ಏರ್ ಇಂಡಿಯಾದಿಂದ ವಿಮಾನ ಟಿಕೆಟ್‌ ಫ್ಲ್ಯಾಶ್ ಸೇಲ್: ಕೇವಲ ₹1300 ರಿಂದ ಆರಂಭ!

Published : May 16, 2025, 04:05 PM ISTUpdated : May 16, 2025, 04:06 PM IST

ಏರ್ ಇಂಡಿಯಾ ಎಕ್ಸ್‌ಪ್ರೆಸ್ 'ಫ್ಲ್ಯಾಶ್ ಸೇಲ್' ಅನ್ನು ಘೋಷಿಸಿದೆ, ₹1300 ರಿಂದ ಪ್ರಾರಂಭವಾಗುವ ಟಿಕೆಟ್‌ಗಳೊಂದಿಗೆ. ಈ ಆಫರ್ ಮೇ 18, 2025 ರವರೆಗೆ ಲಭ್ಯವಿದ್ದು, ಜೂನ್ 1 ರಿಂದ ಸೆಪ್ಟೆಂಬರ್ 15, 2025 ರವರೆಗೆ ಪ್ರಯಾಣಕ್ಕೆ ಅವಕಾಶ ನೀಡುತ್ತದೆ.

PREV
15
ಏರ್ ಇಂಡಿಯಾದಿಂದ ವಿಮಾನ ಟಿಕೆಟ್‌ ಫ್ಲ್ಯಾಶ್ ಸೇಲ್: ಕೇವಲ ₹1300 ರಿಂದ ಆರಂಭ!

ಬೇಸಿಗೆ ರಜೆಯಲ್ಲಿ ಪ್ರವಾಸವನ್ನು ಯೋಜಿಸುತ್ತಿದ್ದೀರಾ? ಹಾಗಿದ್ದರೆ ನೀವು ಈ ಸುದ್ದಿ ತಿಳಿದುಕೊಳ್ಳಲೇಬೇಕು. ಏರ್ ಇಂಡಿಯಾ ಎಕ್ಸ್‌ಪ್ರೆಸ್  ‘ಫ್ಲ್ಯಾಶ್ ಸೇಲ್’ ಎಂಬ ಹೊಸ ಆಫರ್ ಘೋಷಿಸಿದೆ. ಇದರಲ್ಲಿ ರೂ.1300 ರಿಂದ  ಟಿಕೆಟ್‌ ದರ ಆರಂಭವಾಗುತ್ತಿದೆ. ಜೊತೆಗೆ ಯಾವುದೇ ಕನ್ವಿನಿಯನ್ಸ್  ಶುಲ್ಕ ಇರುವುದಿಲ್ಲ. ಏರ್‌ಲೈನ್‌ ಅಧಿಕೃತ ವೆಬ್‌ಸೈಟ್ www.airindiaexpress.com ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಈ ಆಫರ್ ಲಭ್ಯವಿದೆ. 

25

 ಎಕ್ಸ್‌ಪ್ರೆಸ್ ಲೈಟ್ ಎಂಬುದು ವಿಶೇಷ ಶೂನ್ಯ-ಚೆಕ್-ಇನ್ ಬ್ಯಾಗೇಜ್ ದರವಾಗಿದ್ದು, ಇದು ವಿಮಾನಯಾನ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ  ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬೇಸಿಗೆ ಋತುವಿಗೆ ಮುಂಚಿತವಾಗಿ ಬುಕಿಂಗ್‌ಗಳನ್ನು ಹೆಚ್ಚಿಸುವ  ಯೋಜನೆಯ ಭಾಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್    'ಫ್ಲ್ಯಾಶ್ ಸೇಲ್' ಮೇ 18, 2025 ರವರೆಗೆ ಈ ಆಫರ್ ಲಭವಿದ್ದು,  ಜೂನ್ 1  ರಿಂದ ಸೆಪ್ಟೆಂಬರ್ 15, 2025 ರ ಒಳಗಾಗಿ ಈ ವಿಶೇಷ ಟಿಕೆಟ್‌ ನಲ್ಲಿ ಪ್ರಯಾಣ ಮಾಡಬಹುದಾಗಿದೆ.

35

ಪ್ರಯಾಣಿಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ ಮೂರು ಕಿಲೋಗ್ರಾಂಗಳಷ್ಟು ಕ್ಯಾಬಿನ್ ಬ್ಯಾಗೇಜ್ ಅನ್ನು ಮುಂಗಡವಾಗಿ ಬುಕ್ ಮಾಡಬಹುದು, ದೇಶೀಯ ವಿಮಾನಗಳಲ್ಲಿ 15 ಕೆಜಿಗೆ ₹1,000 ಮತ್ತು ಅಂತರರಾಷ್ಟ್ರೀಯ  ಪ್ರಯಾಣಕ್ಕೆ 20 ಕೆಜಿಗೆ ₹1,300 ಚೆಕ್-ಇನ್ ಬ್ಯಾಗೇಜ್ ದರದಲ್ಲಿ ರಿಯಾಯಿತಿ ಇರಲಿದೆ. ಇದರ ಜೊತೆಗೆ, ₹1524 ರಿಂದ ಆರಂಭವಾಗುವ ಎಕ್ಸ್‌ಪ್ರೆಸ್ ವ್ಯಾಲ್ಯೂ ದರಗಳು ಎಲ್ಲಾ ಪ್ರಮುಖ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಲಾಯಲ್ಟಿ ಸದಸ್ಯರಿಗೆ ಎಕ್ಸ್‌ಪ್ರೆಸ್ ಬಿಜ್ ಮತ್ತು ಅಪ್‌ಗ್ರೇಡ್‌ಗಳ ಮೇಲೆ 25% ರಿಯಾಯಿತಿ ಲಭ್ಯವಿದೆ. ಎಕ್ಸ್‌ಪ್ರೆಸ್ ಬಿಜ್ ಸೀಟುಗಳು 58 ಇಂಚುಗಳ ವಿಸ್ತೃತವಾದ ಲೆಗ್‌ರೂಂ ಹೊಂದಿದ್ದು, ನವೀನ ಬೋಯಿಂಗ್ 737 8 ವಿಮಾನಗಳಲ್ಲಿ ಲಭ್ಯವಿದೆ.

45

ಲಾಯಲ್ಟಿ ಸದಸ್ಯರಿಗೆ ಉಚಿತ ಹಾಟ್ ಮೀಲ್ಸ್, ಹೆಚ್ಚುವರಿ ಲಗೇಜ್‌ನಲ್ಲಿ ರಿಯಾಯಿತಿ ಸಿಗುತ್ತೆ, ಸೀಟ್ ಆಯ್ಕೆ,ಆದ್ಯತಾ ಚೆಕ್-ಇನ್ (Express Ahead), ಬ್ಯಾಗೇಜ್ ಆಡ್-ಆನ್ ಗಳ ಮೇಲೆ 25% ರಿಯಾಯಿತಿ (ಅಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಲಭ್ಯ) ಇರಲಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಆರೋಗ್ಯ ಕಾರ್ಯಕರ್ತರು ಹಾಗೂ  ಭಾರತೀಯ ಸೇನೆಗೆ ಸೇರಿದ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಡಿಜಿಟಲ್ ಮಾಧ್ಯಮಗಳ ಮೂಲಕ ಲಭ್ಯವಿರುವ ವಿಶೇಷ ದರಗಳ ಸೌಲಭ್ಯ ಮುಂದುವರೆದಿದೆ.
 

55

 ಟಾಟಾ  ಮತ್ತು ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್, 72 ಬೋಯಿಂಗ್ 737 ವಿಮಾನಗಳು ಮತ್ತು 40 ಏರ್‌ಬಸ್ A320 ವಿಮಾನಗಳನ್ನು ಒಳಗೊಂಡ 112 ವಿಮಾನಗಳ ಫ್ಲೀಟ್‌ನೊಂದಿಗೆ 38 ದೇಶೀಯ ಮತ್ತು 17 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ದಿನಕ್ಕೆ 500 ಕ್ಕೂ ಹೆಚ್ಚು  ವಿಮಾನಗಳು ಸೇವೆಗೆ ಲಭ್ಯವಿದೆ. 

Read more Photos on
click me!

Recommended Stories