ಭಾರತದಲ್ಲಿ ಐಫೋನ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌: ಆ್ಯಪಲ್ ಇಂಡಿಯಾಗೆ ಸುಮಾರು 50,000 ಕೋಟಿ ರೂ. ಆದಾಯದ ಮೈಲುಗಲ್ಲು!

First Published | Oct 29, 2023, 5:46 PM IST

ಆ್ಯಪಲ್‌ನ ಭಾರತದ ವ್ಯವಹಾರವು ಸುಮಾರು 50,000 ಕೋಟಿ ಆದಾಯದ ದಾಖಲೆಯ ಮೈಲುಗಲ್ಲನ್ನು ಸಮೀಪಿಸುತ್ತಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಇತ್ತೀಚೆಗೆ ಕೆಲ ವರ್ಷಗಳಿಂದ ಐಫೋನ್‌ಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಈ ಕಾರಣದಿಂದ ಆ್ಯಪಲ್‌ ಇಂಡಿಯಾ ಕಂಪನಿಗೆ ಆದಾಯ ಸಹ ತೀವ್ರ ಹೆಚ್ಚಾಗಿದೆ. ಆ್ಯಪಲ್‌ನ ಭಾರತದ ವ್ಯವಹಾರವು ಸುಮಾರು 50,000 ಕೋಟಿ ಆದಾಯದ ದಾಖಲೆಯ ಮೈಲುಗಲ್ಲನ್ನು ಸಮೀಪಿಸುತ್ತಿದೆ ಎಂದು ತಿಳಿದುಬಂದಿದೆ.

 2022-23 ರ ಆರ್ಥಿಕ ವರ್ಷದಲ್ಲಿ ಮಾರಾಟವು 48% ರಷ್ಟು ಏರಿಕೆಯಾಗಿದ್ದು, ಆದಾಯ 49,321 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ ಎಂದು ರಿಜಿಸ್ಟ್ರಾರ್ ಆಫ್ ಕಂಪನೀಸ್ (RoC) ನೊಂದಿಗೆ ನಿಯಂತ್ರಕ ಫೈಲಿಂಗ್‌ ಮಾಹಿತಿ ನೀಡಿದೆ.

Tap to resize

ಈ ಮೂಲಕ 50,000 ಕೋಟಿ ರೂ. ಆದಾಯದ ಹತ್ತಿರಕ್ಕೆ ಬಂದಿದೆ. ಕಂಪನಿಯು ನಿವ್ವಳ ಲಾಭದಲ್ಲಿ ಗಮನಾರ್ಹ ಹೆಚ್ಚಳವನ್ನು ದಾಖಲಿಸಿದ್ದು, ಇದು 76% ರಷ್ಟು ಅಂದರೆ 2,229 ಕೋಟಿ ರೂಗೆ ಏರಿಕೆಯಾಗಿದೆ. 

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಆ್ಯಪಲ್‌ನ ನಿವ್ವಳ ಲಾಭದ ಅತ್ಯಂತ ವೇಗದ ಬೆಳವಣಿಗೆಯನ್ನು ಇದು ಗುರುತಿಸುತ್ತದೆ. ವಿಶ್ಲೇಷಕರು ಈ ಬೆಳವಣಿಗೆಯನ್ನು ಹೊಸ ಪೀಳಿಗೆಯ ಸಾಧನಗಳ ಮಾರಾಟದ ಹೆಚ್ಚಿನ ಪಾಲು ಇದಕ್ಕೆ ಕಾರಣವೆಂದು ಹೇಳುತ್ತಾರೆ. ಇದು ಹೆಚ್ಚಿನ ಲಾಭಾಂಶವನ್ನು ನೀಡುತ್ತದೆ ಎಂದೂ ತಿಳಿದುಬಂದಿದೆ.

ಹೆಚ್ಚುವರಿಯಾಗಿ, ಘಟಕ ವೆಚ್ಚದಲ್ಲಿ ಕಡಿತ ಕಂಡುಬಂದಿದ್ದು, ಲಾಭದ ಉಲ್ಬಣಕ್ಕೆ ಕೊಡುಗೆ ನೀಡುತ್ತದೆ. ಆದರೂ, ಮಾರಾಟ ಮತ್ತು ಲಾಭದ ಹೆಚ್ಚಳಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ಆ್ಯಪಲ್‌ ಇಂಡಿಯಾ ಬಹಿರಂಗಪಡಿಸಿಲ್ಲ.  

ಈ ಬೆಳವಣಿಗೆಯು ವಿಸ್ತರಣೆಗಾಗಿ ಆ್ಯಪಲ್‌ನ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ವ್ಯಾಪಾರ ಗುಪ್ತಚರ ಸಂಸ್ಥೆಯಾದ AltInfo ಸ್ಥಾಪಕ ಮೋಹಿತ್ ಯಾದವ್ ಹೇಳಿದ್ದಾರೆ.

ಆ್ಯಪಲ್‌ ಗಮನಾರ್ಹವಾದ ಆರ್ಥಿಕ ವಿವೇಕವನ್ನು ಪ್ರದರ್ಶಿಸಿದ್ದು, ಇದು ಹೆಚ್ಚಿನ ಶೇಕಡಾವಾರು ಹೆಚ್ಚಳದಲ್ಲಿ ಪ್ರತಿಫಲಿಸುತ್ತದೆ. ಹಾಗೂ, ಕಂಪನಿಗೆ ಮಿತಿಯಿಲ್ಲದ ಬೆಳವಣಿಗೆಯ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದೂ ಮೋಹಿತ್ ಯಾದವ್ ಹೇಳಿದ್ದಾರೆ.

ಇನ್ನು, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಆ್ಯಪಲ್‌ನ ವ್ಯವಹಾರವು ಬೆಳೆಯಲಿದೆ ಎಂದು ಮೊಬೈಲ್ ಫೋನ್ ಮಾರುಕಟ್ಟೆ ಟ್ರ್ಯಾಕರ್ ಕೌಂಟರ್‌ಪಾಯಿಂಟ್ ರೀಸರ್ಚ್‌ನ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಭವಿಷ್ಯ ನುಡಿದಿದ್ದಾರೆ.

ಪ್ರಸ್ತುತ ಭಾರತದಲ್ಲಿ ಐಫೋನ್‌ಗಳು ಹೆಚ್ಚಿನ ಮಾರಾಟ ನಡೆಸುತ್ತಿರುವಾಗ, ಇತರ ಉತ್ಪನ್ನಗಳು ಮತ್ತು ಸೇವೆಗಳಂತಹ ಇತರ ಆದಾಯದ ಸ್ಟ್ರೀಮ್‌ಗಳು ಸಹ ಮುಂದಿನ ದಿನಗಳಲ್ಲಿ ಗಣನೀಯವಾಗಿ ಕೊಡುಗೆ ನೀಡುತ್ತವೆ ಎಂದು ತರುಣ್ ಪಾಠಕ್ ನಂಬಿದ್ದಾರೆ.

ಹೊಸ ಪೀಳಿಗೆಯ ಸಾಧನಗಳ ಹೆಚ್ಚಿನ ಪಾಲು ಲಾಭದ ಏರಿಕೆಗೆ ಕಾರಣವೆಂದು ಅವರು ವಿವರಿಸುತ್ತಾರೆ. ಇದು ಭಾರತದಲ್ಲಿ ಐಫೋನ್‌ಗಳ ಸರಾಸರಿ ಮಾರಾಟದ ಬೆಲೆಯಲ್ಲಿ ಮುಂದುವರಿದ ಹೆಚ್ಚಳದಿಂದ ಸಾಕ್ಷಿಯಾಗಿದೆ.

ರಿಜಿಸ್ಟ್ರಾರ್ ಆಫ್ ಕಂಪನೀಸ್ ಫೈಲಿಂಗ್ಸ್ ಪ್ರಕಾರ, ಆ್ಯಪಲ್‌ ಇಂಡಿಯಾ ಆದಾಯದ 94.6% ಉತ್ಪನ್ನ ಮಾರಾಟದಿಂದ ಬರುತ್ತದೆ, ಉಳಿದ 5.4% ನಿರ್ವಹಣೆ ಮತ್ತು ಸೇವೆಗಳಿಂದ ಉತ್ಪತ್ತಿಯಾಗುತ್ತದೆ.

ಆ್ಯಪಲ್‌ ಭಾರತದಲ್ಲಿ ತನ್ನ ಸೇವಾ ವ್ಯವಹಾರವನ್ನು ಇನ್ನೂ ಸಂಪೂರ್ಣವಾಗಿ ವಿಸ್ತರಿಸಿಲ್ಲವಾದರೂ ಇದು ಜಾಗತಿಕವಾಗಿ ತನ್ನ ಒಟ್ಟಾರೆ ಮಾರಾಟಕ್ಕೆ ಸುಮಾರು 30% ಕೊಡುಗೆ ನೀಡುತ್ತದೆ.
 

Latest Videos

click me!