ಬೇಜೋಸ್ ಹೊಸ ಐಷಾರಾಮಿ ಬಂಗಲೆ ಹೆಸರು 'ವಾರ್ನರ್ ಎಸ್ಟೇಟ್ ಮ್ಯಾನ್ಶನ್'. ಅಮೆರಿಕಾದ ವಾಣಿಜ್ಯ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಅನ್ವಯ ಬೇಜೋಸ್ ಇದನ್ನು ಮಾದ್ಯಮ ಉದ್ಯಮಿ ಡೇವಿಡ್ ಗೆಫೇನ್‌ರಿಂದ ಖರೀದಿಸಿದ್ದಾರೆನ್ನಲಾಗಿದೆ. ಇದು ಲಾಸ್ ಏಂಜಲೀಸ್‌ನ ಅತ್ಯಂತ ದುಬಾರಿ ಪ್ರಾಪರ್ಟಿ ಡೀಲ್ ಎನ್ನಲಾಗಿದೆ.
undefined
ಇದಕ್ಕೂ ಮುನ್ನ ಮೀಡಿಯಾ ಎಕ್ಸಿಕ್ಯೂಟಿವ್ ಲಾಶನ್ ಮಾರ್ಡೋಕ್ 2019ರಲ್ಲಿ ಚಾರ್ಟ್‌ವೆಲ್ ಹೆಸರಿನ ಆಸ್ತಿಯನ್ನು 15 ಕೋಟಿ ಡಾಲರ್ ಮೊತ್ತಕ್ಕೆ ಖರೀದಿಸಿದ್ದರು. ವಾರ್ನರ್ ಎಸ್ಟೇಟ್ ಮಾರಿದ ಗೆಫೇನ್ ಇದನ್ನು 1990ರಲ್ಲಿ 4.75 ಕೋಟಿ ಮೊತ್ತಕ್ಕೆ ಖರೀದಿಸಿದ್ದರು.
undefined
ಇದು ಅಂತಿಂತ ಮನೆಯಲ್ಲ. 12 ಬೆಡ್ ರೂಂಗಳಿರುವ ಈ ಮನೆಯಲ್ಲಿ ವಿಶ್ವದ ಎಲ್ಲಾ ಐಷಾರಾಮಿ ಸೌಲಭ್ಯಗಳಿವೆ. 1937ರಲ್ಲಿ ಇದನ್ನು ವಾರ್ನರ್ ಸ್ಟುಡಿಯೋ ನಿರ್ಮಿಸಿತ್ತು. 9.4 ಎಕರೆ ಪ್ರದೇಶ ವಿಸ್ತೀರ್ಣದಲ್ಲಿರುವ ಈ ಆಸದತಿಯಲ್ಲಿ ಹಲವಾರು ಗೆಸ್ಟ್ ಹೌಸ್ ಹಾಗೂ ಗಾರ್ಡನ್‌ಗಳಿವೆ.
undefined
ಹೀಗಿದ್ದರೂ ಬೇಜೋಸ್ ಇದನ್ನು ತಮ್ಮ ಮುಖ್ಯ ನಿವಾಸವನ್ನಾಗಿಸುತ್ತಾರಾ ಎಂಬುವುದು ಈವರೆಗೆ ಖಚಿತವಾಗಿಲ್ಲ. ಈ ಮನೆಯಲ್ಲಿ ಒಂದು ಮೋಟಾರ್ ಕೋರ್ಟ್ ಕೂಡಾ ಇದ್ದು, ಇದರಲ್ಲಿ ಕಾರುಗಳನ್ನು ನಿಲ್ಲಿಸಲು ಗ್ಯಾರೇಜ್ ಜೊತೆ, ಗ್ಯಾಸ್ ಪಂಪ್ ಕೂಡಾ ಇದೆ.
undefined
ವಾರ್ನರ್ ಮ್ಯಾನ್ಶನ್ ಹೆಸರಿನ ಈ ಬಂಗಲೆಯಲ್ಲಿ ಮನರಂಜನೆಗಾಗಿಯೂ ಹಲವಾರು ಸೌಲಭ್ಯಗಳಿವೆ. ಉದಾ: ಮರ್ಲಿನ್ ಮನ್ರೋಹೆಸರಿನ ಒಂದು ಯೂರೋಪಿಯನ್ ಗಾರ್ಡನ್, ಒಂದು ಈಜುಕೊಳ ಹಾಗೂ ಸ್ಪಾ, ಐರಿ ತೊರೆಗಳು ಹಾಗೂ ಟೆನಿಸ್ ಕೋರ್ಟ್ ಹಾಗೂ ಗಾಲ್ಫ್ ಕೋರ್ಸ್, ಕೆರೆ ಹಾಗೂ ಮಕ್ಕಳ ಪಾರ್ಕ್ ಕೂಡಾ ಇಲ್ಲಿ ಇದೆ.
undefined
ಈ ಬಂಗಲೆಯಲ್ಲಿ ಥಿಯೆಟರ್ ವ್ಯವಸ್ಥೆಯೂ ಇದೆ. ಡ್ರಾಪ್ ಡೌನ್ ಸಿಸ್ಟಂ ಹಾಗೂ ಪ್ರಾಜೆಕ್ಶನ್ ಸಿಸ್ಟಂ ಕೂಡಾ ಇಲ್ಲಿ ಲಭ್ಯವಿದೆ. ವಾರ್ನರ್ ಬ್ರದರ್ಸ್ ಸ್ಟುಡಿಯೋದಲ್ಲಿ ಕಸ್ಟಂ ಲೆದರ್ ಸೀಟುಗಳ ಕುರ್ಚಿಗಳು, ಜೆರುಸಲೇಂ ಕಲ್ಲಿನಿಂದ ನಿರ್ಮಿಸಲಾದ ಒಂದು ಇಂಡೋರ್ ಹಾಗೂ ಔಟ್ ಡೋರ್ ಬಾರ್ ಮತ್ತು ಸುಂದರವಾದ ಕೆತ್ತನೆ ಕೂಡಾ ಮಾಡಲಾಗಿದೆ. ಗಾಜಿನ ಕಿಟಕಿಗಳಿಂದ ಅಲಂಕೃತಗೊಂಡ ಹಾಲ್ ಕನಸಿನ ನಗರದಂತಿದೆ.
undefined
ಅಡುಗೆ ಕೋಣೆಯಲ್ಲಿ ಕೈಯ್ಯಾರೆ ನಿರ್ಮಿಸಲಾದ ಬೀಮ್, ಗ್ರಾನೈಟ್ ಹಾಗೂ ಪೇಂಟ್ ಮಾಡಲಾದ ಟೈಲ್ಸ್ ಮತ್ತು ಉಲ್ಫ್ ಸ್ಟವ್. ರೆಫ್ರಿಜರೇಟರ್ ಸೇರಿದಂತೆ ಅತ್ಯುತ್ತಮ ತಂತ್ರಜ್ಞಾನವುಳ್ಳ ಉಪಕರಣಗಳೂ ಇವೆ.
undefined
ಮೇಲೆ ನಾಲ್ಕು ಬೆಡ್ ರೂಂ ಹಾಗೂ ಮರದ ಛಾವಣಿ ಹಾಗೂ ಮೆಟ್ಟಿಲುಗಳಿವೆ. ಇಲ್ಲಿ ಬಾತ್ ರೂಂ, ವಿಶ್ರಾಂತಿ ಕೋಣೆ, ಫೈಯರ್ ಪ್ಲೇಸ್ ಹಾಗೂ ರ್ಯಾಪ್ ರೌಂಡ್ ಛಾವಣಿಯೊಂದಿಗೆ ಭವ್ಯವಾದ ಬೆಡ್ ರೂಂ ಕೂಡಾ ಇದೆ.
undefined
ಬೇಜೋಸ್‌ಗೂ ಮೊದಲು ಈ ಬಂಗಲೆಯ ಮಾಲೀಕ ಡೇವಿಡ್ ಗೆಫೆನ್ ತಮ್ಮ ಸ್ನೇಹಿತರೊಂದಿಗೆ ಇಲ್ಲಿ ಉಳಿದುಕೊಂಡಿದ್ದರು. ಗೆಫೇನ್ ಈ ಮನೆಯಲ್ಲಿ ಜೆಫ್ ಹಾಗೂ ಅವರ ಗರ್ಲ್‌ಫ್ರೆಂಡ್ ಪಾರ್ಟಿ ಮಾಡುವುದು ಹಲವಾರು ಬಾರಿ ಕಂಡು ಬಂದಿತ್ತು. 13 ಸಾವಿರದ 200 ಕೋಟಿ ಡಾಲರ್ ಆಸ್ತಿಯೊಡೆಯ ಜೆಫ್ ತಮ್ಮ ಮಾಜಿ ಪತ್ನಿ ಮೈಕೆಂಜಿಗೆ ವಿಚ್ಛೇದನ ನೀಡಿದ್ದಾರೆ. ಹೀಗಿರುವಾಗ ಜೆಫ್ ಹಾಗೂ ಅವರ ಗರ್ಲ್‌ಫ್ರೆಂಡ್ ಹೊಸ ಮನೆ ಹುಡುಕಾಟದಲ್ಲಿದ್ದರು.
undefined
ಇದು ಬೇಜೋಸ್ ಮೊದಲ ಐಷಾರಾಮಿ ಮನೆಯಲ್ಲ. ಇದಕ್ಕೂ ಮುನ್ನ ಲಾಸ್ ಏಂಜಲೀಸ್‌ನಲ್ಲಿ ಅವರು ತಮ್ಮ ಮಾಜಿ ಪತ್ನಿಯೊಂದಿಗೆ ಮೈಕೆಂಜಿಯೊಂದಿಗೆ ಬೆವರ್ಲೇ ಬಂಗಲೆ ಖರೀದಿಸಿದ್ದರು. ಕಳೆದ ವರ್ಷವಷ್ಟೇ ನ್ಯೂಯಾರ್ಕ್‌ನಲ್ಲೂ 554 ಕೋಟಿ ಮೊತ್ತದ 12 ಬೆಡ್ ರೂಂ ಮನೆ ಖರೀದಿಸಿದ್ದರು.
undefined