16 ತಿಂಗಳ ಕಾಯುವಿಕೆ ಅಂತ್ಯ; ಭಾರತಕ್ಕೆ ಸಿಕ್ತು ಸಿಹಿ ಸುದ್ದಿ, ಚೀನಾ-ಪಾಕ್‌ಗೆ ಆತಂಕ ಶುರು

Published : Aug 01, 2025, 07:10 PM IST

India manufacturing PMI July 2025: ಕಳೆದ 16 ತಿಂಗಳಲ್ಲಿಯೇ ಅತಿ ಹೆಚ್ಚಿನ PMI ಇಂಡೆಕ್ಸ್‌ 59.1ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಉತ್ಪಾದನಾ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಈ ಏರಿಕೆ ಭಾರತದ ಆರ್ಥಿಕತೆಗೆ ಧನಾತ್ಮಕ ಸಂಕೇತವಾಗಿದೆಯೇ?

PREV
16

ಕಳೆದ 16 ತಿಂಗಳಿನಿಂದ ಭಾರತ ಕಾಯುತ್ತಿದ್ದ ಗುಡ್‌ನ್ಯೂಸ್ ಇಂಡಿಯಾಗೆ ಸಿಕ್ಕಿದೆ. ಆಗಸ್ಟ್ ಆರಂಭದಿಂದಲೇ ಭಾರತದ ಆರ್ಥಿಕತೆಗೆ ಒಳ್ಳೆಯ ಸುದ್ದಿಯೊಂದು ಲಭ್ಯವಾಗಿದೆ. ಜುಲೈನಲ್ಲಿ ಜಾಗತೀಕ ಅನಿಶ್ಚಿತತೆ ಭಾರತದ ಉತ್ಪಾದನ ವಲಯ ಹಲವು ಏರಳಿತಗಳನ್ನು ಕಂಡಿತ್ತು.

26

ಇದೀಗ ಆಗಸ್ಟ್ ಮೊದಲ ದಿನವೇ ಭಾರತಕ್ಕೆ ಸಂತಸದ ಸುದ್ದಿಯೊಂದು ಲಭ್ಯವಾಗಿದೆ. ಜುಲೈ ಬಳಿಕ ಆಗಸ್ಟ್‌ನಲ್ಲಿಯೂ PMI ಇಂಡೆಕ್ಸ್‌ 58ರ ಮೇಲೆ ಜಿಗಿತವನ್ನು ಕಂಡಿದೆ. ಜೂನ್‌ PMI ಇಂಡೆಕ್ಸ್‌ 58.4 ಆಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯ ಅನಿಶ್ವಿತತೆ ನಡುವೆಯೇ ಜುಲೈನಲ್ಲಿ PMI ಇಂಡೆಕ್ಸ್‌ 59.1ರಷ್ಟು ಆಗಿದೆ. ಇದು ಕಳೆದ 16 ತಿಂಗಳಲ್ಲಿಯೇ ಅತಿ ಹೆಚ್ಚು ಇಂಡೆಕ್ಸ್ ಆಗಿದ್ದು, ಸಂತಸದ ವಿಚಾರವಾಗಿದೆ.

36

HSBC ಭಾರತದ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (India Manufacturing Purchasing Managers' Index) ಜೂನ್‌ನಿಂದ 58.4ರಿಂದ ಏರಿಕೆಯಾಗಿ ಜುಲೈನಲ್ಲಿ 59.1ರಷ್ಟು ಆಗಿದೆ. ದೇಶದ PMI ಇಂಡೆಕ್ಸ್‌ 50ಕ್ಕಿಂತ ಅಧಿಕವಾಗಿರಬೇಕಾಗುತ್ತದೆ. PMI ಇಂಡೆಕ್ಸ್‌ ಸೂಚ್ಯಂಕ ದೇಶದ ಉತ್ಪದನಾ ವಲಯದ ವೃದ್ಧಿಯನ್ನು ಸೂಚಿಸುತ್ತದೆ. PMI ಇಂಡೆಕ್ಸ್‌ ಸೂಚ್ಯಂಕ 50ಕ್ಕಿಂತ ಕಡಿಮೆಯಾದ್ರೆ ಉತ್ಪದನಾ ವಲಯದಲ್ಲಿ ಏರಿಳಿತ ಉಂಟಾಗುತ್ತಿದೆ ಎಂದರ್ಥ.

46

ಈ ಕುರಿತು ಪ್ರತಿಕ್ರಿಯಿಸಿರುವ HSBCಯ ಪ್ರಮುಖ ಅರ್ಥಶಾಸ್ತ್ರಜ್ಞರಾದ ಪ್ರಾಂಜುಲಿ ಭಂಡಾರಿ, ಜುಲೈನಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್‌ನಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ತೋರಿಸುತ್ತದೆ. 58.7 ರಿಂದ 59.1ರಷ್ಟು ಇಂಡೆಕ್ಸ್‌ ಉತ್ಪದನಾ ವಲಯ ಸದೃಢವಾಗುವ ಸಾಧ್ಯತೆಯನ್ನು ಬಿಂಬಿಸುತ್ತಿದೆ. ಸೂಚಂಕ್ಯದ ಪ್ರಕಾರ, ಕಳೆದ 5 ವರ್ಷಗಳಲ್ಲಿ ಉತ್ಪಾದನ ವಲಯ ವೇಗದಿಂದ ಬೆಳವಣಿಗೆಯಾಗುತ್ತಿದೆ. ಕಳೆದ 15 ತಿಂಗಳಲ್ಲಿಯೇ ಪಿಎಂಐ ಇಂಡೆಕ್ಸ್ ಉಚ್ಛಸ್ಥರ ಹಂತದಲ್ಲಿದೆ.

56

ಮುಂದಿನ 12 ತಿಂಗಳಲ್ಲಿ ಭಾರತೀಯ ತಯಾರಕರು ಉತ್ಪಾದನೆಯನ್ನು ಹೆಚ್ಚಿಸುವ ವಿಶ್ವಾಸ ಹೊಂದಿದ್ದಾರೆ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ಹೇಳಿದೆ. ಜುಲೈನಲ್ಲಿ ಅಲ್ಯೂಮಿನಿಯಂ, ಚರ್ಮ, ರಬ್ಬರ್ ಮತ್ತು ಉಕ್ಕು ಸೇರಿದಂತೆ ಇನ್ನಿತರ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ಕಚ್ಛಾ ವಸ್ತುಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಕಂಪನಿಗಳು ಬೆಲೆ ಏರಿಕೆ ಮಾಡಿಕೊಂಡಿದ್ದವು.

66

ಸುಮಾರು 400 ಉತ್ಪಾದನಾ ಕಂಪನಿಗಳಿಗೆ ಕಳುಹಿಸಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಆಧರಿಸಿ ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪಿಎಂಐ ಅನ್ನು ಎಸ್ & ಪಿ ಗ್ಲೋಬಲ್ ಸಿದ್ಧಪಡಿಸಿದೆ. ಭಾರತದ ಈ ಬೆಳವಣಿಗೆ  ನೆರೆಯ ಪಾಕಿಸ್ತಾನ ಮತ್ತು ಚೀನಾಗೆ ಶಾಕ್ ನೀಡಿರೋದಂತು ಸತ್ಯ.

Read more Photos on
click me!

Recommended Stories