ಚಿನ್ನ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು, ಅದರಲ್ಲೂ ಭಾರತೀಯ ಮಹಿಳೆಯರಿಗೆ ಈ ಹಳದಿ
ಆದರೆ ಹೆಣ್ಮಕ್ಕಳ ಚಿನ್ನ ಖರೀದಿಗೆ ಸದ್ಯ ಕೊರೋನಾ ಬಹುದೊಡ್ಡ ಬ್ರೇಕ್ ಹಾಕಿತ್ತು
ಒಂದೆಡೆ ಸೋಂಕು ಏರಿದರೆ, ಇತ್ತ ಚಿನ್ನದ ದರವೂ ಗಗನಕ್ಕೇರಿತ್ತು.
ಹೌದು ಕೊರೋನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಬಳಿಕ ಕೊಂಚ ಇಳಿಕೆ ಕಂಡಿತ್ತು.
ಇನ್ನು ಈ ವರ್ಷದ ಆರಂಭದಲ್ಲಿ ಚಿನ್ನ ದಾಖಲೆಯ ಕುಸಿತ ಕಂಡಿತ್ತು. ಇದು ಚಿನ್ನ ಪ್ರಿಯರನ್ನು ಬಹಳ ಸಂತಸಕ್ಕೀಡು ಮಾಡಿತ್ತು.
ಆದರೆ ಕೊರೋನಾ ಎರಡನೇ ಅಲೆ ಯಾವಾಗ ದಾಳಿ ಇಟ್ಟಿತೋ ಇಳಿಯುತ್ತಿದ್ದ ಚಿನ್ನದ ದರಕ್ಕೂ ವಕ್ರದೃಷ್ಟಿ ಇತ್ತು.
ನೋಡ ನೋಡುತ್ತಿದ್ದಂತೆಯೇ ಚಿನ್ನ ಮತ್ತೆ ಏಣಿ ಏರಲಾರಂಭಿಸಿತ್ತು.
ಆದರೀಗ ಎರಡನೇ ಅಲೆ ಶಾಂತಗೊಳ್ಳುವ ಲಕ್ಷಣಗಳು ಕಂಡು ಬಂದಿವೆ, ಲಾಕ್‌ಡೌನ್ ನಿಯಮ ಕೊಂಚ ಸಡಿಲಗೊಳಿಸಲಾಗಿದೆ.
ಹೀಗಿರುವಾಗ ಚಿನ್ನದ ದರವೂ ಇಳಿಕೆ ಹಾದಿ ಹಿಡಿದು ಮತ್ತೆ ಗ್ರಾಹಕರನ್ನು ಸಂತಸಗೊಳಿಸಲಾರಂಭಿಸಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 500 ರೂ. ಇಳಿಕೆಯಾಗಿ ದರ 44,850 ರೂಪಾಯಿ ಆಗಿದೆ
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 540ರೂ. ಇಳಿಕೆಯಾಗಿ 48,930ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 70,300ರೂ ಆಗಿದೆ.
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.