ಒಂದು ವೇಳೆ ಇದ್ರೆ ಈಗಿರೋ ಸಾಲಗಳು, EMIಗಳು, ಬೇರೆ ಸಾಲಗಳನ್ನು ನೆನಪಿಟ್ಟುಕೊಂಡು ನಿಮಗೆ ಬರೋ ಆದಾಯ, ತೀರಿಸಬೇಕಾದ ಸಾಲಗಳು ಹೊಂದಿಕೆ ಆಗುತ್ತಾ, ಇಲ್ವಾ ಅಂತ ಯೋಚಿಸಿ. ಹಾಗೆ ನಿಮ್ಮ ದಿನನಿತ್ಯದ ಜೀವನಕ್ಕೆ ತೊಂದರೆ ಆಗದ ರೀತಿ ಇದ್ರೆ ನೀವು ಆರಾಮಾಗಿ ಕೆಲಸ ಬಿಟ್ಟು ಬಿಸಿನೆಸ್ ಪ್ಲಾನ್ ಮಾಡ್ಕೊಳ್ಳಿ.
ಹಾಗಲ್ಲದೆ ಬೇರೆ ಯಾವ ಆದಾಯದ ಮೂಲಗಳೂ ಇಲ್ಲದೆ ನೀವು ಕೆಲಸ ಬಿಡಬೇಕು ಅಂತ ಅಂದುಕೊಂಡ್ರೆ ಏಕಾಏಕಿ ಆ ಕೆಲಸ ಮಾಡ್ಬೇಡಿ. ಇದಕ್ಕೆ ನೀವೇನು ಮಾಡಬೇಕು ಅಂದ್ರೆ.. ಮೊದಲು ನೀವು ಶುರು ಮಾಡ್ಬೇಕು ಅಂತ ಇರೋ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ. ಲೋಪದೋಷಗಳು, ಕಷ್ಟಗಳು, ಲಾಭಗಳು, ಒತ್ತಡಗಳು ಹೀಗೆ ಎಲ್ಲದರ ಬಗ್ಗೆ ಒಂದು ಅರಿವು ಮೂಡಿಸಿಕೊಳ್ಳಿ.