ಹಿಂದೆಲ್ಲಾ ಹಣ ಬೇಕಾದ್ರೆ ಬ್ಯಾಂಕಿಗೆ ಹೋಗಿ ಫಾರ್ಮ್ ತುಂಬಿ ಲೈನ್‌ನಲ್ಲಿ ನಿಲ್ಲಬೇಕಿತ್ತು. ಈಗ ಕಾಲ ಬದಲಾಗಿದೆ. ATM ಕಾರ್ಡ್ ಇದ್ರೆ ಸಾಕು, ಕ್ಷಣಾರ್ಧದಲ್ಲಿ ಹಣ ಸಿಗುತ್ತೆ. ಆದ್ರೆ ಕಾಲಕ್ಕೆ ತಕ್ಕಂತೆ ATM ಸೇವೆಗಳೂ ಬದಲಾಗಿವೆ.
ಈಗ ದೇಶದಲ್ಲಿ ಡಿಜಿಟಲೀಕರಣ ಜೋರಾಗಿದೆ. ಡಿಜಿಟಲ್ ಆರ್ಥಿಕತೆ ಬೆಳೆಯುತ್ತಿದೆ. ಜೇಬಲ್ಲಿ ಹಣ ಇಟ್ಕೊಳ್ಳೋರ ಸಂಖ್ಯೆ ಕಡಿಮೆಯಾಗ್ತಿದೆ. ಚಾಕಲೇಟ್‌ನಿಂದ ಹಿಡಿದು ದೊಡ್ಡ ವ್ಯವಹಾರದವರೆಗೂ UPI ಆ್ಯಪ್‌ಗಳನ್ನೇ ಬಳಸ್ತಿದ್ದಾರೆ. ಎಲ್ಲರಿಗೂ ಸ್ಮಾರ್ಟ್‌ಫೋನ್ ಸಿಕ್ಕಿರೋದು, ಇಂಟರ್ನೆಟ್ ದರ ಕಡಿಮೆಯಾಗಿರೋದ್ರಿಂದ UPI ಪೇಮೆಂಟ್ಸ್ ಹೆಚ್ಚಾಗಿವೆ.
26
ಇನ್ನೂ ಹಣದ ಅವಶ್ಯಕತೆ ಇದೆ
ಡಿಜಿಟಲ್ ಪೇಮೆಂಟ್ಸ್ ಹೆಚ್ಚಿದ್ರೂ, ಇನ್ನೂ ಅನೇಕರು ಹಣದಲ್ಲೇ ವ್ಯವಹರಿಸ್ತಿದ್ದಾರೆ. ಹೀಗಾಗಿ ATMನಿಂದ ಹಣ ತೆಗೆಯುತ್ತಾರೆ. ATMನಿಂದ ಹಣ ತೆಗೆಯೋಕೆ ಕಾರ್ಡ್ ಬೇಕು ಅಂತ ಗೊತ್ತು. ಆದ್ರೆ ಕಾರ್ಡ್ ಇಲ್ದೇನೂ ಹಣ ತೆಗೆಯಬಹುದು.
36
ವಿವಿಧ ಆ್ಯಪ್‌ಗಳು ಲಭ್ಯ
ATMನಿಂದ ಕಾರ್ಡ್ ಇಲ್ದೆ ಹಣ ತೆಗೆಯೋಕೆ ಕೆಲವು ಆ್ಯಪ್‌ಗಳಿವೆ. SBIನ YONO, ICICI ಮೊಬೈಲ್ ಆ್ಯಪ್, Axis ಆ್ಯಪ್ ಲಭ್ಯ. ಆದ್ರೆ ಈ ಆ್ಯಪ್‌ಗಳನ್ನ ಆಯಾ ಬ್ಯಾಂಕಿನ ATMಗಳಲ್ಲಿ ಮಾತ್ರ ಬಳಸಬಹುದು.