ಬ್ಯಾಂಕುಗಳಿಗೆ RBI ಎಚ್ಚರಿಕೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಉಪ-ಗವರ್ನರ್ ಸ್ವಾಮಿನಾಥನ್ ಜೆ ಮೂಲಕ KYC ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬ್ಯಾಂಕುಗಳಿಗೆ ಒತ್ತಾಯಿಸಿದೆ. ಖಾಸಗಿ ವಲಯದ ಬ್ಯಾಂಕುಗಳ ನಿರ್ದೇಶಕರ ಸಮಾವೇಶದಲ್ಲಿ, ಉಪ-ಗವರ್ನರ್ ಸ್ವಾಮಿನಾಥನ್ ಜೆ ಗ್ರಾಹಕ ದೂರು ನಿರ್ವಹಣಾ ವ್ಯವಸ್ಥೆಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್
ಪ್ರತಿಯೊಬ್ಬ ವ್ಯಕ್ತಿಯು - ವಯಸ್ಸು, ಆದಾಯ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ - ಗೌರವ ಮತ್ತು ಮೌಲ್ಯವನ್ನು ಅನುಭವಿಸುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕ ಕೇಂದ್ರಿತ ಆಡಳಿತಕ್ಕೆ ಆದ್ಯತೆ ನೀಡುವಂತೆ ಬ್ಯಾಂಕ್ ಮಂಡಳಿಗಳಿಗೆ ಸ್ವಾಮಿನಾಥನ್ ಒತ್ತಾಯಿಸಿದರು. ಇದರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳಿಗೆ ಸ್ವಾಮಿನಾಥನ್ ಸೂಚಿಸಿದ್ದಾರೆ.
KYC ಮಾರ್ಗಸೂಚಿಗಳು
ನ್ಯಾಯ ಮತ್ತು ಪಾರದರ್ಶಕತೆಯು, ಗ್ರಾಹಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಮೂಲಾಧಾರವಾಗಿರಬೇಕು. KYC ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಉಪ-ಗವರ್ನರ್ ಮಂಡಳಿ ಸದಸ್ಯರು ಮತ್ತು ಗ್ರಾಹಕ ಸೇವಾ ತಂಡದ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಕೆವೈಸಿ ಹಾಗೂ ಬ್ಯಾಂಕ್ ದೂರುಗಳನ್ನು ಪರಿಹರಿಸುವಲ್ಲಿ ಮೊದಲ ಆದ್ಯತೆ ನೀಡಬೇಕು ಎಂದಿದ್ದಾರೆ.
RBI ಉಪ-ಗವರ್ನರ್
ಈ ಜವಾಬ್ದಾರಿಗಳನ್ನು ನಿರ್ಲಕ್ಷಿಸುವ ಸಂಸ್ಥೆಗಳಿಗೆ ನಿಯಂತ್ರಕ ಅಥವಾ ಮೇಲ್ವಿಚಾರಣಾ ಕ್ರಮ ಅನಿವಾರ್ಯ ಎಂದು ಅವರು ಮತ್ತೊಮ್ಮೆ ಒತ್ತಿ ಹೇಳಿದರು. ದಕ್ಷತೆ ಮತ್ತು ಸೇವಾ ವಿತರಣೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಚಿಸಿದ್ದಾರೆ. ಆರ್‌ಬಿಐ ಸದ್ಯ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದೆ. ಕೈವೆಸಿ ಹಾಗೂ ಗ್ರಾಹಕರ ದೂರುಗಳ ಕುರಿತು ಈ ಎಚ್ಚರಿಕೆ ನೀಡಿದೆ. ನೇರವಾಗಿ ಇದು ಗ್ರಾಹಕರಿಗೆ ತಟ್ಟಿಲ್ಲ. ಆದರೆ ಯಾರಾದರೂ ಕೆವೈಸಿ ಪೂರ್ಣಗೊಳಿಸದಿದ್ದರೆ ತಕ್ಷಣವೇ ಪೂರ್ಣಗೊಳಿಸಿ, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗಲಿದೆ.
ಬ್ಯಾಂಕ್ ನಿಯಂತ್ರಕ ಕ್ರಮ
ಆಡಳಿತ ಮತ್ತು ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಬ್ಯಾಂಕುಗಳು ತಮ್ಮ ಕಾರ್ಯಗಳನ್ನು ನಿಯಂತ್ರಕ ಮತ್ತು ಗ್ರಾಹಕ-ಕೇಂದ್ರಿತ ನಿರೀಕ್ಷೆಗಳೊಂದಿಗೆ ಜೋಡಿಸಲು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು. ಇಲ್ಲಿ ಬ್ಯಾಂಕ್ ನಿಯಮ ಪಾಲಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕು ಎಂದು ಎಚ್ಚರಿಸಲಾಗಿದೆ.