2. ಹ್ಯಾಂಡ್‌ಮೇಡ್ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ
ಕರಕುಶಲ ವಸ್ತುಗಳು ಮತ್ತು ನೀವೇ ಸ್ವತಃ ತಯಾರಿಸಿದ (Do It Yourself-DIY) ಉತ್ಪನ್ನಗಳ ಟ್ರೆಂಡ್ ಬಹಳಷ್ಟು ಹೆಚ್ಚುತ್ತಿದೆ. ಮನೆ ಅಲಂಕಾರ, ಆಭರಣಗಳು, ಮೇಣದಬತ್ತಿಗಳು, ಚರ್ಮದ ಆರೈಕೆ ಅಥವಾ ಅಡುಗೆಮನೆ ಉತ್ಪನ್ನಗಳನ್ನು ತಯಾರಿಸಬಹುದು.
Amazon, Flipkart, Instagram, Facebook ನಂತಹ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದು. ಉತ್ತಮ ಗುಣಮಟ್ಟ ಮತ್ತು ವಿಶಿಷ್ಟ ವಿನ್ಯಾಸಗಳು ಬೇಗನೆ ಗ್ರಾಹಕರನ್ನು ಆಕರ್ಷಿಸುತ್ತವೆ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸಬಹುದು.