ಇದು ನಿಮಗೆ ಮತ್ತೊಂದು ಆದಾಯದ ಮೂಲವನ್ನು ನೀಡುತ್ತದೆ. ರಜಾದಿನಗಳು ಮತ್ತು ಹಬ್ಬಗಳಂತಹ ಪೀಕ್ ಋತುಗಳಲ್ಲಿ, ನಿಮ್ಮ ಆದಾಯವು ಇದರಿಂದ ಹೆಚ್ಚಾಗುತ್ತದೆ ಉದಾಹರಣೆಗೆ, ನೀವು ತಿಂಗಳಿಗೆ 100 ಎಸಿ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದರೆ 2 ಸಾವಿರ ರೂಪಾಯಿ ಕಮೀಷನ್ ಪಡೆಯುತ್ತೀರಿ. ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಈ ಆದಾಯವು ಇನ್ನೂ ಹೆಚ್ಚಾಗಬಹುದು. ಏಜೆಂಟ್ ಆಗೋದಕ್ಕೆ ಸಣ್ಣ ಪ್ರಮಾಣದ ಶುಲ್ಕವೂ ಇದೆ. ಐಆರ್‌ಸಿಟಿಸಿ ಏಜೆಂಟ್ ಆಗಲು 1 ವರ್ಷಕ್ಕೆ 3999 ರೂಪಾಯಿ ಹಾಗೂ 2 ವರ್ಷಗಳ ಲೈಸೆನ್ಸ್‌ಗೆ 6999 ರೂಪಾಯಿ ಪಾವತಿ ಮಾಡಬೇಕು ಒಮ್ಮೆ ನೀವು ಏಜೆಂಟ್ ಆಗಿದ್ದರೆ, ಟಿಕೆಟ್ ಬುಕಿಂಗ್ ಶುಲ್ಕಗಳು ತಿಂಗಳಿಗೆ ಬುಕ್ ಮಾಡಿದ ಟಿಕೆಟ್‌ಗಳ ಸಂಖ್ಯೆಯನ್ನು ಆಧರಿಸಿರುತ್ತದೆ.