ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್: ಅತೀ ಕಡಿಮೆ ದರದ ಪ್ಲ್ಯಾನ್‌ನಲ್ಲಿ ಇಡೀ ವರ್ಷ ಅನ್‌ಲಿಮಿಟೆಡ್ ಕಾಲಿಂಗ್!

Published : Jun 08, 2026, 09:07 PM IST

ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ₹1,849 ಕ್ಕೆ ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲಿಂಗ್ ಪ್ರಯೋಜನವನ್ನು ನೀಡುತ್ತದೆ, ಆದರೆ ಇದರಲ್ಲಿ ಯಾವುದೇ ಡೇಟಾ ಸೌಲಭ್ಯ ಇರುವುದಿಲ್ಲ. 

PREV
16
ಹೊಸ ರಿಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ ಏರ್‌ಟೆಲ್‌

ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿಯಾದ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಹಲವು ಬಗೆಯ ಆಕರ್ಷಕ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸುತ್ತಿರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ದಿನೇ ದಿನೇ ರೀಚಾರ್ಜ್ ದರಗಳು ದುಬಾರಿಯಾಗುತ್ತಿರುವುದರಿಂದ ಬೇಸತ್ತಿರುವ ಗ್ರಾಹಕರಿಗಾಗಿ ಏರ್‌ಟೆಲ್ ಇಡೀ ವರ್ಷದ ಚಿಂತೆಯನ್ನು ದೂರ ಮಾಡುವಂತಹ ಅತ್ಯಂತ ಅಗ್ಗದ ವಾರ್ಷಿಕ ಪ್ಲಾನ್ ಒಂದನ್ನು ಮಾರುಕಟ್ಟೆಗೆ ತಂದಿದೆ.

26
41 ಕೋಟಿ ಗ್ರಾಹಕರಿಗಾಗಿ ವಿಶೇಷ ಪೋರ್ಟ್‌ಫೋಲಿಯೋ

ದೇಶಾದ್ಯಂತ ಸುಮಾರು 41 ಕೋಟಿಗೂ ಅಧಿಕ ಜನರು ಏರ್‌ಟೆಲ್ ಸಿಮ್ ಬಳಸುತ್ತಿದ್ದಾರೆ. ಗ್ರಾಹಕರ ಅಗತ್ಯತೆ ಹಾಗೂ ಬಜೆಟ್‌ಗೆ ಅನುಗುಣವಾಗಿ ಕಂಪನಿಯು ತನ್ನ ಪೋರ್ಟ್‌ಫೋಲಿಯೋದಲ್ಲಿ ಹಲವು ಆಕರ್ಷಕ ಪ್ಲಾನ್‌ಗಳನ್ನು ಸೇರಿಸಿದೆ. ಆ ಪೈಕಿ ಈಗ ಬಿಡುಗಡೆಯಾಗಿರುವ ವಾರ್ಷಿಕ ಪ್ಲಾನ್ ಗ್ರಾಹಕರಿಗೆ ಭಾರಿ ಹಣ ಉಳಿತಾಯ ಮಾಡಿಕೊಡಲಿದೆ.

36
ಕೇವಲ ₹1,849 ಕ್ಕೆ 365 ದಿನಗಳ ವ್ಯಾಲಿಡಿಟಿ!

ನೀವು ಪ್ರತಿ ತಿಂಗಳು ದುಬಾರಿ ರೀಚಾರ್ಜ್ ಮಾಡಿಸಿ ತಲೆಬಿಸಿ ಮಾಡಿಕೊಳ್ಳುತ್ತಿದ್ದರೆ, ಈ ಪ್ಲಾನ್ ನಿಮಗೆ ಸೂಕ್ತವಾಗಿದೆ. ಏರ್‌ಟೆಲ್‌ನ ಈ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್‌ನ ಬೆಲೆ ಕೇವಲ 1,849 ರೂಪಾಯಿಗಳು ಮಾತ್ರ. ಈ ಅಗ್ಗದ ರೀಚಾರ್ಜ್ ಪ್ಲಾನ್‌ನಲ್ಲಿ ಕಂಪನಿಯು ಗ್ರಾಹಕರಿಗೆ ಬರೋಬ್ಬರಿ 365 ದಿನಗಳ ಅಂದರೆ ಪೂರ್ಣ ಒಂದು ವರ್ಷದ ವ್ಯಾಲಿಡಿಟಿಯನ್ನು ನೀಡುತ್ತಿದೆ.

46
ಇಡೀ ವರ್ಷ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲಿಂಗ್

ಈ ಪ್ಲಾನ್‌ನ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಇದರಲ್ಲಿ ಗ್ರಾಹಕರು ಇಡೀ ವರ್ಷದ ಅವಧಿಗೆ ಯಾವುದೇ ನೆಟ್‌ವರ್ಕ್‌ಗೆ (Local & STD) ಉಚಿತವಾಗಿ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದು. ಪದೇ ಪದೇ ಬ್ಯಾಲೆನ್ಸ್ ಮುಗಿಯುವ ಟೆನ್ಷನ್ ಇಲ್ಲದೆ ಎಷ್ಟು ಬೇಕಾದರೂ ಮಾತನಾಡಲು ಇದು ಅತ್ಯುತ್ತಮ ಆಫರ್ ಆಗಿದೆ.

56
ಇಂಟರ್ನೆಟ್ ಬೇಡ, ಕೇವಲ ಕಾಲಿಂಗ್ ಸಾಕು ಎನ್ನುವವರಿಗೆ ಬೆಸ್ಟ್ ಚಾಯ್ಸ್!

ಏರ್‌ಟೆಲ್‌ನ ಈ ಪ್ರಿಪೇಯ್ಡ್ ಪ್ಲಾನ್ ಪ್ರಮುಖವಾಗಿ ಕೇವಲ ಕಾಲಿಂಗ್ ಪ್ರಯೋಜನಗಳನ್ನು ಬಯಸುವ ಗ್ರಾಹಕರಿಗೆ ಒಂದು ಸೂಕ್ತ ಆಯ್ಕೆಯಾಗಿದೆ. ಹಿರಿಯ ನಾಗರಿಕರಿಗೆ ಅಥವಾ ಸೆಕೆಂಡರಿ ಸಿಮ್ ಕಾರ್ಡ್ ಹೊಂದಿರುವವರಿಗೆ ಮತ್ತು ಇಂಟರ್ನೆಟ್ ಬಳಸದ ಗ್ರಾಹಕರಿಗೆ ಈ ಪ್ಲಾನ್ ತುಂಬಾನೇ ಸಹಕಾರಿಯಾಗಿದೆ.

66
'ವಾಯ್ಸ್ ಓನ್ಲಿ' ಪ್ಲಾನ್: ಡೇಟಾ ಸೌಲಭ್ಯ ಇರುವುದಿಲ್ಲ

ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಇದು ಸಂಪೂರ್ಣವಾಗಿ 'ವಾಯ್ಸ್ ಓನ್ಲಿ' (Voice Only) ರೀಚಾರ್ಜ್ ಪ್ಲಾನ್ ಆಗಿದೆ. ಕಡಿಮೆ ಬೆಲೆಯಲ್ಲಿ ಇಡೀ ವರ್ಷದ ಕಾಲಿಂಗ್ ನೀಡುವುದರಿಂದ, ಈ ಪ್ಲಾನ್‌ನಲ್ಲಿ ಯಾವುದೇ ಇಂಟರ್ನೆಟ್ ಡೇಟಾ ಸೌಲಭ್ಯವನ್ನು ನೀಡಲಾಗುವುದಿಲ್ಲ. ಡೇಟಾ ಬೇಡದೆ ಬರೀ ಕಾಲಿಂಗ್ ಆಫರ್ ಹುಡುಕುತ್ತಿದ್ದವರಿಗೆ ಇದು ಪಕ್ಕಾ ಪೈಸಾ ವಸೂಲ್ ಪ್ಲಾನ್ ಆಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories