Rameshwaram Cafe To Chumbak: ಗಂಡ-ಹೆಂಡ್ತಿ ಸೇರಿ ಆರಂಭಿಸಿದ ದೇಶದ 10 ಸ್ಟಾರ್ಟ್‌ಅಪ್‌ಗಳು!

First Published | Nov 21, 2024, 5:50 PM IST

ರಾಮೇಶ್ವರಂ ಕೆಫೆಯಿಂದ ಹಿಡಿದು ಕ್ಯಾಶ್‌ ಕರೋವರೆಗೆ, ಈ ಯಶಸ್ವಿ ಸ್ಟಾರ್ಟ್‌ಅಪ್‌ಗಳನ್ನು ದಂಪತಿಗಳು ಸ್ಥಾಪಿಸಿದ್ದಾರೆ. ಭಾರತೀಯ ಉದ್ಯಮಶೀಲತೆಯ ಈ ಸ್ಪೂರ್ತಿದಾಯಕ ಕಥೆಗಳು ನಿಮ್ಮನ್ನು ಬೆರಗುಗೊಳಿಸುತ್ತವೆ.

ರಾಮೇಶ್ವರಂ ಕೆಫೆ (Rameshwaram Cafe): ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಈಗ ಜಗತ್ಪ್ರಸಿದ್ದ. ಇದನ್ನು ಆರಂಭ ಮಾಡಿದ್ದು, ರಾಘವೇಂದ್ರ ರಾವ್‌ ಹಾಗೂ ದಿವ್ಯಾ ರಾಘವೇಂದ್ರ ರಾವ್‌ ದಂಪತಿಗಳು.
 

ಎಕೆಎಸ್‌ ಕ್ಲಾತಿಂಗ್‌ (AKS Clothing): ಹೆಸರೇ ಹೇಳುವಂತೆ ಕ್ಲಾತಿಂಗ್‌ ಬ್ರ್ಯಾಂಡ್‌. ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ನಿಧಿ ಯಾದವ್‌, ಉತ್ತಮ ಸಂಬಳ ಬರುತ್ತಿದ್ದ ಕಂಪನಿಯನ್ನು ತೊರೆದು, ಪತಿ ಸತ್ಪಾಲ್‌ ಯಾದವ್‌ ಜೊತೆ ಈ ಕಂಪನಿ ಆರಂಭಿಸಿದ್ದರು. ಭಾರತೀಯ ಮಹಿಳೆಯರಿಗೆ ಕೈಗೆಟುಕುವ ಮತ್ತು ಸೊಗಸಾದ  ಉಡುಗೆಗಳನ್ನು ಒದಗಿಸುವ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.
 

Tap to resize

ಸಮೋಸಾ ಸಿಂಗ್‌ (Samosa Singh): ಭಾರತದಲ್ಲಿ ಎಷ್ಟು ಬಗೆಯ ಸಮೋಸಾಗಳಿವೆಯೋ ಅದೆಲ್ಲವನ್ನು ಈ ಔಟ್‌ಲೆಟ್‌ನಲ್ಲಿ ನೀವು ಸವಿಯಬಹುದು. ಇದರ ಮಾಲೀಕರು ಶಿಖರ್‌ ಸಿಂಗ್‌ ಹಾಗೂ ನಿಧಿ ಸಿಂಗ್‌.
 

ಶುಗರ್‌ ಕಾಸ್ಮೆಟಿಕ್ಸ್‌ (Sugar Cosmetics): 2015 ರಲ್ಲಿ ಪ್ರಾರಂಭವಾದ ಶುಗರ್ ಕಾಸ್ಮೆಟಿಕ್ಸ್ ವಿನೀತಾ ಸಿಂಗ್ ಮತ್ತು ಅವರ ಪತಿ ಕೌಶಿಕ್ ಮುಖರ್ಜಿಯವರ ಉದ್ಯಮ. ಕೆಲವೇ ವರ್ಷಗಳಲ್ಲಿ, ಶುಗರ್‌ ಭಾರತದಲ್ಲಿನ ಮೇಕಪ್ ಉತ್ಪನ್ನಗಳ ಅತ್ಯುತ್ತಮ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.

ಮೊಬಿಕ್ವಿಕ್‌ (MobiKwik): ಭಾರತೀಯ ಹಣಕಾಸು ತಂತ್ರಜ್ಞಾನ ಕಂಪನಿಯಾಗಿದ್ದು, 2009 ರಲ್ಲಿ ಸ್ಥಾಪಿಸಲಾಯಿತು. ಇದು ಮೊಬೈಲ್ ಫೋನ್ ಆಧಾರಿತ ಪಾವತಿ ವ್ಯವಸ್ಥೆ ಮತ್ತು ಡಿಜಿಟಲ್ ವ್ಯಾಲೆಟ್ ಅನ್ನು ಒದಗಿಸುತ್ತದೆ. ಇದರ ಸ್ಥಾಪಕರು ಬಿಪಿನ್‌ ಪ್ರೀತ್‌ ಸಿಂಗ್‌ ಹಾಗೂ ಉಪಸನಾ ಟಾಕು.

ಮಿವಿ (MIVI): 2015 ರಲ್ಲಿ ಸ್ಥಾಪನೆಯಾದ ಮಿವಿ, ಭಾರತೀಯ ಅಗತ್ಯಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾದ ಭಾರತೀಯ ನಿರ್ಮಿತ ಉತ್ಪನ್ನಗಳನ್ನು ತಯಾರಿಸುವಲ್ಲಿ ಮತ್ತು ಮಾರಾಟ ಮಾಡುವಲ್ಲಿ ಪ್ರಮುಖ ಕಂಪನಿಯಾಗಿದೆ. ವಿಶ್ವನಾಥ್‌ ಕಂದುಲ ಹಾಗೂ ಮಿಧುಲಾ ದೇವಭಕ್ತುನಿ ದಂಪತಿಗಳು ಆರಂಭಿಸಿದ ಸ್ಟಾರ್ಟ್‌ಅಪ್‌.
 

ಚುಂಬಕ್‌ (Chumbak): ಬೆಂಗಳೂರು ಮೂಲದ ಇನ್ನೊಂದು ಸ್ಟಾರ್ಟ್‌ಅಪ್‌ ಚುಂಬಕ್‌. ಹೋಮ್‌ ಹಾಗೂ ಲೈಫ್‌ಸ್ಟೈಲ್‌ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ವಿವೇಕ್‌ ಪ್ರಭಾಕರ್‌ ಹಾಗೂ ಶುಭ್ರಾ ಚಡ್ಡಾ ಆರಂಭ ಮಾಡಿರುವ ಕಂಪನಿ ಇದು.
 

ಮಮಾ ಅರ್ತ್‌ (Mama Earth):  ಭಾರತೀಯ ಮೂಲದ ಸ್ಟಾರ್ಟ್‌ಅಪ್ ಆಗಿದ್ದು, ತನ್ನ ಗ್ರಾಹಕರ ದೈನಂದಿನ ತ್ವಚೆಯ ಆರೈಕೆಯನ್ನು ಹೆಚ್ಚಿಸಲು ವ್ಯಾಪಕ ಶ್ರೇಣಿಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ನೀಡುತ್ತದೆ. ಇದನ್ನು ಆರಂಭ ಮಾಡಿದ್ದು ದಂಪತಿಗಳಾದ ವರುಣ್‌ ಅಲಘ್‌ ಹಾಗೂ ಗಜಲ್‌ ಅಲಘ್‌.

ಆಫ್‌ ಬ್ಯುಸಿನೆಸ್‌ & ಆಕ್ಸಿಜೋ (ofbusiness Oxyzo): ಆಕ್ಸುಜೋ ಫೈನಾನ್ಷಿಯಲ್ ಸರ್ವೀಸಸ್, ಆಫ್‌ ಬ್ಯುಸಿನೆಸ್‌ನ ಸಾಲ ನೀಡುವ ವಿಭಾಗ. ಇದರಿಂದಲೇ ಹೆಚ್ಚಿನ ಆದಾಯ ಪಡೆಯುವ ಸ್ಟಾರ್ಟ್‌ಅಪ್‌. ರುಚಿ ಕಲ್ರಾ ಹಾಗೂ ಆಶಿಶ್ ಮೊಹಾಪಾತ್ರ ಇದರ ಸ್ಥಾಪಕರು.

ಇದನ್ನೂ ಓದಿ: ಭಾರತದ ಸೆಲಿಬ್ರಿಟಿಗಳ ಅತ್ಯಂತ ಶಾಕಿಂಗ್‌ ಅನೈತಿಕ ಸಂಬಂಧಗಳು!

ಕ್ಯಾಶ್‌ ಕರೋ (Cash Karo): ಕ್ಯಾಶ್‌ ಕರೋ ಪ್ಲಾಟ್‌ಫಾರ್ಮ್‌ನಲ್ಲಿ 1500+ ಚಿಲ್ಲರೆ ವ್ಯಾಪಾರಿಗಳೊಂದಿಗೆ ಭಾರತದ ಅತಿದೊಡ್ಡ ಕ್ಯಾಶ್‌ಬ್ಯಾಕ್ ಮತ್ತು ಕೂಪನ್‌ಗಳ ಸೈಟ್ ಆಗಿದೆ. ಇದನ್ನು ಆರಂಭ ಮಾಡಿದ್ದು ರೋಹನ್‌ ಭಾರ್ಗವ ಹಾಗೂ ಸ್ವಾತಿ ಭಾರ್ಗವ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 7 ನಗರಗಳಲ್ಲಿ ಮನೆ ಖರೀದಿ ದುಬಾರಿ!

Latest Videos

click me!