ಭಾರತಕ್ಕೆ ಸಿಕ್ತು 4 ಚಿನ್ನದ ಭಂಡಾರ; ದೇಶದ ಶ್ರೀಮಂತ ರಾಜ್ಯದಲ್ಲಿ ಶುರುವಾಯ್ತು ಉತ್ಖನನ!

Published : May 27, 2025, 12:16 PM IST

Gold Mines: ಭಾರತದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಉತ್ಖನನ ಆರಂಭವಾಗಿದೆ. ಈ ಚಿನ್ನದ ನಿಕ್ಷೇಪದಿಂದ ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆಯಿದೆ.

PREV
17

ಭಾರತದಲ್ಲಿ ಚಿನ್ನದ ಉತ್ಪಾದನೆ ಅಂದ್ರೆ ನೆನಪಾಗೋದು ಕರ್ನಾಟಕ. ಆದ್ರೀಗ ದೇಶದ ಮತ್ತೊಂದು ರಾಜ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದೀಗ ಚಿನ್ನದ ಉತ್ಖನನವೂ ಸಹ ಆರಂಭವಾಗಿದೆ.

27

ಭಾರತದಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಲಿದೆ. ಎರಡು ದಿನ ಬೆಲೆ ಇಳಿಕೆಯಾದ್ರೆ ಮೂರನೇ ದಿನ ಏರಿಕೆಯಾಗಿರುತ್ತದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತಿರುವ ಕಾರಣ ಬೆಲೆ ಏರಿಕೆಯಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. 10 ಗ್ರಾಂ ಚಿನ್ನದ ಬೆಲೆ ಲಕ್ಷದ ಗಡಿ ದಾಟಿದ್ರೂ ಬೇಡಿಕೆಯೂ ಕೊಂಚವೂ ಇಳಿಕೆಯಾಗಿಲ್ಲ.

37

ಇದೀಗ ಭಾರತದ ರಾಜ್ಯವೊಂದರಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಉತ್ಖನನ ಆರಂಭವಾಗಿದ್ದು, ಇಲ್ಲಿಯ ಚಿನ್ನದ ಲಭ್ಯತೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಬಹುದು. ಈ ಚಿನ್ನದ ಭಂಡಾರದಿಂದ ಹಲವು ದೇಶಗಳನ್ನು ಭಾರತ ಹಿಂದಿಕ್ಕಬಹುದು ಎಂದು ವರದಿಯಾಗುತ್ತಿದೆ.

47

ಮಧ್ಯಪ್ರದೇಶದ ಸಿಂಗ್ರೌಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತದೆ. ಇದೀಗ ಸಿಂಗ್ರೌಲಿ ಭೂ ಒಡಲಿನಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇಲ್ಲಿಯ ನಾಲ್ಕು ಚಿನ್ನದ ಗಣಿಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಈ ನಾಲ್ಕು ಬ್ಲಾಗ್‌ಗಳನ್ನು ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ.

57

ನಾಲ್ಕು ಗಣಿಗಳಲ್ಲಿ ಚಿನ್ನದ ಗಣಿಗಾರಿಕೆ ಕೆಲಸ ವೇಗದಿಂದ ನಡೆಯುತ್ತಿದ್ದು, ಬಂಗಾರ ಹೊರ ತೆಗೆಯಲು ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ. ಚಕಾರಿಯ, ಸಿಲ್ಫೋರಿ-ಸಿಧಾರ್, ಅಮಿಲ್ಹಾವಾ ಮತ್ತು ಚುನ್‌ಪುರ್ವಾ ಎಂಬ ನಾಲ್ಕು ಬ್ಲಾಕ್‌ಗಳು ಚಿನ್ನದಿಂದ ಭರಪೂರಗೊಂಡಿವೆ. ಖನಿಜ ಇಲಾಖೆಯ ಮೇಲ್ವಿಚಾರಣೆಯಲ್ಲಿ ಚಿನ್ನ ತೆಗೆಯುವ ಕಾರ್ಯ ನಡೆಯುತ್ತಿದೆ.

67

ಎಷ್ಟು ಚಿನ್ನ ಸಿಗಲಿದೆ?

ಸದ್ಯದ ವರದಿಗಳ ಪ್ರಕಾರ, ಪ್ರತಿ ಟನ್ ವಸ್ತುವಿನಲ್ಲಿ 1.02 ರಿಂದ 1.5 ಗ್ರಾಂ ಚಿನ್ನ ಕಂಡುಬರುವ ಸಾಧ್ಯತೆಗಳಿವೆ. ಆದ್ರೆ ಭವಿಷ್ಯದಲ್ಲಿ ಇಲ್ಲಿಂದ ಅಪಾರ ಚಿನ್ನ ಸಿಗುವ ಸಾಧ್ಯತೆಗಳಿವೆ. ದೊಡ್ಡ ಪ್ರಮಾಣದ ಗಣಿಗಾರಿಕೆಯಿಂದ, ಕೋಟ್ಯಂತರ ಮೌಲ್ಯದ ಚಿನ್ನವನ್ನು ಹೊರತೆಗೆಯಬಹುದು. ಈ ನಾಲ್ಕು ಗಣಿಗಳಿಂದ ವಾರ್ಷಿಕ 250 ಕೋಟಿ ರೂಪಾಯಿ ಆದಾಯ ಲಭ್ಯವಾಗುವ ನಿರೀಕ್ಷೆಗಳಿವೆ.

77

ಉತ್ಖನನ ಕಾರ್ಯದಲ್ಲಿ ಆಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಹೆಚ್ಚು ಚಿನ್ನವನ್ನು ಹೊರತೆಗೆಯಲು ಕಂಪನಿಗಳು ವೇಗವಾಗಿ ಕೆಲಸ ಮಾಡುತ್ತಿವೆ. ಇದರಿಂದ ರಾಜ್ಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ. ಈ ಮೂಲಕ ಮಧ್ಯಪ್ರದೇಶ ಸಂಪತ್ತು ಭರಿತ ರಾಜ್ಯವಾಗಲಿದೆ. ಭೂಪಟದಲ್ಲಿ ಚಿನ್ನದ ಉತ್ಖನನದಿಂದಲೇ ಗುರುತಿಸಿಕೊಳ್ಳಲಿದೆ ಎಂದು ಖನಿಜ ಅಧಿಕಾರಿ ಕಪಿಲ್ ಮುನಿ ಶುಕ್ಲಾ ಭವಿಷ್ಯ ನುಡಿದಿದ್ದಾರೆ.

Read more Photos on
click me!

Recommended Stories