17,000 ಕೋಟಿ ರೂ. ಸಾಲ ಅಕ್ರಮಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ 10 ಗಂಟೆಗಳ ಕಾಲ ಇಡಿ ವಿಚಾರಣೆಗೆ ಒಳಪಟ್ಟರು. ಯಸ್ ಬ್ಯಾಂಕ್‌ನಿಂದ ಸಾಲ ಪಡೆಯಲು ಲಂಚ ನೀಡಿದ ಆರೋಪವೂ ಅವರ ಮೇಲಿದೆ. ಅನಿಲ್ ಅಂಬಾನಿ ಒಡೆತನದ ಹಲವು ಕಂಪನಿಗಳಿಗೆ ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ ಆರೋಪದ ಮೇಲೆ ಇಡಿ ದಾಳಿ ನಡೆಸಿದೆ.
17,000 ಕೋಟಿ ರು. ಸಾಲ ಅಕ್ರಮಕ್ಕೆ ಸಂಬಂಧಿಸಿದಂತೆ ಮುಕೇಶ್ ಅಂಬಾನಿ ಅವರ ಸೋದರ ಅನಿಲ್ ಅಂಬಾನಿ ಅವರು ಮಂಗಳವಾರ ಜಾರಿ ನಿರ್ದೇಶನಾಲಯ (ಇ.ಡಿ) ಎದುರು ಹಾಜರಾದರು. ಅವರನ್ನು 10 ಗಂಟೆಗಳ ಕಾಲ ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದರು.
25
ಹೇಳಿಕೆ ದಾಖಲಿಸಿದ ಅನಿಲ್ ಅಂಬಾನಿ
ಬೆಳಗ್ಗೆ 10:50ಕ್ಕೆ ದೆಹಲಿಯ ಇ.ಡಿ. ಕಚೇರಿಗೆ ಹಾಜರಾದ ಅನಿಲ್ ರಾತ್ರಿ 9 ಗಂಟೆಯವರೆಗೂ ಹಾಜರಿದ್ದು ತಮ್ಮ ಹೇಳಿಕೆ ದಾಖಲಿಸಿದರು. ಅನಿಲ್ ಅಂಬಾನಿ ಅವರು ತಮ್ಮ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಸೇರಿದಂತೆ ಹಲವು ಕಂಪನಿಗಳಿಗೆ ಸಾಲ ಪಡೆದು ಅದನ್ನು ಬೇರೆ ಬೇರೆ ಕಂಪನಿಗಳಿಗೆ ಅಕ್ರಮವಾಗಿ ವರ್ಗಾಯಿಸಿದ ಆರೋಪ ಎದುರಿಸುತ್ತಿದ್ದಾರೆ.
35
ಲಂಚ ನೀಡಿದ ಅರೋಪ
ಯಸ್ ಬ್ಯಾಂಕ್‌ನಿಂದ ಸಾಲ ಪಡೆಯಲು ಲಂಚ ನೀಡಿದ ಅರೋಪವೂ ಅವರ ಮೇಲಿದೆ. ಅನಿಲ್ ವಿರುದ್ಧ ಇತ್ತೀಚೆಗೆ ಇ.ಡಿ. ಲುಕೌಟ್ ನೋಟಿಸ್ ಜಾರಿ ಮಾಡಿತ್ತು. ಅನಿಲ್ ಅಂಬಾನಿ ಒಡೆತನದ 35 ಕಂಪನಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ಜು.24ರಂದು ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಅಂಬಾನಿ ವಿದೇಶಕ್ಕೆ ಹೋಗದಂತೆ ನಿರ್ಬಂಧ ವಿಧಿಸಿ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ.ಈ ಮೂಲಕ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ರೀತಿ ದೇಶ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿದೆ. ಅಲ್ಲದೆ, ಅವರ ಒಡೆತನದ ಹಲವು ಕಂಪನಿಗಳ ನಿರ್ದೇಶಕರಿಗೂ ಇದೇ ರೀತಿಯ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
55
ಸಾಲಕ್ಕೆ ನಕಲಿ ಬ್ಯಾಂಕ್ ಗ್ಯಾರಂಟಿ
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಎನ್‌ಯು ಬಿಇಎಸ್‌ಎಸ್ ಲಿ ಸೇರಿದಂತೆ ಹಲವು ಕಂಪನಿಗಳ ಬ್ಯಾಂಕ್ ಸಾಲಕ್ಕೆ ನಕಲಿ ಬ್ಯಾಂಕ್ ಗ್ಯಾರಂಟಿ ನೀಡುತ್ತಿದ್ದ ಒಡಿಶಾದ ಕಂಪನಿಯೊಂದರ ಮೇಲೆ ಇ.ಡಿ. ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು.ಭುವನೇಶ್ವರದಲ್ಲಿರುವ ಬಿಸ್ವಾಸ್ ಟ್ರೇಡ್‌ಲಿಂಕ್ ಹೆಸರಿನ ಕಂಪನಿಯು ವಿವಿಧ ಕಂಪನಿಗಳ ಬ್ಯಾಂಕ್ ಸಾಲಕ್ಕೆ ನಕಲಿ ಬ್ಯಾಂಕ್ ಗ್ಯಾರಂಟಿ ನೀಡುವ ದಂಧೆ ನಡೆಸುತ್ತಿತ್ತು.