ಇಂಡಿಯನ್ ಆಯಿಲ್ ನೀಡುವ ಮೈಲೇಜ್ ಎಷ್ಟು?
ಭಾರತದಲ್ಲಿ ಯಾವ ಪೆಟ್ರೋಲ್ ಬ್ರ್ಯಾಂಡ್ ಉತ್ತಮ ಮೈಲೇಜ್ ನೀಡುತ್ತದೆ ಎಂಬುದನ್ನು ಕಂಡುಹಿಡಿಯಲು ಯೂಟ್ಯೂಬ್ ಚಾನೆಲ್ ಮ್ಯಾಡ್ ಬ್ರದರ್ಸ್ ಪರೀಕ್ಷೆಯನ್ನು ನಡೆದಿದೆ. 'ಇಂದು ದೇಶದಲ್ಲಿ ಆರು ಬ್ರ್ಯಾಂಡ್‌ಗಳ ಪೆಟ್ರೋಲ್ ಮಾರಾಟವಾಗುತ್ತಿದೆ. ಎಲ್ಲಾ ಬ್ರ್ಯಾಂಡ್‌ಗಳ ತಲಾ ಒಂದು ಲೀಟರ್ ಪೆಟ್ರೋಲ್ ಅನ್ನು ಖರೀದಿ ಮಾಡಿದ್ದೇವೆ. . ಯಾವ ಬ್ರ್ಯಾಂಡ್ ಹೆಚ್ಚು ಮೈಲೇಜ್ ನೀಡುತ್ತದೆ ಅನ್ನೋದನ್ನ ನೋಡೋಣ. ಈ ಬ್ರ್ಯಾಂಡ್‌ಗಳ ವಿವಿಧ ಬಂಕ್‌ಗಳಿಂದ ನಾವು ಪೆಟ್ರೋಲ್ ಅನ್ನು ತುಂಬಿಸಿಕೊಂಡಿದ್ದೇವೆ. ಆದರೆ ಅವುಗಳ ಮೈಲೇಜ್ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಅದನ್ನು ವಿಡಿಯೋ ಮಾಡಿ ನಿಮಗೆ ತೋರಿಸುತ್ತೇವೆ. ನಾವು ಪ್ರಸ್ತುತ ತೊಪ್ಪೂರ್ ಟೋಲ್ ಪ್ಲಾಜಾದಲ್ಲಿದ್ದೇವೆ. ದಿಂಡಿಗಲ್ ಇಲ್ಲಿಂದ 65 ಕಿ.ಮೀ ದೂರದಲ್ಲಿದೆ. ಆ ದೂರವನ್ನು ನಾವು ಕ್ರಮಿಸಬಹುದೇ ಎಂದು ನೋಡೋಣ. ಬೈಕ್‌ನ ಸ್ಪೀಡೋಮೀಟರ್‌ನಲ್ಲಿ ಪ್ರಯಾಣಿಸಿದ ದೂರವನ್ನು ನಾವು ಪರಿಶೀಲಿಸಬಹುದು. ಇದು 72452 ಕಿ.ಮೀ ತೋರಿಸುತ್ತದೆ. ದೀರ್ಘಕಾಲ ಪ್ರಯಾಣಿಸಿದ ನಂತರ, ಪೆಟ್ರೋಲ್ ಖಾಲಿಯಾಯಿತು ಮತ್ತು ವಾಹನ ನಿಂತಿತು. ಬೈಕ್‌ನ ಸ್ಪೀಡೋಮೀಟರ್ ಪ್ರಕಾರ, ಇದು 72,502 ಕಿ.ಮೀ, ಅಂದರೆ 1 ಲೀಟರ್ ಇಂಡಿಯನ್ ಆಯಿಲ್ ಪೆಟ್ರೋಲ್ ಸುಮಾರು 50 ಕಿ.ಮೀ ಮೈಲೇಜ್ ನೀಡಿದೆ. ನಮ್ಮ ಮೊಬೈಲ್‌ನಲ್ಲಿರುವ ಆ್ಯಪ್ ಕೂಡ ಅದನ್ನೇ ತೋರಿಸುತ್ತದೆ. 1 ಲೀಟರ್ ಇಂಡಿಯನ್ ಆಯಿಲ್ ಪೆಟ್ರೋಲ್ ಸುಮಾರು 50 ಕಿ.ಮೀ ಮೈಲೇಜ್ ನೀಡಿದೆ.
ಹಿಂದುಸ್ತಾನ್ ಪೆಟ್ರೋಲಿಯಂ ಮೈಲೇಜ್
ಬಳಿಕ ಹಿಂದೂಸ್ತಾನ್ ಪೆಟ್ರೋಲಿಯಂ (HP) ಬಂಕ್‌ನ ಪೆಟ್ರಫಲ್ ಅನ್ನು ಪರಿಶೀಲನೆ ಮಾಡಿದರು. ಬೈಕ್‌ನಲ್ಲಿ ಕೇವಲ 50-60 ಕಿಲೋಮೀಟರ್ ವೇಗವನ್ನು ಕಾಯ್ದುಕೊಂಡಿದ್ದರು. ಎಚ್‌ಪಿ ಪೆಟ್ರೋಲ್‌ನಿಂದ ಸರಾಸರಿ 60.88 ಕಿಮೀ ಮೈಲೇಜ್ ದೊರೆತಿದೆ. ಸರಿಸುಮಾರು 61 ಕಿ.ಮೀ ಮೈಲೇಜ್ ನೀಡಿದೆ. ಇಂಡಿಯನ್ ಆಯಿಲ್‌ಗಿಂತ ಹೆಚ್ಚಿನ ಮೈಲೇಜ್ ಅದರಲ್ಲೂ 11 ಕಿ.ಮೀ ಜಾಸ್ತಿ ಮೈಲೇಜ್ ನೀಡಿದ್ದಕ್ಕೆ ಅಚ್ಚರಿಪಟ್ಟಿದ್ದಾರೆ. ಈ ವ್ಯತ್ಯಾಸಕ್ಕೆ ಕಾರಣವೇನು ಅನ್ನೋದು ತಮಗೆ ತಿಳಿದಿಲ್ಲ ಎಂದು ವಾರು ಹೇಳಿದ್ದಾರೆ. ಅದಲ್ಲದೆ, ಇಂಡಿಯನ್ ಆಯಿಲ್ ಕೇವಲ 50 ಕಿಮೀ ಮೈಲೇಜ್ ಏಕೆ ನೀಡಿತು ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ಎರಡೂ ಕಂಪನಿಯ ಪೆಟ್ರೋಲ್‌ನ ಲೀಟರ್‌ಗೆ 102 ರೂಪಾಯಿ ಇದೆ. ಆದರೆ, ಭಿನ್ನ ಮೈಲೇಜ್ ನೀಡಿದ್ದು ಏಕೆ ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ.
ಬಳಿಕ ರಿಯಲನ್ಸ್‌ನ ಪೆಟ್ರೋಲ್‌ಅನ್ನು ಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ಮಾಡುವ ಮುನ್ನ ಸ್ಪೀಡೋಮೀಟರ್‌ನಲ್ಲಿ 72593 ಕಿ.ಮೀ ನಂಬರ್ ತೋರಿಸಿದೆ. 1 ಲೀಟರ್‌ಪೆಟ್ರೋಲ್ ಖಾಲಿಯಾದ ಬಳಿಕ ಸ್ಪೀಡೋಮೀಟರ್ 72,660 ಕಿ.ಮೀ ನಂಬರ್ ತೋರಿಸಿದೆ. ಅಂದರೆ, ರಿಲಯನ್ಸ್ ಪೆಟ್ರೋಲ್ ಲೀಟರ್‌ಗೆ 67 ಕಿ.ಮೀ ಮೈಲೇಜ್ ನೀಡಿದೆ ಎಂದು ಮ್ಯಾಡ್ ಬ್ರದರ್ಸ್ ತಿಳಿಸಿದೆ. ಇಲ್ಲಿಯವರೆಗಿನ ಪರೀಕ್ಷೆಯಲ್ಲಿ ರಿಲಯನ್ಸ್‌ನ ಬ್ರ್ಯಾಂಡ್‌ನ ಪೆಟ್ರೋಲ್ ಟಾಪ್ ಅಲ್ಲಿದೆ ಎಂದಿದ್ದಾರೆ. ಆ ಬಳಿಕ ಅವರು ನಯಾರಾ ಪೆಟ್ರೋಲ್‌ಅನ್ನು ಪರಿಶೀಲನೆ ಮಾಡಿದ್ದಾರೆ. ಬೈಕ್‌ನ ಸ್ಪೀಡೋಮೀಟರ್ 72660 ಕಿಲೋಮೀಟರ್ ಎಂದು ತೋರಿಸಿದೆ. ಬೈಕ್‌ನಲ್ಲಿನ 1 ಲೀಟರ್ ನಯಾರಾ ಪೆಟ್ರೋಲ್ ಖಾಲಿಯಾದ ಬಳಿಕ 72,718 ಕಿಲೋಮೀಟರ್ ಎಂದು ತೋರಿಸಿದೆ. ಅಂದರೆ, ನಯಾರಾ ಪೆಟ್ರೋಲ್ 1 ಲೀಟರ್‌ಗೆ 58 ಕಿಲೋಮೀಟರ್ ಮೈಲೇಜ್ ತೋರಿಸಿದೆ. ಫೋನ್‌ನ ಜಿಪಿಎಸ್ ಪ್ರಕಾರ, ಇದು 56.34 ಕಿ.ಮೀ ತೋರಿಸಿದೆ. ಆದ್ದರಿಂದ, ನಾವು ಪರಿಶೀಲಿಸಿದ 4 ಬ್ರ್ಯಾಂಡ್‌ಗಳಲ್ಲಿ ನಯಾರಾ 3 ನೇ ಸ್ಥಾನದಲ್ಲಿದೆ. 67 ಕಿ.ಮೀ ಮೈಲೇಜ್‌ನೊಂದಿಗೆ ರಿಲಯನ್ಸ್ ಮೊದಲ ಸ್ಥಾನದಲ್ಲಿದೆ. ಇದಾದ ಬಳಿಕ ಮತ್ತೊಮ್ಮೆ ಅವರು ಇಂಡಿಯನ್ ಆಯಿಲ್‌ನ ಪೆಟ್ರೋಲ್ ಪರಿಶೀಲನೆ ಮಾಡಿದ್ದಾರೆ. ಮತ್ತೊಂದು ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿ ಮಾಡಿದ ಅವರು, ಈ ವೇಳೆ ಮೊದಲಿಗೆ ಖರೀದಿಗೆ ಮಾಡದ ಇಂಡಿಯನ್ ಆಯಿಲ್ ಪೆಟ್ರೋಲ್‌ಗಿಂದ ಈ ಪೆಟ್ರೋಲ್ ಸ್ವಲ್ಪ ದಪ್ಪವಿದ್ದಂತೆ ಕಾಣುತ್ತಿದೆ ಎಂದಿದ್ದಾರೆ.
ಇಂಡಿಯನ್ ಆಯಿಲ್ 2ನೇ ಬಾರಿ ಟೆಸ್ಟ್
ಇಂಡಿಯನ್ ಆಯಿಲ್ ಪೆಟ್ರೋಲ್ ಸ್ಟಾರ್ಟಿಂಗ್‌ನ ಮೊದಲು ಬೈಕ್‌ನ ಸ್ಪೀಡೋಮೀಟರ್‌ನಲ್ಲಿ 72813 ಕಿ.ಮೀ ತೋರಿಸಿದೆ. ಪ್ರಯಾಣದ ನಂತರ ಈ ನಂಬರ್ 72868 ಕಿ.ಮೀ ಆಗಿತ್ತು. ಅಂದರೆ 55 ಕಿ.ಮೀ ಮೈಲೇಜ್ ನೀಡಿದೆ. ಅಂದರೆ, ಮೊದಲ ಟೆಸ್ಟ್‌ಗಿಂತ 2ನೇ ಬಾರಿಯ ಇಂಡಿಯನ್ ಆಯಿಲ್ ಟೆಸ್ಟ್‌ನಲ್ಲಿ ಸ್ವಲ್ಪ ಹೆಚ್ಚಿನ ಮೈಲೇಜ್ ನೀಡಿದ್ದರೂ, ಹೆಚ್ಚಿನ ವ್ಯತ್ಯಾಸವಿಲ್ಲ ಎಂದಿದ್ದಾರೆ. ಅದಾದ ಬಳಿಕ ಕೊನೆಯ ಎರಡು ಬ್ರ್ಯಾಂಡ್‌ಗಳ ಪೆಟ್ರೋಲ್‌ಅನ್ನು ಪರಿಶೀಲಿಸಿದ್ದಾರೆ. ಭಾರತ್ ಪೆಟ್ರೋಲಿಯಂನ ಪೆಟ್ರೋಲ್ ಟೆಸ್ಟ್‌ಗೆ ಮುನ್ನ ಸ್ಪೀಡೋಮೀಟರ್ 72,869 ಕಿ.ಮೀ ತೋರಿಸಿದೆ. ಫೋನ್‌ನ ಜಿಪಿಎಸ್ ಪ್ರಕಾರ 58.51 ಕಿಲೋಮೀಟರ್ ಆದರೆ, ಬೈಕ್‌ನ ಸ್ಪೀಡೋ ಮೀಟರ್ ಪ್ರಕಾರ 60 ಕಿ.ಮೀ ಮೈಲೇಜ್ ನೀಡಿದೆ. ಇದರ ಪ್ರಕಾರ ಗರಿಷ್ಠ ಮೈಲೇಜ್‌ನಲ್ಲಿ ಭಾರತ್ ಪೆಟ್ರೋಲಿಯಂ ಮುರನೇ ಸ್ಥಾನದಲ್ಲಿದೆ.
ಆ ಬಳಿಕ ಅವರು ದೇಶದ ಅತ್ಯಂತ ದುಬಾರಿ ಪೆಟ್ರೋಲ್ ಆಗಿರುವ ಶೆಲ್ ಪೆಟ್ರೋಲ್‌ನ ಪರಿಶೀಲನೆ ಮಾಡಿದ್ದಾರೆ. ಉಳಿದೆಲ್ಲಾ ಪೆಟ್ರೋಲ್‌ಗಳು ಲೀಟರ್‌ಗೆ 101 ರಿಂದ 102 ರೂಪಾಯಿ ಇದ್ದರೆ, ಶೆಲ್ ಸಾಮಾನ್ಯ ಪೆಟ್ರೋಲ್ ಲೀಟರ್‌ಗೆ 113 ರೂಪಾಯಿ. ಇದು ಹೆಚ್ಚಿನ ಮೈಲೇಜ್ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿ ಟೆಸ್ಟ್ ಮಾಡಿದ್ದಾರೆ. ಟೆಸ್ಟ್‌ಗೂ ಮುನ್ನ ಸ್ಪೀಡೋಮೀಟರ್ 72,929 ಕಿ.ಮೀ ತೋರಿಸಿದೆ. 1 ಲೀಟರ್ ಶೆಲ್ ಪೆಟ್ರೋಲ್ 65 ಕಿ.ಮೀ ಮೈಲೇಜ್ ನೀಡಿದೆ ಎಂದಿದ್ದಾರೆ. ಸಾಮಾನ್ಯ ಪೆಟ್ರೋಲ್‌ಗಿಂತ 10 ರೂಪಾಯಿ ಹೆಚ್ಚು ನೀಡಿದರೂ 65 ಕಿ.ಮೀ ಮೈಲೇಜ್ ಮಾತ್ರವೇ ನೀಡಿದೆ ಎಂದಿದ್ದಾರೆ. ಇವರ ಪ್ರಕಾರ 67 ಕಿ.ಮೀ ಮೈಲೇಜ್ ನೀಡಿರುವ ರಿಲಯನ್ಸ್ ಮೊದಲ ಸ್ಥಾನದಲ್ಲಿದ್ದರೆ, ಇಂಡಿಯನ್ ಆಯಿಲ್‌ಅನ್ನು ಎರಡು ಬಾರಿ ಟೆಸ್ಟ್ ಮಾಡಿದರೂ ಕೊನೇ ಸ್ಥಾನ ಪಡೆದಿದೆ ಎಂದಿದ್ದಾರೆ. ಶೆಲ್ ಎರಡನೇ ಸ್ಥಾನ ಪಡೆದರೆ HP ಮೂರನೇ ಸ್ಥಾನ ಪಡೆದಿದೆ ಎಂದು ಮ್ಯಾಡ್ ಬ್ರದರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ತಿಳಿಸಿದೆ. ಭಾರತ್ ಪೆಟ್ರೋಲಿಯಂ ನಾಲ್ಕನೇ ಸ್ಥಾನ ಪಡೆದರೆ ನಯಾರಾ ಐದನೇ ಸ್ಥಾನ ಪಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.