ಇನ್ಫೋಸಿಸ್ ಷೇರು ಮೌಲ್ಯ ಹೆಚ್ಚಳ, ಶುಕ್ರವಾರ ಶೇಕಡಾ 5ರಷ್ಟು ಏರಿಕೆಯಾಗಿದೆ. ಸಂಸ್ಥಾಪಕರಾದ ನಾರಾಯಣಮೂರ್ತಿ, ಸುಧಾ ಮೂರ್ತಿ ಸೇರಿ ಹೂಡಿಕೆದಾರರು ಒಂದೇ ದಿನ ಗಳಿಸಿದ ಆದಾಯವೆಷ್ಟು? ಶುಕ್ರವಾರದ ಶುಭ ಘಳಿಗೆಯಲ್ಲಿ ಗಳಿಕೆ
ಷೇರು ಮಾರುಕಟ್ಟೆಯಲ್ಲಿ ಜಿಗಿತ ಹಲವು ಹೂಡಿಕೆದಾರರ ನೆಮ್ಮದಿಗೆ ಕಾರಣವಾಗಿದೆ. ಪ್ರಮುಖವಾಗಿ ಇನ್ಫೋಸಿಸ್ ಷೇರುಗಳ ಮೌಲ್ಯ ಹೆಚ್ಚಳವಾಗಿದೆ. ಇನ್ಫೋಸಿಸ್ ಷೇರು ಮೌಲ್ಯ ಶೇಕಡಾ 4.52ರಷ್ಟು ಹೆಚ್ಚಳವಾಗಿದೆ. BSE ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರು ಮೌಲ್ಯ 6,64,352 ಕೋಟಿ ರೂಪಾಯಿಯಿಂದ 6,90,090 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
25
ಶುಕ್ರವಾರ ಒಂದೇ ದಿನ 26,000 ಕೋಟಿ ರೂ ಏರಿಕೆ
ಇನ್ಫೋಸಿಸ್ ಷೇರು ಮೌಲ್ಯ ಶುಕ್ರವಾರ (ಜ.16) ಒಂದೇ ದಿನ 26,000 ಕೋಟಿ ರೂಪಾಯಿ ಹೆಚ್ಚಳ ಕಂಡಿದೆ. ಈ ಮೂಲಕ ಹೂಡಿಕೆದಾರರ ಜೇಬು ತುಂಬಿದೆ. ಕ್ವಾರ್ಟರ್ 3ಯಲ್ಲಿ ಆಗಿರುವ ಏರಿಕೆಯಿಂದ ಹೂಡಿಕೆದಾರರು, ಸಂಸ್ಥಾಪಕರಾದ ನಾರಾಯಣ ಮೂರ್ತಿ , ಸುಧಾ ಮೂರ್ತಿ ಸೇರಿ ಇತರರು ಒಂದೇ ದಿನ ಕೋಟಿ ಕೋಟಿ ಆದಾಯಗಳಿಸಿದ್ದಾರೆ.
35
ನಾರಾಯಣ ಮೂರ್ತಿ ಒಂದೇ ದಿನ ಗಳಿಸಿದ್ದೆಷ್ಟು?
ಇನ್ಫೋಸಿಸ್‌ನಲ್ಲಿ ಸಂಸ್ಥಾಪಕ ನಾರಾಯಣ ಮೂರ್ತಿ 0.41ರಷ್ಟು ಷೇರು ಹೊಂದಿದ್ದಾರೆ. ಇದರ ಮೌಲ್ಯ 2,829 ಕೋಟಿ ರೂಪಾಯಿ. ಇಂದು ಶೇಕಡಾ 4.52ರಷ್ಟು ಏರಿಕೆ ಕಂಡ ಕಾರಣ ಒಂದೇ ದಿನ ನಾರಾಯಣ ಮೂರ್ತಿ 106 ಕೋಟಿ ರೂಪಾಯಿ ಗಳಿಸಿದ್ದರೆ. ನಾರಾಯಣ ಮೂರ್ತಿ, ಸುಧಾ ಮೂರ್ತಿ, ನಂದನ್ ನಿಲೇಕಣಿ, ಎಸ್ ಗೋಪಾಲಕೃಷ್ಣನ್ ಸೇರಿ ಸಂಸ್ಥಾಪಕ ಪ್ರಮುಖರು ಒಟ್ಟು 14.55ರಷ್ಟು ಇನ್ಫೋಸಿಸ್ ಷೇರು ಹೊಂದಿದ್ದಾರೆ.
ಸುಧಾಮೂರ್ತಿ, ಪುತ್ರ ರೋಹನ್ ಮೂರ್ತಿ, ಮಗಳು ಅಕ್ಷತಾ ಮೂರ್ತಿ ಹಾಗೂ ಮೊಮ್ಮಗ್ ಏಕಾಗ್ರಹ ರೋಹನ್ ಮೂರ್ತಿ ಇನ್ಪೋಸಿಸ್‌ನಲ್ಲಿ ಒಟ್ಟು ಶೇಕಡಾ 4.06ರಷ್ಟು ಷೇರು ಹೊಂದಿದ್ದಾರೆ. ಗುರುವಾರ ಇದರ ಒಟ್ಟು ಮೌಲ್ಯ 26,972 ಕೋಟಿ ರೂಪಾಯಿ. ಆದರೆ ಷೇರು ಮೌಲ್ಯ ಹೆಚ್ಚಳದಿಂದ ಇಂದು ಇದೇ ಮೌಲ್ಯ 28,018 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಂದೇ ದಿನ 1,045 ಕೋಟಿ ರೂಪಾಯಿ ಆದಾಯಗಳಿಸಿದ್ದಾರೆ.
ಸುಧಾಮೂರ್ತಿ ಹಾಗೂ ಕುಟುಂಬ ಗಳಿಸಿದ್ದೆಷ್ಟು?
55
ಹೂಡಿಕೆದಾರರಿಗೆ ಬಂಪರ್
ಇನ್ಫೋಸಿಸ್‌ನಲ್ಲಿ ಹೂಡಿಕೆ ಮಾಡಿದ ಹಲವರ ಜೇಬು ತುಂಬಿದೆ. ಪ್ರಮುಖವಾಗಿ ಎಲ್‌ಐಸಿ ಕಂಪನಿ ಬಳಿ ಇನ್ಪೋಸಿಸ್‌ನ 11.09 ರಷ್ಟು ಷೇರು ಹೊಂದಿದ್ದಾರೆ. ಶುಕ್ರವಾರ ಒಂದೇ ದಿನ ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ 2,854 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.