ಇಂದು ಹಳ್ಳಿಗಳಲ್ಲಿಯೂ ಡಿಜಿಟಲ್ ಪೇಮೆಂಟ್ ಸ್ವೀಕರಿಸಲಾಗುತ್ತದೆ. ಹಾಗಾಗಿ ಜೇಬಿನಲ್ಲಿ ಹಣ ಇಟ್ಕೊಂಡು ತಿರುಗಾಡುವ ಅವಶ್ಯಕತೆ ಇಲ್ಲ. ಏನೇ ಖರೀದಿಸಿದರೂ ಆನ್‌ಲೈನ್ ಪೇಮೆಂಟ್ ಮಾಡಬಹುದು. ಡಿಜಿಟಲ್ ವ್ಯವಹಾರ ಮಾಡುವ ದೇಶಗಳಲ್ಲಿ ಭಾರತ ಟಾಪ್ 10 ರಲ್ಲಿದೆ. ಡಿಜಿಟಲ್ ಪೇಮೆಂಟ್‌ನಿಂದ ಚಿಲ್ಲರೆ ಸಮಸ್ಯೆಯೂ ಉಂಟಾಗಲ್ಲ. ಬಸ್ ಪ್ರಯಾಣದ ವೇಳೆಯೂ ಇಂದು ಎಲ್ಲರೂ ಡಿಜಿಟಲ್ ಪೇಮೆಂಟ್ ಮಾಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿರುತ್ತವೆ. ಇದು ದೇಶದ ಅಭಿವೃದ್ಧಿಗೆ ಸಹಾಯಕ ಆಗಲಿದ್ದು, ಸರ್ಕಾರಕ್ಕೆ ಸರಿಯಾಗಿ ತೆರಿಗೆ ಪಾವತಿಯಾಗುತ್ತದೆ.
ಕೆಲವೊಮ್ಮೆ ನೇರವಾಗಿ ನಗದು ಕೊಡುವ ಪ್ರಸಂಗಗಳು ಬರುತ್ತವೆ. ಕೆಲವರು ಕ್ಯಾಶ್ ಬೇಕೆಂದು ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ ಎಟಿಎಂಗೆ ಹೋಗಿ ಹಣ ಡ್ರಾ ಮಾಡಬೇಕಾಗುತ್ತದೆ. ಡೆಬಿಟ್ ಕಾರ್ಡ್ ಇದ್ರೆ ಮಾತ್ರ ಹಣ ಡ್ರಾ ಮಾಡಲು ಸಾಧ್ಯ. ಒಂದು ವೇಳೆ ಡೆಬಿಟ್ ಕಾರ್ಡ್ ಮರೆತ ನೀವು ಎಟಿಎಂ ಕೇಂದ್ರಕ್ಕೆ ಹೋಗಿದ್ರೆ ಆಧಾರ್ ಕಾರ್ಡ್ ಬಳಸಿ ಹಣ ತೆಗೆಯಬಹುದು. ಗ್ರಾಹಕರ ಅನುಕೂಲಕ್ಕಾಗಿ NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) AEPS (ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್) ಈ ಸೌಲಭ್ಯ ಕೊಡ್ತಿದೆ. ಇದರಿಂದ ಆಧಾರ್ ಕಾರ್ಡ್ ಉಪಯೋಗಿಸಿ ಹಣ ತೆಗೆಯಬಹುದು.
ಮೈಕ್ರೋ ATMಗಳಲ್ಲಿ ಬಯೋಮೆಟ್ರಿಕ್ ಮೂಲಕ ಸುಲಭವಾಗಿ ಹಣ ತೆಗೆಯಬಹುದು. ಆಧಾರ್, ಬಯೋಮೆಟ್ರಿಕ್ ಲಿಂಕ್ ಆಗಿದ್ರೆ ಬ್ಯಾಂಕ್ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಮೈಕ್ರೋ ATM ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿ, ಹಣ ಡ್ರಾ ಮಾಡಬಹುದು. ಆಧಾರ್ ಕಾರ್ಡ್ ಉಪಯೋಗಿಸಿ ಹಣ ತೆಗೆಯೋಕೆ ಆಧಾರ್ ನಂಬರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು. ಲಿಂಕ್ ಆಗಿದ್ರೆ ಈ ಹಂತಗಳನ್ನು ಅನುಸರಿಸಿ ಹಣ ತೆಗೆಯಬಹುದು.
*ಮೊದಲು AEPS ಸ್ವೀಕಸಿರುವ ಬ್ಯಾಂಕ್ ಏಜೆಂಟ್ ಅಥವಾ ಮೈಕ್ರೋ ATM ಹತ್ತಿರ ಹೋಗಬೇಕು. ಗ್ರಾಮೀಣ ಪ್ರದೇಶ, ಬ್ಯಾಂಕ್ ಔಟ್‌ಲೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಸಿಗುತ್ತವೆ.
*ಮೈಕ್ರೋ ATM ನಲ್ಲಿ 12 ಅಂಕಿಯ ಆಧಾರ್ ನಂಬರ್ ಹಾಕಿ.
*ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಿಂದ ಬಯೋಮೆಟ್ರಿಕ್ ಪರಿಶೀಲನೆ ಮಾಡಬೇಕಾಗುತ್ತದೆ.
*ನಿಮ್ಮ ಮಾಹಿತಿ ಸರಿಯಾಗಿದ್ರೆ ಕಂಪ್ಯೂಟರ್ ಆಯ್ಕೆಗಳನ್ನು ತೋರಿಸುತ್ತದೆ.
*‘Money Withdraw’ ಆಯ್ಕೆ ಮಾಡಿ. ತೆಗೆಯಬೇಕಾದ ಹಣದ ಮೊತ್ತ ನಮೂದಿಸಿ.
*ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗುತ್ತದೆ. ಮೊತ್ತ ಡ್ರಾಯಲ್ ನಿಯಮಗಳಿಗೆ ಅನುಗುಣವಾಗಿರಬೇಕು.
*ವ್ಯವಹಾರ ಮುಗಿದ ನಂತರ ಬ್ಯಾಂಕ್ ಏಜೆಂಟ್ ಹಣ ಕೊಡ್ತಾರೆ. ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ.
ಎಚ್ಚರಿಕೆ ಇರಲಿ
ಅಧಿಕೃತ ಬ್ಯಾಂಕ್ ಸೇವೆಗಳಲ್ಲಿ ಮಾತ್ರ ಆಧಾರ್ ನಂಬರ್ ಬಳಸಬೇಕು. ಆ್ಯಪ್‌ನಲ್ಲಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸುರಕ್ಷಿತವಾಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಬಹುತೇಕ ಎಲ್ಲಾ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಬ್ಯಾಂಕುಗಳು AEPS ಸೇವೆ ನೀಡುತ್ತವೆ. ಆದರೆ ಅದರ ಲಭ್ಯತೆ ಬ್ಯಾಂಕ್ ಶಾಖೆ ಮತ್ತು ಪ್ರದೇಶವನ್ನು ಅವಲಂಬಿಸಿರುತ್ತದೆ.