ಸಂಬಳದಲ್ಲಿ ಖರ್ಚು-ವೆಚ್ಚ ತೆಗೆದು ಇನ್ನು ಹಣ ಉಳಿದಿದ್ಯಾ? ಹಾಗಿದ್ರೆ ಖರೀದಿಸಿ ಚಿನ್ನ, ಬೆಲೆ ಇಳಿಕೆ ನಂತರ ಪರಿಷ್ಕೃತ ದರ ಇಲ್ಲಿದೆ

Published : Mar 18, 2025, 07:42 AM ISTUpdated : Mar 18, 2025, 07:43 AM IST

Gold And Silver Price Today: ತಿಂಗಳ ಸಂಬಳದಲ್ಲಿ ಉಳಿದ ಹಣದಲ್ಲಿ ಚಿನ್ನ ಖರೀದಿಸಲು ಇದು ಸಕಾಲ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

PREV
17
ಸಂಬಳದಲ್ಲಿ ಖರ್ಚು-ವೆಚ್ಚ ತೆಗೆದು ಇನ್ನು ಹಣ ಉಳಿದಿದ್ಯಾ? ಹಾಗಿದ್ರೆ  ಖರೀದಿಸಿ ಚಿನ್ನ, ಬೆಲೆ ಇಳಿಕೆ ನಂತರ ಪರಿಷ್ಕೃತ ದರ ಇಲ್ಲಿದೆ

ಕೆಲವೊಂದು ಬಾರಿ ಸಂಬಳ ಹಣದಲ್ಲಿ ಒಂದಿಷ್ಟು ಹಣ ಉಳಿದಿರುತ್ತದೆ. ಮನೆಯ ಎಲ್ಲಾ ಖರ್ಚು ವೆಚ್ಚಗಳನ್ನು ತೆಗೆದು ಸ್ವಲ್ಪ ಹಣ ಮಿಕ್ಕಿರುತ್ತದೆ. ಈ ಹಣವನ್ನು ಹಾಗೆ ಇರಿಸಿಕೊಂಡು ಅದು ಸಹ ತಿಂಗಳ ಕೊನೆಗೆ ಖಾಲಿಯಾಗುತ್ತದೆ. ಈ ತಿಂಗಳ ಸಂಬಳದಲ್ಲಿ ಹಣ ಉಳಿದಿದ್ರೆ ಇಂದು ಚಿನ್ನವನ್ನು ಖರೀದಿಸಿ. ಕಾರಣ ಇವತ್ತು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 

27

ಇಂದು ಒಂದು ಜೊತೆ ಬ್ರಾಂಡೆಡ್ ಬಟ್ಟೆ, ಶೂ, ಸನ್ ಗ್ಲಾಸ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು 8 ರಿಂದ 10 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಇದೇ ಹಣದಲ್ಲಿ ನಿಮಗೆ 1 ಗ್ರಾಂಗಿಂತಲೂ ಹೆಚ್ಚಿನ ಚಿನ್ನ ಸಿಗುತ್ತದೆ. ಭವಿಷ್ಯದಲ್ಲಿ ಈ ಚಿನ್ನವನ್ನು ಮಾರಾಟ ಮಾಡಬಹುದು. ಆದರೆ ಬಟ್ಟೆಗಳನ್ನು ಮಾರಾಟ ಮಾಡಲು ಆಗಲ್ಲ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ. 

37

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,209 ರೂಪಾಯಿ
8 ಗ್ರಾಂ: 65,672 ರೂಪಾಯಿ
10 ಗ್ರಾಂ: 82,090 ರೂಪಾಯಿ
100 ಗ್ರಾಂ: 8,20,900 ರೂಪಾಯಿ

47

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,955 ರೂಪಾಯಿ
8 ಗ್ರಾಂ: 71,640 ರೂಪಾಯಿ
10 ಗ್ರಾಂ: 89,550 ರೂಪಾಯಿ
100 ಗ್ರಾಂ: 8,95,500 ರೂಪಾಯಿ

57

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 82,090 ರೂಪಾಯಿ, ಮುಂಬೈ: 82,090 ರೂಪಾಯಿ, ದೆಹಲಿ: 82,240 ರೂಪಾಯಿ, ಬೆಂಗಳೂರು: 82,090 ರೂಪಾಯಿ, ಕೋಲ್ಕತ್ತಾ: 82,090 ರೂಪಾಯಿ, ಹೈದರಾಬಾದ್: 82,090 ರೂಪಾಯಿ, ಪುಣೆ: 82,090 ರೂಪಾಯಿ

67

ಎಷ್ಟು ಇಳಿಕೆ?
ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ.ಗಳಷ್ಟು ಇಳಿಕೆಯಾಗಿದೆ. ಪ್ರತಿನಿತ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 100  ರೂ.ಗಳಷ್ಟು ಕಡಿಮೆಯಾಗಿದೆ. 

77

ಇಂದಿನ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 
10 ಗ್ರಾಂ: 1,028 ರೂಪಾಯಿ
100 ಗ್ರಾಂ: 10,280 ರೂಪಾಯಿ
1000 ಗ್ರಾಂ: 1,02,800 ರೂಪಾಯಿ

Read more Photos on
click me!

Recommended Stories