Gold Price Details: ಆಗಸ್ಟ್ 9 ರಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ. ಚಿನ್ನ ಮತ್ತು ಬೆಳ್ಳಿ ಖರೀದಿಗೆ ಉತ್ತಮ ಸಮಯವಿದು. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿದುಕೊಳ್ಳಿ.
ಭಾರತದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಆಗಸ್ಟ್ 9ರಿಂದ ಇಳಿಕೆಯತ್ತ ಸಾಗುತ್ತಿರೋ ಚಿನ್ನ ದರ ಇಂದು ಸಹ ಕಡಿಮೆಯಾಗಿದೆ. ಹಾಗಾಗಿ ಚಿನ್ನ ಖರೀದಿಸೋದಕ್ಕೆ ಇಂತಹ ಸುಸಂದರ್ಭ ಮತ್ತೊಮ್ಮೆ ಸಿಗಲಾರದು.
26
ಈ ರೀತಿಯಾಗಿ ಇಳಿಕೆಯಾದ ನಂತರೇ ದಿಢೀರ್ ಅಂತ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆಯಾಗುತ್ತಿರೋ ಸಂದರ್ಭದಲ್ಲಿ ಬಂಗಾರ ಖರೀದಿಸೋದು ಜಾಣರ ನಡೆಯಾಗುತ್ತದೆ. ಇದೇ ರೀತಿ ಇಂದು ಜನರು ಬೆಳ್ಳಿ ಮೇಲಿನ ಹೂಡಿಕೆಯೂ ಅಧಿಕವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ಇಂದು ಭಾರತದಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಕಡಿಮೆಯಾಗಿದೆ. ಆದ್ರೆ ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ. 1000 ಗ್ರಾಂ ಬೆಳ್ಳಿಯಲ್ಲಿ 100 ರೂ.ಗಳಷ್ಟು ಹೆಚ್ಚಾಗಿದೆ. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
10 ಗ್ರಾಂ: 1,162 ರೂಪಾಯಿ
100 ಗ್ರಾಂ: 11,620 ರೂಪಾಯಿ
1000 ಗ್ರಾಂ: 1,16,200 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.