ಈ ಕಂಪನಿಯ ಷೇರುಗಳಿಂದ 39 ಕೋಟಿ ರೂ. ಗೂ ಹೆಚ್ಚು ಲಾಭ ಮಾಡಿಕೊಳ್ತಿರೋ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ!

First Published | Oct 28, 2023, 1:07 PM IST

Mama Earthನ ಈ ಐಪಿಒ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ಸ್ನ್ಯಾಪ್‌ಡೀಲ್‌ನ ರೋಹಿತ್ ಕುಮಾರ್ ಬನ್ಸಾಲ್, ಮಾರಿಕೋ ಪ್ರವರ್ತಕ ರಿಷಬ್ ಹರ್ಷ್ ಮಾರಿವಾಲ್, ಕ್ರೆಡ್ ಸಂಸ್ಥಾಪಕ ಕುನಾಲ್ ಬಹ್ಲ್, ಹಾಗೂ ಉದ್ಯಮಶೀಲ ಪತಿ - ಪತ್ನಿ ಜೋಡಿ, ವರುಣ್ ಮತ್ತು ಗಜಲ್ ಅಲಾಗ್ ಸೇರಿದಂತೆ ಹೈ ಪ್ರೊಫೈಲ್‌ ಹೂಡಿಕೆದಾರರ ಷೇರು ಮಾರಾಟವನ್ನು ಒಳಗೊಂಡಿರುತ್ತದೆ.

ಮಾಮಾ ಅರ್ಥ್‌ ಪೋಷಕ ಕಂಪನಿಯಾದ ಹೋನಾಸಾ ಕನ್ಸೂಮರ್‌ ಐಪಿಒ ಮೂಲಕ ದಲಾಲ್‌ ಸ್ಟ್ರೀಟ್‌ಗೆ ಕಾಲಿಡುತ್ತಿದೆ. ಅಕ್ಟೋಬರ್ 31 ರಂದು ಕಂಪನಿಯು ಮೊದಲ ಬಾರಿಗೆ ಷೇರು ಮಾರುಕಟ್ಟೆಗೆ ಪ್ರವೇಶವಾಗಲು ಸಿದ್ಧವಾಗಿದೆ.
 

ಹೋನಾಸಾ ಕನ್ಸೂಮರ್‌ ಕಂಪನಿಯು IPOಗೆ 308 - 324 ರೂ. ಬೆಲೆ ಶ್ರೇಣಿಯನ್ನು ನಿಗದಿಪಡಿಸಿದ್ದು, ಇದು ಬರೋಬ್ಬರಿ  1,701 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹೊಂದಿದೆ.

Tap to resize

Mama Earthನ ಈ ಐಪಿಒ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ಸ್ನ್ಯಾಪ್‌ಡೀಲ್‌ನ ರೋಹಿತ್ ಕುಮಾರ್ ಬನ್ಸಾಲ್, ಮಾರಿಕೋ ಪ್ರವರ್ತಕ ರಿಷಬ್ ಹರ್ಷ್ ಮಾರಿವಾಲ್, ಕ್ರೆಡ್ ಸಂಸ್ಥಾಪಕ ಕುನಾಲ್ ಬಹ್ಲ್, ಹಾಗೂ ಉದ್ಯಮಶೀಲ ಪತಿ - ಪತ್ನಿ ಜೋಡಿ, ವರುಣ್ ಮತ್ತು ಗಜಲ್ ಅಲಾಗ್ ಸೇರಿದಂತೆ ಹೈ ಪ್ರೊಫೈಲ್‌ ಹೂಡಿಕೆದಾರರ ಷೇರು ಮಾರಾಟವನ್ನು ಒಳಗೊಂಡಿರುತ್ತದೆ.

ಹೋನಾಸಾ ಕನ್ಸೂಮರ್‌ ಕಂಪನಿ ಅಸ್ತಿತ್ವದಲ್ಲಿರುವ ಷೇರುದಾರರು ಒಟ್ಟು 4,12,48,162 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುವ ಆಫರ್ ಫಾರ್ ಸೇಲ್ (OFS) ನಲ್ಲಿ ಪಾಲ್ಗೊಳ್ಳುತ್ತದೆ.

ಹೂಡಿಕೆದಾರರಿಗೆ 101 ಪಟ್ಟು ಲಾಭ!
ಇನ್ನು, ಮಾಮಾ ಅರ್ಥ್‌ನ ಈ ಐಪಿಒದಿಂದ ಹೂಡಿಕೆದಾರರು ಗಮನಾರ್ಹವಾದ ಆದಾಯವನ್ನು ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ. 

ಬೆಲೆ ಶ್ರೇಣಿಯ ಪೈಕಿ ಅತ್ಯಧಿಕ ಬೆಲೆಗೆ ಷೇರುಗಳು ಮಾರಾಟವಾದ್ರೆ  Mamaearth ನಲ್ಲಿ ಅವರ ಆರಂಭಿಕ ಹೂಡಿಕೆಗಿಂತ 101 ಪಟ್ಟು ಹೆಚ್ಚು ಲಾಭ ಪಡೆದುಕೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ, ಐಪಿಒ ಮೂಲಕ 1701 ಕೋಟಿ ರೂ. ಮಾತ್ರವಲ್ಲದೆ, ಫ್ರೆಶ್‌ ಇಶ್ಯೂ ಮೂಲಕವೂ ಹೋನಾಸಾ ಕನ್ಸೂಮರ್‌ 365 ಕೋಟಿ ರೂ. ಹಣ ಸಂಗ್ರಹಿಸಲಿದೆ ಎಂದು ತಿಳಿದುಬಂದಿದೆ.
 

ಕ್ರೆಡ್‌ನ ಕುನಾಲ್ ಬಹ್ಲ್ ಮತ್ತು ಸ್ನಾಪ್‌ಡೀಲ್‌ನ ರೋಹಿತ್ ಕುಮಾರ್ ಬನ್ಸಾಲ್ ಹೋನಾಸಾ ಕನ್ಸೂಮರ್‌ನಲ್ಲಿ ತಮ್ಮ ಷೇರುಗಳನ್ನು ಪ್ರತಿ ಷೇರಿಗೆ ಸರಾಸರಿ 3.21 ರೂ. ಬೆಲೆಗೆ ಖರೀದಿಸಿದ್ದರು.  ಅವರು ತಮ್ಮ ಷೇರುಗಳನ್ನು ಬೆಲೆ ಶ್ರೇಣಿಯ ಅತ್ಯಧಿಕ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದರೆ, ತಮ್ಮ ಹೂಡಿಕೆಗಳ ಸರಾಸರಿ ವೆಚ್ಚದ 101 ಪಟ್ಟು ಲಾಭವನ್ನು ಪಡೆಯುತ್ತಾರೆ. ಅಂದರೆ, ಇಬ್ಬರೂ ತಲಾ 36.54 ಕೋಟಿ ರೂ. ಲಾಭ ಪಡೆಯಲಿದ್ದಾರೆ.

ಇನ್ನು, ಮಾರಿಕೋದ ಪ್ರೊಮೋಟರ್‌ಗಳಾದ ರಿಷಭ್ ಹರ್ಷ್ ಮಾರಿವಾಲಾ ಪ್ರತಿ ಷೇರಿಗೆ ಸರಾಸರಿ 6.05 ರೂ ಸ್ವಾಧೀನ ವೆಚ್ಚವನ್ನು ಹೊಂದಿದ್ದಾರೆ. ಅವರು OFS ಮೂಲಕ ನೀಡುತ್ತಿರುವ 57,00,188 ಈಕ್ವಿಟಿ ಷೇರುಗಳಿಗೆ ಸರಿಸುಮಾರು 54 ಪಟ್ಟು ಗಣನೀಯ ಲಾಭವನ್ನು ಸಾಧಿಸಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ಅವರ ನಿವ್ವಳ ಲಾಭ ಸುಮಾರು 181.23 ಕೋಟಿ ಎಂದು ನಿರೀಕ್ಷಿಸಲಾಗಿದೆ.

OFS ನಲ್ಲಿ 13,93,200 ಈಕ್ವಿಟಿ ಷೇರುಗಳನ್ನು ಇರಿಸುತ್ತಿರುವ ಬಾಲಿವುಡ್ ಖ್ಯಾತಿಯ ಹಾಗೂ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಷೇರುಗಳನ್ನು ತಲಾ 41.86 ರೂ. ಬೆಲೆಯಲ್ಲಿ ಪಡೆದುಕೊಂಡಿದ್ದರು.

ಈಗ ನಟಿಯ ನಿರೀಕ್ಷಿತ ಲಾಭಗಳು ಆಕೆಯ ಆರಂಭಿಕ ಹೂಡಿಕೆಗಿಂತ 8 ಪಟ್ಟು ಹೆಚ್ಚಳವನ್ನು ಸೂಚಿಸುತ್ತವೆ. ಇದರಿಂದ ನಟಿ ಅಂದಾಜು 39.30 ಕೋಟಿ ರೂ. ಲಾಭ ಪಡೆದುಕೊಳ್ಳಲಿದ್ದಾರೆ.

ಹಾಗೂ,  ವರುಣ್ ಅಲಾಘ್ ಮತ್ತು ಗಜಲ್ ಅಲಘ್ ಅವರು ಕಂಪನಿಯ ಸಂಸ್ಥಾಪಕರಾಗಿದ್ದರಿಂದ ತಮ್ಮ ಷೇರುಗಳನ್ನು ಸರಾಸರಿ ವೆಚ್ಚದಲ್ಲಿ ಸ್ವಾಧೀನಪಡಿಸಿಕೊಂಡಿದ್ದರು. ವರುಣ್ 31,86,300 ಷೇರುಗಳನ್ನು ಮಾರಲು ಉದ್ದೇಶಿಸಿದ್ದರೆ, ಗಜಲ್ ತಮ್ಮ ಬಳಿ ಇರುವ ಒಂದು ಲಕ್ಷದವರೆಗಿನ ಷೇರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಹೆಚ್ಚುವರಿಯಾಗಿ, ಫೈರ್‌ಸೈಡ್ ವೆಂಚರ್ಸ್ ಫಂಡ್, ಸೋಫಿನಾ ಮತ್ತು ಸ್ಟೆಲ್ಲಾರಿಸ್‌ನಂತಹ ಇತರ ಷೇರುದಾರರು ಸಹ OFS ನಲ್ಲಿ ಭಾಗವಹಿಸುತ್ತಿದ್ದಾರೆ. ಇವರೆಲ್ಲರೂ ಪ್ರತಿ ಷೇರಿಗೆ ಸ್ವಾಧೀನಪಡಿಸಿಕೊಳ್ಳುವ ವಿಭಿನ್ನ ಸರಾಸರಿ ವೆಚ್ಚಗಳನ್ನು ಹೊಂದಿದೆ.
 

Latest Videos

click me!