Gold Loans: ಭಾರತದಲ್ಲಿ ಗೋಲ್ಡ್ ಲೋನ್ ಈಗ ಕೇವಲ ತುರ್ತು ಸಂದರ್ಭದಲ್ಲಿ ಪಡೆಯುವ ಸಾಲವಾಗಿ ಉಳಿದಿಲ್ಲ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಹಣಕಾಸು ಆಯ್ಕೆಯಾಗಿ ಬದಲಾಗಿದೆ. ಹಾಗಿದ್ರೆ, ದೇಶದ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಗೋಲ್ಡ್ ಲೋನ್‌ಗಳನ್ನು ಪಡೆಯಲಾಗುತ್ತಿದೆ ಎಂದು ನೋಡೋಣ.
ಇಂದಿನ ದಿನಗಳಲ್ಲಿ ಚಿನ್ನ ಕೇವಲ ಆಭರಣವಲ್ಲ, ತುರ್ತು ಸಂದರ್ಭದಲ್ಲಿ ನೆರವಾಗುವ ಆರ್ಥಿಕ ಸಾಧನವಾಗಿದೆ. ಹಣದ ಅವಶ್ಯಕತೆ ಇದ್ದಾಗ, ಬ್ಯಾಂಕ್‌ನಲ್ಲಿ ಹೆಚ್ಚು ಪ್ರಕ್ರಿಯೆಗಳಿಲ್ಲದೆ ಚಿನ್ನ ಅಡವಿಟ್ಟು ತಕ್ಷಣ ಸಾಲ ಪಡೆಯಬಹುದು. ಹೀಗಾಗಿಯೇ ಗೃಹಸಾಲದ ನಂತರ ಗೋಲ್ಡ್ ಲೋನ್ ಎರಡನೇ ಸ್ಥಾನದಲ್ಲಿದೆ. ದೇಶಾದ್ಯಂತ ಇದರ ಮಾರುಕಟ್ಟೆ ಮೌಲ್ಯ ಸುಮಾರು ₹16.8 ಲಕ್ಷ ಕೋಟಿಗೆ ತಲುಪಿದ್ದು, ಕಳೆದ ಕೆಲವು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ.
26
ದಕ್ಷಿಣ ಭಾರತದ್ದೇ ಸಿಂಹಪಾಲು
ಗೋಲ್ಡ್ ಲೋನ್ ಪಡೆಯುವ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಬೇರೆಲ್ಲಾ ಪ್ರದೇಶಗಳಿಗಿಂತ ಮುಂದಿವೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳು ದೇಶದ ಒಟ್ಟು ಗೋಲ್ಡ್ ಲೋನ್ ಮಾರುಕಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ. ಈ ಪ್ರದೇಶಗಳಲ್ಲಿ ಚಿನ್ನವನ್ನು ಕೂಡಿಡುವ ಸಂಸ್ಕೃತಿ ಹೆಚ್ಚಾಗಿರುವುದು ಮತ್ತು ಅಗತ್ಯವಿದ್ದಾಗ ಅದನ್ನು ಸುಲಭವಾಗಿ ನಗದಾಗಿ ಪರಿವರ್ತಿಸಿಕೊಳ್ಳುವ ಅಭ್ಯಾಸವೇ ಈ ಟ್ರೆಂಡ್‌ಗೆ ಕಾರಣ.
36
ಟಾಪ್ 5 ರಾಜ್ಯಗಳ ಪಟ್ಟಿ ಇಲ್ಲಿದೆ
ದೇಶದಲ್ಲಿ ಅತಿ ಹೆಚ್ಚು ಗೋಲ್ಡ್ ಲೋನ್ ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಈ ರಾಜ್ಯವೊಂದೇ ದೇಶದ ಒಟ್ಟು ಮಾರುಕಟ್ಟೆಯಲ್ಲಿ ಸುಮಾರು 25.8% ಪಾಲನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ 13.6% ಮಾರುಕಟ್ಟೆ ಪಾಲನ್ನು ಹೊಂದಿದೆ.
ಕರ್ನಾಟಕ 11.7% ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೇರಳ 9% ಪಾಲಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ತೆಲಂಗಾಣ 8.8% ಪಾಲಿನೊಂದಿಗೆ ಐದನೇ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ ಇತ್ತೀಚೆಗೆ ಗೋಲ್ಡ್ ಲೋನ್ ಬಳಕೆ ವೇಗವಾಗಿ ಹೆಚ್ಚುತ್ತಿರುವುದು ವಿಶೇಷ.
56
ಮಹಾರಾಷ್ಟ್ರದಂತಹ ರಾಜ್ಯಗಳು ಗೋಲ್ಡ್ ಲೋನ್‌ನತ್ತ ಮುಖ ಮಾಡಿವೆ
ದಕ್ಷಿಣದ ರಾಜ್ಯಗಳ ನಂತರ, ಮಹಾರಾಷ್ಟ್ರದಂತಹ ರಾಜ್ಯಗಳು ಕೂಡ ಗೋಲ್ಡ್ ಲೋನ್‌ನತ್ತ ಮುಖ ಮಾಡಿವೆ. ಈ ರಾಜ್ಯದಲ್ಲಿ ಮಾರುಕಟ್ಟೆ ಪಾಲು ಕಡಿಮೆಯಿದ್ದರೂ, ಬೆಳವಣಿಗೆಯ ದರ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿಯೂ ಗೋಲ್ಡ್ ಲೋನ್ ಬಳಕೆ ಕ್ರಮೇಣ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಮತ್ತು ಜನರಲ್ಲಿ ಆರ್ಥಿಕ ಅರಿವು ಹೆಚ್ಚಾಗುತ್ತಿರುವುದು ಈ ಬದಲಾವಣೆಗೆ ಕಾರಣ.
66
ಚಿನ್ನದ ಮೇಲೆ ಭಾವನಾತ್ಮಕ ಸಂಬಂಧ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಿನ್ನದ ಮೇಲೆ ವಿಶೇಷವಾದ ಭಾವನಾತ್ಮಕ ಸಂಬಂಧವಿದೆ. ಇಲ್ಲಿನ ಕುಟುಂಬಗಳು ಹೆಚ್ಚಾಗಿ ಚಿನ್ನವನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ ಮತ್ತು ಅಗತ್ಯವಿದ್ದಾಗ ಅದನ್ನು ಬಳಸಿಕೊಳ್ಳುವುದು ಸಾಮಾನ್ಯ. ಅಷ್ಟೇ ಅಲ್ಲದೆ, ಈ ಪ್ರದೇಶಗಳಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ವ್ಯಾಪಕವಾಗಿರುವುದರಿಂದ ಗೋಲ್ಡ್ ಲೋನ್ ಪಡೆಯುವುದು ತುಂಬಾ ಸುಲಭವಾಗಿದೆ. ಈ ಎಲ್ಲಾ ಕಾರಣಗಳು ದಕ್ಷಿಣದ ರಾಜ್ಯಗಳನ್ನು ಈ ಕ್ಷೇತ್ರದಲ್ಲಿ ಮುಂದಿಟ್ಟಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.