ರೇಖಾ ಜುನ್‌ಜುನ್‌ವಾಲಾ: ಭಾರತದ ಎರಡನೇ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ರೇಖಾ ಜುನ್‌ಜುನ್‌ವಾಲಾ. ಅವರ ಒಟ್ಟು ಸಂಪತ್ತು ₹72,814 ಕೋಟಿ. ಅವರ ಐಷಾರಾಮಿ ಜೀವನಶೈಲಿ, ಆಸ್ತಿ ಮತ್ತು ವಿಶಿಷ್ಟ ಹೂಡಿಕೆಗಳ ಬಗ್ಗೆ ವಿವರ ಇಲ್ಲಿದೆ. ರೇಖಾ ಜುನ್‌ಜುನ್‌ವಾಲಾ ಅವರಿಗೆ ಹಲವಾರು ಐಷಾರಾಮಿ ಮನೆಗಳಿವೆ. ವಿಶೇಷವಾಗಿ ಮಲಬಾರ್ ಹಿಲ್‌ನ ರಿಡ್ಜ್ ರಸ್ತೆಯಲ್ಲಿರುವ ಸಮುದ್ರಮುಖಿಯಾಗಿರುವ ಅದ್ಭುತ ನಿವಾಸವಿದೆ. 14 ಮಹಡಿಗಳನ್ನು ಒಳಗೊಂಡಿರುವ ಈ ಮನೆಯನ್ನು ಹಿಂದೆ ರಿಡ್ಜ್ವೇ ಅಪಾರ್ಟ್‌ಮೆಂಟ್ಸ್ ಎಂದು ಕರೆಯಲಾಗುತ್ತಿತ್ತು. ರೇಖಾ ಅವರ ಪತಿ ರಾಕೇಶ್ ಜುನ್‌ಜುನ್‌ವಾಲಾ 2013 ಮತ್ತು 2017 ರ ನಡುವೆ ₹370 ಕೋಟಿ ಖರ್ಚು ಮಾಡಿ ಈ ಬಂಗಲೆಯನ್ನು ಖರೀದಿ ಮಾಡಿದ್ದರು.
70,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಆಸ್ತಿಯು ಮುಂಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿದೆ. ಈ 14 ಮಹಡಿಗಳ ಜೊತೆಗೆ, ₹118 ಕೋಟಿ ಬೆಲೆಬಾಳುವ 9 ಮಹಡಿಗಳ ಒಂದು ಅಪಾರ್ಟ್ಮೆಂಟ್ ಅನ್ನು ಸಹ ಅವರು ಹೊಂದಿದ್ದಾರೆ. ರೇಖಾ ಜುನ್‌ಜುನ್‌ವಾಲಾ 1963ರ ಸೆಪ್ಟೆಂಬರ್ 12 ರಂದು ಜನಿಸಿದ್ದರು. ಬಳಿಕ ಮುಂಬೈ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. 1987 ರಲ್ಲಿ ರಾಕೇಶ್ ಜುನ್‌ಜುನ್‌ವಾಲಾ ಅವರನ್ನು ಮದುವೆಯಾದರು. ರಾಕೇಶ್ ಜುಂಜುನ್‌ವಾಲಾ ಪ್ರಮುಖ ಷೇರು ಹೂಡಿಕೆದಾರರಾಗಿ ಹೆಸರು ಮಾಡಿಕೊಂಡಾಗ ಈ ದಂಪತಿಗಳ ಯಶಸ್ಸಿನ ಕಥೆ ಆರಂಭವಾಯಿತು.
ರೇಖಾ ಮತ್ತು ರಾಕೇಶ್ ಜುನ್‌ಜುನ್‌ವಾಲಾ ದಂಪತಿಗೆ ನಿಷ್ಠಾ, ಆರ್ಯಮನ್ ಮತ್ತು ಆರ್ಯವೀರ್ ಎಂಬ ಮೂವರು ಮಕ್ಕಳಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದ ರಾಕೇಶ್ ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಕರೆಯಲಾಗುತ್ತಿತ್ತು. ತಮ್ಮ ಹೂಡಿಕೆ ಕೌಶಲ್ಯದ ಮೂಲಕ ಅಪಾರ ಲಾಭ ಗಳಿಸಿದ ಅವರು ಬೃಹತ್ ಸಂಪತ್ತನ್ನು ಸಂಪಾದಿಸಿದರು.
ರಿಯಲ್ ಎಸ್ಟೇಟ್ ಹೂಡಿಕೆಗಳು: ರೇಖಾ ಜುನ್‌ಜುನ್‌ವಾಲಾ ಅವರ ರಿಯಲ್ ಎಸ್ಟೇಟ್ ಪೋರ್ಟ್‌ಫೋಲಿಯೊ ಅವರ ಆಯ್ಕೆಗಳನ್ನು ತಿಳಿಸುತ್ತದೆ. ದುಬಾರಿ ಬಂಗಲೆಯ ಜೊತೆಗೆ, 2023 ರಲ್ಲಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಮತ್ತು ಅಂಧೇರಿ ಪೂರ್ವದಲ್ಲಿರುವ ಚಂಡಿವಲಿಯಲ್ಲಿ ₹739 ಕೋಟಿ ಬೆಲೆಗೆ ಐದು ವಾಣಿಜ್ಯ ಕಚೇರಿ ಸ್ಥಳಗಳನ್ನು ಖರೀದಿಸುವ ಮೂಲಕ ಅವರು ಸುದ್ದಿಯಾಗಿದ್ದರು. ಒಟ್ಟಾರೆಯಾಗಿ 1.94 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಆಸ್ತಿಗಳು ಅವರ ಹೂಡಿಕೆ ಕ್ಷೇತ್ರಕ್ಕೆ ಗಮನಾರ್ಹ ಬೆಂಬಲವನ್ನು ನೀಡಿವೆ.
ದೊಡ್ಡ ಮಟ್ಟದ ಷೇರು ಪೋರ್ಟ್‌ಫೋಲಿಯೋ: ರೇಖಾ ಜುನ್‌ಜುನ್‌ವಾಲಾ ಅವರ ಷೇರು ಪೋರ್ಟ್‌ಫೋಲಿಯೊ ಪ್ರಸ್ತುತ ₹37,831 ಕೋಟಿ ಮೌಲ್ಯದ್ದಾಗಿದೆ. ಇದು ಅವರ ಹಣಕಾಸು ಬುದ್ಧಿವಂತಿಕೆಗೆ ಒಂದು ಸಾಕ್ಷಿ. ನಾಲ್ಕನೇ ತ್ರೈಮಾಸಿಕದಲ್ಲಿ ರೇಖಾ ಅವರ ಹೂಡಿಕೆಗಳು ₹224 ಕೋಟಿ ಲಾಭ ತಂದುಕೊಟ್ಟಿವೆ. ಟೈಟಾನ್ ಕಂಪನಿ (₹52.23 ಕೋಟಿ), ಕ್ಯಾನ್ ಬ್ಯಾಂಕ್ (₹42.37 ಕೋಟಿ), ವೇಲರ್ ಎಸ್ಟೇಟ್ (₹27.50 ಕೋಟಿ), ಎನ್‌ಸಿಸಿ (₹17.24 ಕೋಟಿ), ಟಾಟಾ ಮೋಟಾರ್ಸ್ (₹12.84 ಕೋಟಿ) ಅವರ ಲಾಭಾಂಶ ಆದಾಯಕ್ಕೆ ಪ್ರಮುಖ ಕೊಡುಗೆ ನೀಡಿವೆ. ಇದಲ್ಲದೆ, CRISIL, ಎಸ್ಕಾರ್ಟ್ಸ್ ಕುಬೋಟಾ, ಫೋರ್ಟಿಸ್ ಹೆಲ್ತ್‌ಕೇರ್, ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಫೆಡರಲ್ ಬ್ಯಾಂಕ್‌ನ ಷೇರುಗಳ ಮೂಲಕ ₹72.49 ಕೋಟಿ ಗಳಿಸಿದ್ದಾರೆ.
ಒಟ್ಟು ಸಂಪತ್ತು ಮತ್ತು ಹಣಕಾಸಿನ ಸ್ಥಿತಿ: ಫೋರ್ಬ್ಸ್ ಪ್ರಕಾರ, ರೇಖಾ ಜುನ್‌ಜುನ್‌ವಾಲಾ ಅವರ ಒಟ್ಟು ಸಂಪತ್ತು $8.7 ಬಿಲಿಯನ್ ಅಂದರೆ ₹72,814 ಕೋಟಿ. ಷೇರು ಮಾರುಕಟ್ಟೆ ಹೂಡಿಕೆಗಳು ಮತ್ತು ರಿಯಲ್ ಎಸ್ಟೇಟ್ ಎರಡರಲ್ಲೂ ಅವರ ಯಶಸ್ಸನ್ನು ಈ ಬೃಹತ್ ಸಂಪತ್ತು ಎತ್ತಿ ತೋರಿಸುತ್ತದೆ, ಇದು ಅವರನ್ನು ಭಾರತದ ಎರಡನೇ ಶ್ರೀಮಂತ ಮಹಿಳೆಯನ್ನಾಗಿ ಮಾಡಿದೆ.