ವಿಶ್ವದ ದಿಗ್ಗಜ ನಾಯಕರ ಮಹಾಮೇಳ, ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದೆಷ್ಟು?

Published : Sep 09, 2023, 01:40 AM IST

18ನೇ ಆವೃತ್ತಿಯ ಜಿ20 ಸಮಾವೇಶ ಇಂದಿನಿಂದ ನವದೆಹಲಿಯ ಭಾರತ ಮಂಟಪದಲ್ಲಿಆರಂಭವಾಗಲಿದೆ. ಹಾಗಿದ್ದಲ್ಲಿ, ಕಳೆದ 8 ವರ್ಷಗಳ ಜಿ20 ಶೃಂಗಸಭೆಗೆ ಆಗಿರುವ ಖರ್ಚುಗಳೆಷ್ಟು, ಭಾರತ ಮಾಡುತ್ತಿರುವ ಖರ್ಚು ಎಷ್ಟು ಎನ್ನುವ ವಿವರ ಇಲ್ಲಿದೆ. ಇಂದಿನ  ಡಾಲರ್‌ನ ಮೌಲ್ಯದಲ್ಲಿ ಈ ಲೆಕ್ಕಾಚಾರಗಳಿವೆ.  

PREV
19
ವಿಶ್ವದ ದಿಗ್ಗಜ ನಾಯಕರ ಮಹಾಮೇಳ, ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದೆಷ್ಟು?

ಕೆನಡಾ: 2010ರಲ್ಲಿ ಜಿ20 ಶೃಂಗಸಭೆಯಲ್ಲಿ ಕೆನಡಾ ಅಯೋಜನೆ ಮಾಡಿತ್ತು. ಇದಕ್ಕಾಗಿ ಕೆನಡಾ ಖರ್ಚು ಮಾಡಿದ್ದು ಬರೋಬ್ಬರಿ 1 ಬಿಲಿಯನ್ ಯುಎಸ್‌ ಡಾಲರ್‌. ಅಂದರೆ, ಈಗಿನ ಲೆಕ್ಕಾಚಾರದಲ್ಲಿ 8295 ಕೋಟಿ ರೂಪಾಯಿಗಳು.

29

ಫ್ರಾನ್ಸ್: ಮರುವರ್ಷ ಅಂದರೆ, 2011ರಲ್ಲಿ ವಿಶ್ವದ ಅಗ್ರ ನಾಯಕರ ಜಿ20 ಶೃಂಗಸಭೆ ಆಯೋಜನೆ ಮಾಡಿದ್ದು ಫ್ರಾನ್ಸ್‌ ದೇಶ. ಅದಕ್ಕಾಗಿ ಫ್ರಾನ್ಸ್ ತನ್ ಖಜಾನೆಯಿಂದ 86 ಮಿಲಿಯನ್‌ ಯುಎಸ್‌ ಡಾಲರ್‌ ಖರ್ಚು ಮಾಡಿತ್ತು. ಅಂದರೆ ಬರೀ 713 ಕೋಟಿ ರೂಪಾಯಿ ಖರ್ಚು ಮಾಡಿತ್ತು.

39

ಆಸ್ಟ್ರೇಲಿಯಾ: 2012 ಹಾಗೂ 13ರಲ್ಲಿ ಮೆಕ್ಸಿಕೋ ಹಾಗೂ ರಷ್ಯಾ ದೇಶಗಳು ಜಿ20 ನಡೆಸಿದ್ದರೂ ಇದರ ಖರ್ಚಿನ ಮಾಹಿತಿಯಿಲ್ಲ. 2014ರಲ್ಲಿ ಆಸ್ಟ್ರೇಲಿಯಾದ ಜಿ20 ಸಮಾವೇಶಕ್ಕಾಗಿ 320 ಮಿಲಿಯನ್‌ ಡಾಲರ್‌ ಹಣ ಖರ್ಚು ಮಾಡಿತ್ತು. ಅಂದರೆ 2654 ಕೋಟಿ ರೂಪಾಯಿ ಹಣ ವೆಚ್ಚ ಮಾಡಿತ್ತು.

49

ಚೀನಾ: ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾವುದಾದರೂ ದೇಶ ಜಿ20ಗೆ ದಂಡಿಯಾಗಿ ಹಣ ಸುರಿದಿದ್ದೆಂದರೆ ಅದು ಚೀನಾ ಮಾತ್ರ. 2016ರ ಶೃಂಗಸಭೆಗಾಗಿ ಚೀನಾ ಬರೋಬ್ಬರಿ 24 ಬಿಲಿಯನ್‌ ಡಾಲರ್‌ ಹಣ ಖರ್ಚು ಮಾಡಿತ್ತು.

59

ಜರ್ಮನಿ: 2017ರಲ್ಲಿ ಜರ್ಮನಿ ಜಿ20 ಶೃಂಗಸಭೆಯನ್ನು ಆಯೋಜನೆ ಮಾಡಿತ್ತು. ಅದಕ್ಕಾಗಿ ಜರ್ಮನಿ 94 ಮಿಲಿಯನ್‌ ಡಾಲರ್‌ ಅಂದರೆ 779 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿತ್ತು.

69

ಅರ್ಜೆಂಟೀನಾ: 2018ರ ಜಿ20 ಶೃಂಗಸಭೆಗೆ ಅರ್ಜೆಂಟೀನಾ ಆತಿಥ್ಯ ವಹಿಸಿಕೊಂಡಿತ್ತು. ಇದಕ್ಕಾಗಿ ಅರ್ಜೆಂಟೀನಾ 928 ಕೋಟಿ ರೂಪಾಯಿ ಹಣ ಅಂದರೆ 112 ಮಿಲಿಯನ್‌ ಯುಎಸ್‌ ಡಾಲರ್‌ ಮೊತ್ತವನ್ನು ಖರ್ಚು ಮಾಡಿತ್ತು.

79

ಜಪಾನ್‌: ಜಪಾನ್‌ ತನ್ನ ಶೃಂಗಸಭೆಯನ್ನು 2019ರಲ್ಲಿ ಆಯೋಜನೆ ಮಾಡಿತ್ತು. ವಿಶ್ವ ನಾಯಕರ ಈ ಕಾರ್ಯಕ್ರಮಕ್ಕಾಗಿ 320 ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ, 2654 ಕೋಟಿ ರೂಪಾಯಿ ಹಣವನ್ನು ವ್ಯಯ ಮಾಡಿತ್ತು.

89

ಇಂಡೋನೇಷ್ಯಾ:  ಕಳೆದ ವರ್ಷದ ಶೃಂಗಸಭೆಗೆ ಇಂಡೋನೇಷ್ಯಾ ಆತಿಥ್ಯ ವಹಿಸಿಕೊಂಡಿತ್ತು. ದ್ವೀಪರಾಷ್ಟ್ರ ಈ ಕಾರ್ಯಕ್ರಮಕ್ಕೆ ಖರ್ಚುಮಾಡಿದ್ದು ಬರೀ 33 ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ, ಬರೀ 273 ಕೋಟಿ ರೂಪಾಯಿ.

99

ಭಾರತ: ಈ ಬಾರಿ ಶೃಂಗಸಭೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಭಾರತ 120 ಮಿಲಿಯನ್‌ ಡಾಲರ್‌ ಹಣವನ್ನು ಅಂದರೆ, 995 ಕೋಟಿ ರೂಪಾಯಿ ಹಣವನ್ನು ಬರೀ ಈ ಕಾರ್ಯಕ್ರಮಕ್ಕ ಖರ್ಚು ಮಾಡುತ್ತಿದೆ. ಭದ್ರತೆಗಾಗಿಯೇ ಹೆಚ್ಚಿನ ಹಣ ವಿನಿಯೋಗವಾಗುತ್ತದೆ.

click me!

Recommended Stories