ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ 10 ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡಿದ್ದು, ಆಭರಣ ಖರೀದಿಸುವವರು ಇದೀಗ ನಿಧಾನವಾಗಿ ಬಂಗಾರದ ಅಂಗಡಿಗಳತ್ತ ಮುಖ ಮಾಡಲಾರಂಭಿಸಿದ್ದಾರೆ.
ಚಿನ್ನ ಖರೀದಿಸುವವರಿಗೆ ಇದೀಗ ಶುಕ್ರದೆಶೆ ಶುರವಾದಂತೆ ಕಾಣುತ್ತಿದೆ. ಯಾಕೆಂದರೆ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದೆ. ಹೀಗಾಗಿ ಆಭರಣ ಖರೀದಿಸುವವರು ಇದೀಗ ಬಂಗಾರದ ಅಂಗಡಿಗಳತ್ತ ದಾಪುಗಾಲು ಹಾಕುತ್ತಿದ್ದಾರೆ.
26
ಕಳೆದ 10 ದಿನದಲ್ಲಿ 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 4910 ರುಪಾಯಿ ಕುಸಿತ
ಹೌದು, ಕಳೆದ 10 ದಿನಗಳಲ್ಲಿ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4910 ರುಪಾಯಿ ಇಳಿಕೆಯಾಗಿದೆ. ಇನ್ನು 100 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕಳೆದ 10 ದಿನಗಳಲ್ಲಿ ಬರೋಬ್ಬರಿ 49,100 ರುಪಾಯಿ ಇಳಿಕೆಯಾದಂತೆ ಆಗಿದೆ.
36
ಶನಿವಾರ ಒಂದೇ ದಿನ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 300 ರುಪಾಯಿ ಕುಸಿತ
ಇದೀಗ ಜೂನ್ 07ರಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,273 ರುಪಾಯಿ ಆಗಿದೆ. ಈ ಮೂಲಕ ಚಿನ್ನದ ಬೆಲೆ ಜೂನ್ ತಿಂಗಳಲ್ಲೇ ಅತ್ಯಂತ ಕಡಿಮೆಗೆ ಕುಸಿತ ಕಂಡಂತೆ ಆಗಿದೆ. ಜೂನ್ 06ರಂದು ಒಂದೇ ದಿನ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 300 ರುಪಾಯಿ ಇಳಿಕೆಯಾಗಿತ್ತು.
22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 4500 ರುಪಾಯಿ ಕುಸಿತ
ಇನ್ನು ಆಭರಣ ಚಿನ್ನಕ್ಕೆ ಹೆಸರುವಾಸಿಯಾಗಿರುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೂ ಕಳೆದ 10 ದಿನಗಳಲ್ಲಿ 4,500 ರುಪಾಯಿ ಇಳಿಕೆಯಾಗಿದೆ. ಇದೀಗ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14 ಸಾವಿರ ರುಪಾಯಿಗಳಾಗಿದೆ. ಇದು ಆಭರಣ ಖರೀದಿಸುವವರ ಮುಖದಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.
56
ಸ್ಥಿರವಾಗಿ ಉಳಿದ ಬೆಳ್ಳಿ ಬೆಲೆ
ಇನ್ನು ಬೆಳ್ಳಿ ಬೆಲೆಯಲ್ಲಿ ಕೂಡಾ ಯಾವುದೇ ವ್ಯತ್ಯಾಸವಾಗಿಲ್ಲ. ಇದೀಗ ಜೂನ್ 07ರಂದು ಒಂದು ಕೆಜಿ ಬೆಳ್ಳಿ ಬೆಲೆ 2,65,000 ರುಪಾಯಿಗಳಾಗಿದ್ದು, ಮುಂಬರುವ ದಿನಗಳಲ್ಲಿ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಾಣುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
66
ಸಾಮಾನ್ಯ ವರ್ಗದ ಜನರಿಗೆ ಗುಡ್ ನ್ಯೂಸ್
ಒಟ್ಟಾರೆಯಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರ ಇಳಿಕೆಯಾಗುತ್ತಿರುವುದು ಸಾಮಾನ್ಯ ಮಧ್ಯಮ ವರ್ಗದ ಆಭರಣ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿರುವುದಂತೂ ಸುಳ್ಳಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.