ಆಪಲ್‌ ಕಂಪನಿಯ ಬೃಹತ್‌ ಆದಾಯದ ಮೂಲವೇನು, ಕಂಪನಿ ಹಣ ಸಂಪಾದಿಸೋದು ಹೇಗೆ?

First Published Sep 20, 2024, 7:36 PM IST

ವಿಶ್ವದ ಅತ್ಯಂತ ಶ್ರೀಮಂತ ಕಂಪನಿಗಳಲ್ಲೊಂದಾದ ಆಪಲ್‌, ತನ್ನ ಫ್ಲ್ಯಾಗ್‌ಶಿಪ್‌ ಐಫೋನ್‌ಗಳ ಮಾರಾಟದಿಂದ ಬರೋಬ್ಬರಿ 200.6 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಗಳಿಸುತ್ತದೆ. ಐಫೋನ್‌ಗಳ ಬಳಿಕ ಆಪಲ್‌ಗೆ ಹೆಚ್ಚಿನ ಆದಾಯ ತಂದುಕೊಡುವ ಇನ್ನಿತರ ಉತ್ಪನ್ನಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಎಲ್ಲರಿಗೂ ಗೊತ್ತಿರುವ ಹಾಗೆ ಐಫೋನ್‌ಗಳನ್ನು ಉತ್ಪಾದಿಸಿರುವ ಆಪಲ್‌, ವಿಶ್ವದ ಅತ್ಯಂತ ಶ್ರೀಮಂತ ಕಂಪನಿ. ಈ ಕಂಪನಿಯ ಮಾರುಕಟ್ಟೆ ಮೌಲ್ಯವೇ 3.6 ಟ್ರಿಲಿಯನ್‌ ಯುಎಸ್‌ ಡಾಲರ್‌. ಹೆಚ್ಚೂ ಕಡಿಮೆ ವಿಶ್ವದ ಹಲವು ದೇಶಗಳ ವಾರ್ಷಿಕ ಬಜೆಟ್‌ಗಿಂತ ಹೆಚ್ಚಿನ ಮೌಲ್ಯವನ್ನು ಆಪಲ್‌ ಕಂಪನಿ ಹೊಂದಿದೆ.

ಹೀಗಿರುವಾಗ ಆಪಲ್‌ ಕಂಪನಿ ಇಷ್ಟು ಹಣ ಮಾಡಿದ್ದು ಹೇಗೆ ಅನ್ನೋದರ ಕುರಿತು ಸಾಕಷ್ಟು ಕುತೂಹಲ ಇರಬಹುದು. ಇಂದು ವಿಶ್ವದಾದ್ಯಂತ 530ಕ್ಕೂ ಅಧಿಕೃತ ರಿಟೇಲ್‌ ಸ್ಟೋರ್‌ಗಳನ್ನು ಹೊಂದಿರುವ ಆಪಲ್‌ ಕಂಪನಿ ದೊಡ್ಡ ಮಟ್ಟದಲ್ಲಿ ಹಣ ಸಂಪಾದನೆ ಮಾಡುವುದು ತನ್ನ ಮೊಬೈಲ್‌ ಫೋನ್‌ಗಳಿಂದ.
 

Latest Videos


2023ರಲ್ಲಿ ಸ್ವತಃ ಕಂಪನಿಯೇ ನೀಡಿದ ಮಾಹಿತಿಯ ಅನ್ವಯ ಹೇಳುವುದಾದರೆ, ಆಪಲ್‌ ತನ್ನ ಫ್ಲ್ಯಾಗ್‌ಶಿಪ್‌ ಐಫೋನ್‌ಗಳ ಮಾರಾಟದಿಂದ ಬರೋಬ್ಬರಿ 200.6 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಸಂಗ್ರಹ ಮಾಡುತ್ತದೆ.
 

ಐಫೋನ್‌ಗಳ ಮಾರಾಟದ ಬಳಿಕ ಫೋನ್‌ಗಳಿಗೆ ನೀಡುವ ಸರ್ವೀಸ್‌ಗಳ ಕಾರಣದಿಂದ 2ನೇ ದೊಡ್ಡ ಮಟ್ಟದ ಹಣವನ್ನು ಆಪಲ್‌ ಸಂಗ್ರಹ ಮಾಡುತ್ತದೆ. ಐಫೋನ್‌ ಸೇರಿದಂತೆ ಆಪಲ್‌ನ ವಿವಿಧ ಉತ್ಪನ್ನಗಳ ಸರ್ವೀಸ್‌ಗಳಿಂದ 85.2 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಸಂಗ್ರಹ ಮಾಡುತ್ತದೆ.


ನಂತರದ ಸ್ಥಾನದಲ್ಲಿ ಬರುವುದು ಆಪಲ್‌ನ ವಿವಿಧ ಆಕ್ಸಸರೀಸ್‌ಗಳು. ಅಂದರೆ, ವಿವಿಧ ರೀತಿಯ ಚಾರ್ಜರ್‌ಗಳು, ಹೆಡ್‌ಫೋನ್‌ಗಳು, ಅಡಾಪ್ಟರ್‌ಗಳು, ಕಂಪ್ಯೂಟರ್‌ನ ಉತ್ಪನ್ನಗಳು ಇವುಗಳ ಮಾರಾಟದಿಂದ ಆಪಲ್‌ ಕಂಪನಿ 39.8 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಸಂಗ್ರಹ ಮಾಡುತ್ತದೆ.
 


ಆಪಲ್‌ ಕಂಪನಿ ತನ್ನ ಐಫೋನ್‌ಗಳ ಬಳಿಕ ದೊಡ್ಡ ಮಟ್ಟದ ಹಣವನ್ನು ಸಂಗ್ರಹ ಮಾಡುವ ಇನ್ನೊಂದು ಉತ್ಪನ್ನವೆಂದರೆ, ಅದು ಐಮ್ಯಾಕ್‌ ಕಂಪ್ಯೂಟರ್‌ಗಳು. ಐಮ್ಯಾಕ್‌ ಕಂಪ್ಯೂಟರ್‌ಗಳ ಮಾರಾಟದಿಂದ 29.4 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಸಂಪಾದಿಸುತ್ತದೆ.
 

ಆಪಲ್‌ ಕಂಪನಿಗೆ ದೊಡ್ಡ ಮಟ್ಟದ ಕೊಡುಗೆ ನೀಡುವ ಇನ್ನೊಂದು ಉತ್ಪನ್ನವೆಂದರೆ ಅದು ಐಪ್ಯಾಡ್‌ಗಳು. ಐಪ್ಯಾಡ್‌ ಟ್ಯಾಬ್ಲೆಟ್‌ಗಳ ಮಾರಾಟದಿಂದ ಕಂಪನಿ 28.3 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಸಂಪಾದನೆ ಮಾಡುತ್ತದೆ.

ಇದನ್ನೂ ಓದಿ: ಐಫೋನ್‌ 15 ಮೇಲೆ ಭರ್ಜರಿ 54,500 ರೂಪಾಯಿ ಡಿಸ್ಕೌಂಟ್‌, ಫ್ಲಿಪ್‌ಕಾರ್ಟ್‌ನಲ್ಲಿ ಈಗಲೇ ಖರೀದಿಸಿ!


ಇನ್ನು ಆಪಲ್‌ ಕಂಪನಿಯ ಉತ್ಪನ್ನಗಳ ಬಗ್ಗೆ ಹೇಳುವುದಾದರೆ, ಐಫೋನ್‌, ಐಮ್ಯಾಕ್‌, ಐಪ್ಯಾಡ್‌ಗಳಲ್ಲದೆ, ಏರ್‌ಪಾಡ್ಸ್‌, ಆಪಲ್‌ ಟಿವಿ, ಆಪಲ್‌ ವಾಚ್‌ ಹಾಗೂ ಆಪಲ್‌ ವಿಷನ್‌ ಪ್ರೋ ಉತ್ಪನ್ನಗಳನ್ನು ತಯಾರಿಸಿ ವಿಶ್ವದಾದ್ಯಂತ ಮಾರಾಟ ಮಾಡುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಐಫೋನ್‌ಗೆ ಬಂತು ಸಿನಿಮಾ ಕ್ರೇಜ್, ರಾತ್ರಿಯಿಂದಲೇ ಕ್ಯೂ ನಿಂತು ಐಫೋನ್ 16 ಖರೀದಿಸಿದ ಗಾಯಕ!

click me!