ಚಿನ್ನ ಪ್ರಿಯರಿಗೆ ಏಕಾಏಕಿ ಶಾಕ್: 10 ದಿನದ ಬಳಿಕ ಏರಿದ ದರ!

First Published Jun 22, 2021, 4:31 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಏರಿಕೆ| ಚಿನ್ನ ಖರೀದಿ ಮಾಡೋದೇ ಉತ್ತಮ| ಹೀಗಿದೆ ನೋಡಿ ಜೂನ್ 22 ಗೋಲ್ಡ್ ರೇಟ್

ಚಿನ್ನ ಅಂದ್ರೆ ಹೆಣ್ಮಕ್ಕಳಿಗೆ ಬಹಳ ಇಷ್ಟ. ಆದರೆ ಚಿನ್ನದ ದರ ಏರಿಕೆ ಬಂಗಾರ ಖರೀದಿಗೆ ಆಗಾಗ ಬ್ರೇಕ್ ಹಾಕುತ್ತಿರುತ್ತದೆ.
undefined
ಕೊರೋನಾ ಯಾವಾಗ ದೇಶದ ಮೇಲೆ ವಕ್ರದೃಷ್ಟಿ ಬೀರಿತೋ ಅಂದಿನಿಂದ ಚಿನ್ನದ ದರ ಏರಿಳಿತ ಆಗುತ್ತಲೇ ಇದೆ.
undefined
ಕೊರೋನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಈ ವರ್ಷದ ಆರಂಭದಲ್ಲಿ ಇಳಿಕೆ ಕಂಡಿತ್ತು.
undefined
ಆದರೆ ಕೊರೋನಾ ಏರುತ್ತಿದ್ದಂತೆಯೇ ಮತ್ತೆ ಕೊಂಚ ಕೊಂಚವಾಗಿ ಏರಿಕೆಯಾಗಲಾರಂಭಿಸಿತ್ತು.
undefined
ಆದರೀಗ ಗರಿಷ್ಠ ಮಟ್ಟಕ್ಕೆ ತಲುಪಿರುವ ಕೊರೋನಾ ಮತ್ತೆ ಇಳಿಕೆಯಾಗಿದ್ದು, ಚಿನ್ನದ ದರವೂ ಇಳಿಕೆಯಾಗಿತ್ತು.
undefined
ಕಳೆದ ಹತ್ತು ದಿನಗಳಿಂದ ಇಳಿಕೆ ಹಾದಿ ಹಿಡಿದಿದ್ದ ಚಿನ್ನ ಗ್ರಾಹಕರ ಖುಷಿಗೆ ಕಾರಣವಾಗಿತ್ತು. ಆದರೀಗ ಏಕಾಏಕಿ ಚಿನ್ನದ ದರ ಏರಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 200 ರೂ. ಏರಿಕೆಯಾಗಿ ದರ 44,100 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 220ರೂ. ಏರಿಕೆಯಾಗಿ 48,110ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 67,800ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.
undefined
click me!