತಿಗೆ ಬ್ರಿಲಿಯೆಂಟ್ ಮಹಿಳಾ ಉದ್ಯಮಿ, ಆಸ್ತಿಯಲ್ಲಿ ಅಪ್ಪನನ್ನೇ ಮೀರಿಸುವಂತಿದ್ದಾಳೆ ಮಗಳು!

First Published | Oct 7, 2023, 3:21 PM IST

ಇಶಾ ಮತ್ತು ಆನಂದ್ ಅವರ ಐಷಾರಾಮಿ ವಿವಾಹದ ಬಳಿಕ ಇಬ್ಬರು ಬಿಲಿಯನೇರ್‌ಗಳಾದ ಮುಖೇಶ್ ಅಂಬಾನಿ ಮತ್ತು ಅಜಯ್ ಪಿರಮಾಲ್ ಅವರ ಸ್ನೇಹ ಮತ್ತಷ್ಟು ಗಟ್ಟಿಯಾಯ್ತು. ಬಹುಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ, ಡಿಸೆಂಬರ್ 12, 2018 ರಂದು ಉದ್ಯಮಿ ಆನಂದ್ ಪಿರಮಾಲ್ ಅವರನ್ನು ವರಿಸಿದರು. ಅಂಬಾನಿ ಅವರ ಮನೆಯ ಆಂಟಿಲಿಯಾದಲ್ಲಿ ನಡೆದ ಈ ಅದ್ದೂರಿ ವಿವಾಹದಲ್ಲಿ ಅನೇಕ ಉದ್ಯಮಿಗಳು, ಚಿತ್ರರಂಗದ ತಾರೆಯರು ನೆರೆದಿದ್ದರು.
 

ಮುಕೇಶ್ ಅಂಬಾನಿ ಅವರ ಅಳಿಯ ಆನಂದ್ ಪಿರಮಾಲ್ ಕಾರ್ಪೊರೇಟ್ ಜಗತ್ತಿನಲ್ಲಿ ಓರ್ವ ಪ್ರಮುಖ ಉದ್ಯಮಿಯಾಗಿದ್ದಾರೆ . ಆನಂದ್ ಪಿರಾಮಲ್ ಅವರ ಸಹೋದರಿ ಮತ್ತು ಇಶಾ ಅಂಬಾನಿ ಅವರ ಅತ್ತಿಗೆ ನಂದಿನಿ ಪಿರಮಾಲ್ ಅವರು ಕುಟುಂಬದ ವ್ಯಾಪಾರ ಸಾಮ್ರಾಜ್ಯದಲ್ಲಿ ಪ್ರಮುಖ ಕಾರ್ಯನಿರ್ವಾಹಕ ಹುದ್ದೆಗಳನ್ನು ಹೊಂದಿದ್ದಾರೆ. 
 

ನಂದಿನಿ,  ಪಿರಮಲ್ ಫಾರ್ಮಾ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಪಿರಮಲ್ ಗ್ರೂಪ್‌ನಲ್ಲಿ ಐಟಿ ಮತ್ತು ಮಾನವ ಸಂಪನ್ಮೂಲ ವಿಭಾಗಗಳನ್ನು ನೋಡಿಕೊಳ್ಳುತ್ತಾರೆ. 

Tap to resize

ನಂದಿನಿ, ಪಿರಮಲ್ ಫಾರ್ಮಾದ ಗುಣಮಟ್ಟದ ಘಟಕವನ್ನು ಸಹ ನೋಡಿಕೊಳ್ಳುತ್ತಾರೆ. ಇದರ ಜೊತೆಗೆ, ಪಿರಾಮಲ್ ಗ್ರೂಪ್‌ನ ಐದು ವರ್ಷಗಳ ರೂಪಾಂತರ ಕಾರ್ಯತಂತ್ರಕ್ಕಾಗಿ ಅತ್ಯುತ್ತಮ ಉದ್ಯೋಗಿಗಳನ್ನು ಹುಡುಕಲು ಮುಂದಾಗಿದ್ದಾರೆ.

ಶ್ರೀಮತಿ ಪಿರಾಮಲ್ ಅವರು ಪಿರಮಲ್ ಫೌಂಡೇಶನ್ ಮತ್ತು ಪಿರಮಲ್ ಸರ್ವಜಲ್‌ಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇದು 20 ಭಾರತೀಯ ರಾಜ್ಯಗಳಲ್ಲಿ ಸುಮಾರು 750,000 ಜನರಿಗೆ ಶುದ್ಧ ನೀರನ್ನು ಒದಗಿಸುವ ಸಾಮಾಜಿಕ ಉದ್ಯಮವಾಗಿದೆ. 

ಪಿರಾಮಲ್ ಸ್ವಾಸ್ಥ್ಯ, ಪಿರಮಲ್ ಸ್ಕೂಲ್ ಆಫ್ ಲೀಡರ್‌ಶಿಪ್, ಮತ್ತು ಪಿರಮಲ್ ಸರ್ವಜಲ್ (ಪಿರಮಲ್ ಗ್ರೂಪ್‌ನ ಚಾರಿಟಬಲ್ ಆರ್ಮ್) ಸೇರಿದಂತೆ ಪಿರಮಾಲ್ ಫೌಂಡೇಶನ್‌ನ ಕಾರ್ಯಕ್ರಮಗಳಿಗೆ ನಂದಿನಿ ಆಳವಾಗಿ ಬದ್ಧರಾಗಿದ್ದಾರೆ.  ಆಕೆಯ ನಿಖರವಾದ ನಿವ್ವಳ ಮೌಲ್ಯವು ಅಸ್ಪಷ್ಟವಾಗಿದ್ದರೂ, ಆಕೆಯ ನಿವ್ವಳ ಮೌಲ್ಯ 3.5 ಮಿಲಿಯನ್‌ ಎನ್ನಲಾಗಿದೆ. ಫೋರ್ಬ್ಸ್ ಪ್ರಕಾರ, ಆಕೆಯ ತಂದೆಯ ನಿವ್ವಳ ಮೌಲ್ಯ   3.8 ಬಿಲಿಯನ್ ಡಾಲರ್‌ ಅಥವಾ 31,580 ಕೋಟಿ ರೂ. 

ನಂದಿನಿ  ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ರಾಜಕೀಯ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಗೌರವಗಳೊಂದಿಗೆ ಪದವಿ ಪಡೆದ್ದಾರೆ ಮತ್ತು ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

2020 ರಲ್ಲಿ ನಂದಿನಿ ಪಿರಮಾಲ್ ಅವರು ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿ ಅವಾರ್ಡ್ ಪಡೆದಿದ್ದಾರೆ. ಅವರು 2014 ರಲ್ಲಿ ವಿಶ್ವ ಆರ್ಥಿಕ ವೇದಿಕೆಯಿಂದ `ಯಂಗ್ ಗ್ಲೋಬಲ್ ಲೀಡರ್' ಎಂದು ಬಿರುದು ಪಡೆದಿದ್ದಾರೆ.
 

Latest Videos

click me!