ಏರ್‌ಟೆಲ್ ಬ್ಲಾಕ್ ಯೋಜನೆ
ನೀವು ಮನೆಗೆ ಉತ್ತಮ ವೈಫೈ ಪಡೆಯಲು ಯೋಜಿಸುತ್ತಿದ್ದರೆ, ಏರ್‌ಟೆಲ್ ಬ್ಲಾಕ್ ಯೋಜನೆಯನ್ನು ಬಳಸಬಹುದು. ಇದರ ಮೂಲಕ ವೈಫೈ ಮತ್ತು ಡಿಟಿಹೆಚ್, ಒಟಿಟಿ ಮತ್ತು ಲ್ಯಾಂಡ್‌ಲೈನ್ ಸಂಪರ್ಕ ಸಿಗುತ್ತದೆ. ಒಂದೇ ಯೋಜನೆಯಲ್ಲಿ WiFi + DTH + OTT + ಲ್ಯಾಂಡ್‌ಲೈನ್ ಸೌಲಭ್ಯವನ್ನು ಒದಗಿಸಲು ಏರ್‌ಟೆಲ್ ಬ್ಲಾಕ್ ಎಂಬ ವಿಶೇಷ ಯೋಜನೆ ಆರಂಭಿಸಲಾಗಿದೆ.
ಏರ್‌ಟೆಲ್ ಬ್ಲಾಕ್ ಯೋಜನೆ
ಈ ಎಲ್ಲಾ ಸೇವೆಗಳಿಗೆ ಪ್ರತ್ಯೇಕವಾಗಿ ಶುಲ್ಕ ಪಾವತಿಸಿದರೆ ರೂ.2199 ಪಾವತಿಸಬೇಕು. ಆದರೆ ಏರ್‌ಟೆಲ್ ಬ್ಲಾಕ್ ಯೋಜನೆಯಲ್ಲಿ ಸೇರಿದರೆ ತಿಂಗಳಿಗೆ ರೂ.699 (ತೆರಿಗೆಗಳನ್ನು ಸೇರಿಸಿ) ಶುಲ್ಕದಲ್ಲಿ ಈ ಎಲ್ಲಾ ಸೌಲಭ್ಯಗಳು ಲಭ್ಯವಾಗುತ್ತವೆ.40 mbps ವೇಗದ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಸಂಪರ್ಕ ಮಾತ್ರ ತಿಂಗಳಿಗೆ ರೂ 499 (ತೆರಿಗೆಗಳನ್ನು ಸೇರಿಸಿ) ಆಗುತ್ತದೆ ಎಂಬುದು ಗಮನಾರ್ಹ.
ಏರ್‌ಟೆಲ್ ಬ್ಲಾಕ್ ಯೋಜನೆ
ಏರ್‌ಟೆಲ್ ಬ್ಲಾಕ್ ಯೋಜನೆಯಲ್ಲಿ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದಿಲ್ಲ; ಎಲ್ಲಾ ಸೇವೆಗಳೂ ಒಂದೇ ಬಿಲ್‌ನಲ್ಲಿ ಸೇರಿರುತ್ತವೆ. ಅಂದರೆ, ಒಂದು ಬಿಲ್‌ಗೆ ಮಾತ್ರ ಹಣ ಪಾವತಿಸಿದರೆ ಸಾಕು. ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಇದು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಪೋಸ್ಟ್‌ಪೇಯ್ಡ್ ಯೋಜನೆ. ಈ ಯೋಜನೆಗೆ ಆಗುವ ದೈನಂದಿನ ಖರ್ಚನ್ನು ಲೆಕ್ಕ ಹಾಕಿದರೆ, ದಿನಕ್ಕೆ 24 ರೂಪಾಯಿಗಳು ಮಾತ್ರ ಆಗುತ್ತದೆ.
ಏರ್‌ಟೆಲ್ ಬ್ಲಾಕ್ ಯೋಜನೆ
ಏರ್‌ಟೆಲ್ ಬ್ಲಾಕ್ ಯೋಜನೆ 40mbps ಇಂಟರ್ನೆಟ್ ವೇಗವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ಸಿಗುವ ಲ್ಯಾಂಡ್‌ಲೈನ್ ಸಂಪರ್ಕದ ಮೂಲಕ ಎಷ್ಟು ಫೋನ್ ಕರೆಗಳನ್ನೂ ಉಚಿತವಾಗಿ ಮಾಡಿಕೊಳ್ಳಬಹುದು. ಇದಲ್ಲದೆ, ಗ್ರಾಹಕರು ರೂ.300 ಮೌಲ್ಯದ ಟಿವಿ ಚಾನೆಲ್‌ಗಳೊಂದಿಗೆ ಡಿಟಿಹೆಚ್ (ಡೈರೆಕ್ಟ್-ಟು-ಹೋಮ್) ಸಂಪರ್ಕವನ್ನೂ ವೀಕ್ಷಿಸಬಹುದು.
ಏರ್‌ಟೆಲ್ ಬ್ಲಾಕ್ ಯೋಜನೆ
ಈ ಯೋಜನೆಯಲ್ಲಿ 350+ ಡಿಟಿಹೆಚ್ ಚಾನೆಲ್‌ಗಳಿವೆ. ಈ ಯೋಜನೆಯಲ್ಲಿ ಸೇರುವ ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಟ್ರೀಮ್ ಆ್ಯಪ್ ಸೇರಿದಂತೆ 12 ಒಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರರನ್ನೂ ಹೆಚ್ಚುವರಿ ಶುಲ್ಕವಿಲ್ಲದೆ ವೀಕ್ಷಿಸಬಹುದು.
ಏರ್‌ಟೆಲ್‌ನ ರೂ.699 ಯೋಜನೆಗೆ Airtel.in ವೆಬ್‌ಸೈಟ್‌ನಲ್ಲಿ ರೀಚಾರ್ಜ್ ಮಾಡಬಹುದು. ಈ ಯೋಜನೆ ಈಗ ದೆಹಲಿ, ಮುಂಬೈ, ಬೆಂಗಳೂರು ಮುಂತಾದ ದೊಡ್ಡ ನಗರಗಳಲ್ಲಿ ಲಭ್ಯವಿದೆ.