ಮಹಿಳೆಯರು ಕ್ರಮಬದ್ಧವಾಗಿ ಹಣ ಖರ್ಚು ಮಾಡಿದ್ರೆ ಉಳಿತಾಯದ ಖಾತೆ ಭರ್ತಿಯಾಗುತ್ತಾ ಸಾಗುತ್ತದೆ. ಕೆಲವು ಟ್ರಿಕ್ ಬಳಸಿದ್ರೆ ಮಹಿಳೆಯರು ಬಹುಬೇಗ ಶ್ರೀಮಂತರಾಗಬಹುದು. ಹಣ ಹೇಗೆ ಉಳಿಸಬೇಕು ಎಂಬುದರ ಕುರಿತ ಕೆಲ ಸಲಹೆಗಳು ಇಲ್ಲಿವೆ.
ಮಹಿಳೆಯರು ಈ ಕೆಳಗಿನ ಅಭ್ಯಾಸಗಳನ್ನು ಬಳಸಲು ಆರಂಭಿಸಿದ್ರೆ ತಮ್ಮ ಬಳಿಯಲ್ಲಿರುವ ಹಣದ ಮೊತ್ತ ಭದ್ರವಾಗಿ ಉಳಿಯುತ್ತದೆ. ಹಣ ಹೆಚ್ಚಾದ್ರೆ ಸಹಜವಾಗಿ ನೀವು ಶ್ರೀಮಂತರಾಗಬಹುದು. ಇಲ್ಲಿವೆ ನೋಡಿ ಆ ಟ್ರಿಕ್‌ಗಳು.
ಮಹಿಳೆಯರು ತಮ್ಮ ಆದಾಯನ ಎಷ್ಟು ಎಂಬುದನ್ನು ತಿಳಿದುಕೊಂಡು ಸ್ಪಷ್ಟವಾದ ಆರ್ಥಿಕ ಯೋಜನೆಗಳನ್ನು ಹಾಕಿಕೊಳ್ಳಬೇಕು. ಈ ಯೋಜನೆಗಳಿಗೆ ಅಂದ್ರೆ ಪ್ಲಾನ್‌ಗೆ ನೀವು ಬದ್ಧವಾಗಿರಬೇಕು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನಿಮ್ಮ ನಿಲುವು ಸ್ಪಷ್ಟವಾಗಿರಬೇಕು.
ಮಧ್ಯಮ ವರ್ಗದ ಮಹಿಳೆಯರು ಹಣ ಹೆಚ್ಚಾದಂತೆ ಐಷಾರಾಮಿ ಜೀವನಕ್ಕೆ ವಾಲಿಕೊಳ್ಳುತ್ತಾರೆ. ಇದರಿಂದ ಹಣ ಪೋಲಾಗುತ್ತದೆ. ಅದಾಗಲೇ ಶ್ರೀಮಂತರಾಗಿರುವ ಮಹಿಳೆಯರು ಸಹಜ ಜೀವನ ಇಷ್ಟಪಡುತ್ತಾರೆ. ಹಣ ಹೆಚ್ಚಾದ್ರೆ ಅದನ್ನು ಕ್ರಮಬದ್ಧವಾಗಿ ಹೂಡಿಕೆ ಮಾಡುತ್ತಾರೆ. ಇಂತಹ ಹೂಡಿಕೆಗಳು ದೀರ್ಘಕಾಲದವರೆಗೆ ಆದಾಯ ನೀಡುತ್ತಿರುತ್ತಿವೆ.
ಶ್ರೀಮಂತ ಮಹಿಳೆಯರು ಹಣದ ಉಳಿತಾಯ ಹಾಗೂ ಹೂಡಿಕೆ ಬಗ್ಗೆ ತಿಳಿದುಕೊಂಡಿರುತ್ತಾರೆ. ಹಣದಿಂದ ಮತ್ತಷ್ಟು ಹಣ ಸಿಗಬೇಕೆಂದು ಬಯಸುತ್ತಾರೆ. ಅನಾವಶ್ಯಕವಾಗಿ ಹಣ ಪೋಲು ಮಾಡೋದನ್ನು ತಪ್ಪಿಸುತ್ತಾರೆ. ಈ ಯೋಚನೆ ಬಂದಾಗ ಮಾತ್ರ ಮಧ್ಯಮ ವರ್ಗದ ಮಹಿಳೆಯರು ಶ್ರೀಮಂತರಾಗಬಹುದು .
ಮಹಿಳೆಯರು ವೈಯಕ್ತಿಕ ಹಣಕಾಸು, ಹೂಡಿಕೆ, ಶೇರು ಮಾರುಕಟ್ಟೆ, ಬ್ಯಾಂಕ್ ಬಡ್ಡಿದರ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಆರ್ಥಿಕವಾಗಿ ಹೇಗೆ ಸಬಲರಾಗಬೇಕು ಎಂಬುದರ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು.
ಉಳಿಸಿದ ಹಣವನ್ನು ಮನೆಯಲ್ಲಿ ತೆಗೆದಿಡೋದು ಮಹಿಳೆಯರ ರೂಢಿ. ಆದ್ರೆ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? ಹೂಡಿಕೆಯಿಂದ ಎಷ್ಟು ಪ್ರಮಾಣದಲ್ಲಿ ಪ್ರತಿಫಲ ಸಿಗುತ್ತೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಸಣ್ಣ ಸಣ್ಣ ಉಳಿತಾಯಕ್ಕೆ ಮುಂದಾದ್ರೆ ಮಾತ್ರ ಭವಿಷ್ಯದಲ್ಲಿ ಶ್ರೀಮಂತರಾಗಬಹುದು.