ಬಹುದಿನಗಳ ಬಳಿಕ ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಹೀಗಿದೆ ಇಂದಿನ ರೇಟ್!

First Published | Mar 22, 2021, 11:52 AM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಮಾರ್ಚ್ 22ರ ಗೋಲ್ಡ್ ರೇಟ್

ಕೊರೋನಾ ಹಾವಳಿಯಿಂದ ಬೆಲೆ ಏರಿಕೆ ಕಂಡಿದ್ದ ಚಿನ್ನದ ಮೌಲ್ಯ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.
undefined
ಅತ್ತ ಲಾಕ್‌ಡೌನ್‌ನಿಂದ ಕಂಗಾಲಾಗಿದ್ದ ಜನರಿಗೆ ಚಿನ್ನದ ದರ ಏರಿಕೆ ಮತ್ತೊಂದು ಶಾಕ್ ಕೊಟ್ಟಿತ್ತು.
undefined

Latest Videos


ಶುಭ ಕಾರ್ಯ ನಿಗಧಿಪಡಿಸಿದ್ದವರು ಬೇರೆ ಉಪಾಯವಿಲ್ಲದೇ ದುಬಾರಿ ಬೆಲೆಗೆ ಚಿನ್ನ ಖರೀದಿಸಿದ್ದರು.
undefined
ಲಾಕ್‌ಡೌನ್ ಮುಗಿದು, ಕೊರೋನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯತೇ ಚಿನ್ನದ ದರ ಕೊಂಚ ಇಳಿಕೆಯಾಗಿತ್ತು.
undefined
ಇದಾದ ಬಳಿಕ ಬಜೆಟ್‌ ಮಂಡನೆ ನಡೆದಿತ್ತು. ಬಜೆಟ್‌ ಟಾನಿಕ್‌ ಬಳಿಕ ಚಿನ್ನದ ದರ ಏಕಾಏಕಿ ಕುಸಿದಿತ್ತು. ಇದು ಗ್ರಾಹಕರ ಖುಷಿಗೆ ಕಾರಣವಾಗಿತ್ತು.
undefined
ಹೀಗಿದ್ದರೂ ಕಳೆದೊಂದು ವಾರದಿಂದ ಚಿನ್ನದ ದರ ಏರಿಕೆ ಇಳಿಕೆಯಾಟ ಆಡುತ್ತಿತ್ತು.
undefined
ಸದ್ಯ ಚಿನ್ನದ ದರ ಮತ್ತೆ ಇಳಿಕೆ ಹಾದಿ ಹಿಡಿದಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 190 ರೂ. ಇಳಿಕೆಯಾಗಿ ದರ 42,050 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 200ರೂ. ಇಳಿಕೆಯಾಗಿ 45,880ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 67,500ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ
undefined
click me!