Published : Mar 04, 2025, 08:09 AM ISTUpdated : Mar 04, 2025, 08:10 AM IST
Gold And Silver Price Today: ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದಿನ ದರಗಳು, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳು, ಮತ್ತು ಪ್ರಮುಖ ನಗರಗಳಲ್ಲಿನ ಬೆಲೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಫೆಬ್ರವರಿ 26ಕ್ಕೆ ಚಿನ್ನದ ಬೆಲೆ ಕಡಿಮೆಯಾಗುತ್ತಾ ಬಂದಿದೆ. ಮಾರ್ಚ್ ತಿಂಗಳ ಎರಡು ದಿನ ಮಾತ್ರ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಉಳಿದಂತೆ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ.
27
ಇಂದು ಸಹ ಚಿನ್ನ ಮತ್ತಷ್ಟು ಹಗುರವಾಗಿದೆ. ನೀವೇನಾದರೂ ಚಿನ್ನ ಖರೀದಿಗೆ ಪ್ಲಾನ್ ಮಾಡಿಕೊಂಡದ್ದರೆ, ದರ ತಿಳಿದುಕೊಂಡು ಖರೀದಿಗೆ ತೆರಳಿ. ಮುಂಚಿತವಾಗಿ ಬೆಲೆಯ ಮಾಹಿತಿ ಪಡೆದುಕೊಂಡರೆ ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಸಿಗುತ್ತೆ ಎಂದು ಅಂದಾಜು ಸಿಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 79,390 ರೂಪಾಯಿ, ಮುಂಬೈ: 79,390 ರೂಪಾಯಿ, ದೆಹಲಿ: 79,540 ರೂಪಾಯಿ, ಕೋಲ್ಕತ್ತಾ: 79,390 ರೂಪಾಯಿ, ಬೆಂಗಳೂರು: 79,390 ರೂಪಾಯಿ, ಹೈದರಾಬಾದ್: 79,390 ರೂಪಾಯಿ.
67
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 969 ರೂಪಾಯಿ
100 ಗ್ರಾಂ: 9,690 ರೂಪಾಯಿ
1000 ಗ್ರಾಂ: 96,900 ರೂಪಾಯಿ
77
ಚಿನ್ನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಶನಿವಾರ ಬೆಲೆ ಇಳಿಕೆಯಾದ ನಂತರ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಸ್ಥಿರವಾಗಿದೆ. ಶನಿವಾರದ ಬೆಲೆಯಲ್ಲಿಯೇ ಇಂದು ಚಿನ್ನ ಖರೀದಿಸಬಹುದು.