ಭಾರತಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಇದೀಗ ಹೊಸ ಐಆರ್ ಪ್ಲಾನ್ ಘೋಷಿಸಿದೆ. ಇದರಿಂದ 189 ದೇಶಗಳಿಗೆ ಪ್ರವಾಸ ಮಾಡಿದರೂ ಯಾವುದೇ ಸಮಸ್ಯೆ ಇಲ್ಲ. ರೋಮಿಂಗ್‌ನಲ್ಲಿ ಅನ್‌ಲಿಮಿಟೆಡ್ ಡೇಟಾ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಬೇರೆ ದೇಶಕ್ಕೆ ತೆರಳಿದಾಗ ಸಿಮ್ ಬದಲಿಸುವ, ಅಥವಾ ಸಮಸ್ಯೆ ಎದುರಿಸುವ ಯಾವುದೇ ಆತಂಕವಿಲ್ಲ. ಏರ್‌ಟೆಲ್ ಐಆರ್ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಸರಳ, ಹೆಚ್ಚು ಅಗ್ಗ ಮತ್ತು ಸಂಪೂರ್ಣವಾಗಿ ತಡೆ-ರಹಿತವನ್ನಾಗಿಸಿದೆ.. ಸಂಸ್ಥೆಯು 189 ದೇಶಗಳಾದ್ಯಂತ ಅನಿಯಮಿತ ಡೇಟಾ ಒದಗಿಸುವ ಭಾರತದ ಮೊಟ್ಟಮೊದಲ ಅನಿಯಮಿತ ಐಆರ್ ಪ್ಲಾನ್ಸ್ ಅನಾವರಣಗೊಳಿಸಿದೆ.