ಕಳೆದ ಐದು ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇತ್ತು. ಆದ್ರೆ ಇಂದು ಚಿನ್ನದ ಬೆಲೆಯಲ್ಲಿ ದರ ಇಳಿಕೆಯಾಗಿದೆ. ಇಂದು ಭಾರತದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ನಿನ್ನೆಯಷ್ಟೇ 1 ಕೆಜಿ ಬೆಳ್ಳಿ ಬರೋಬ್ಬರಿ 1 ಲಕ್ಷ ರೂ.ಗಳಾಗಿತ್ತು. ಆದರೆ ಇಂದು ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಇಳಿಕೆಯಾಗಿದೆ. ಜೇಬಿನಲ್ಲಿ ಏನಾದ್ರೂ ಹಣ ಉಳಿದುಕೊಂಡಿದ್ರೆ ಇಂದೇ ಚಿನ್ನವನ್ನು ಖರೀದಿಸಿ. ಚಿನ್ನವನ್ನು ಆಪತ್ಕಾಲದ ನೆಂಟ ಅಂತಾನೂ ಕರೆಯಲಾಗುತ್ತದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,769 ರೂಪಾಯಿ
8 ಗ್ರಾಂ: 70,152 ರೂಪಾಯಿ
10 ಗ್ರಾಂ: 87,690 ರೂಪಾಯಿ
100 ಗ್ರಾಂ: 8,76,900 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,566 ರೂಪಾಯಿ
8 ಗ್ರಾಂ: 76,528 ರೂಪಾಯಿ
10 ಗ್ರಾಂ: 95,660 ರೂಪಾಯಿ
100 ಗ್ರಾಂ: 9,56,600 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,175 ರೂಪಾಯಿ
8 ಗ್ರಾಂ: 57,400 ರೂಪಾಯಿ
10 ಗ್ರಾಂ: 71,750 ರೂಪಾಯಿ
100 ಗ್ರಾಂ : 7,17,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,690 ರೂಪಾಯಿ, ಬೆಂಗಳೂರು: 87,690 ರೂಪಾಯಿ, ಮುಂಬೈ: 87,690 ರೂಪಾಯಿ, ದೆಹಲಿ: 87,840 ರೂಪಾಯಿ, ಕೋಲ್ಕತ್ತಾ: 87,690 ರೂಪಾಯಿ, ಕೇರಳ: 87,690 ರೂಪಾಯಿ, ಹೈದರಾಬಾದ್: 87,690 ರೂಪಾಯಿ, ಪುಣೆ: 87,690 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 999 ರೂಪಾಯಿ
100 ಗ್ರಾಂ: 9,990 ರೂಪಾಯಿ
1000 ಗ್ರಾಂ: 99,900 ರೂಪಾಯಿ
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?
ಇಂದು 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ.ಗಳಷ್ಟು ಇಳಿಕೆ ಕಂಡು ಬಂದಿದೆ. ಇನ್ನು 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ.ಗಳಷ್ಟು ಇಳಿಕೆಯಾಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ದರ ಇಳಿಕೆಯಾದ ಸಂದರ್ಭದಲ್ಲಿ ಖರೀದಿಸೋದು ಉತ್ತಮ.