ನಿಮ್ಮ ಪ್ರತಿ ತಿಂಗಳ ಸ್ಯಾಲರಿ ಕೇವಲ 20 ಸಾವಿರ ರೂಪಾಯಿ ಆಗಿದ್ದರೂ, ನೀವು ಕೋಟ್ಯಧಿಪತಿಯಾಗಬಹುದು. 1 ಕೋಟಿ ರೂಪಾಯಿಗಳ ನಿಧಿಯನ್ನು ರಚಿಸಲು ನಿರ್ಧಾರ ಮಾಡಿದರೆ, ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ? ಇದಕ್ಕಾಗಿ ನೀವು ಅಳವಡಿಸಿಕೊಳ್ಳಬೇಕಾಗಿರುವ ಬುಲ್ ರನ್ ತಂತ್ರ. ಇದಕ್ಕಾಗಿ ನೀವು ದೀರ್ಘಾವಧಿಯ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಅದ್ಭುತ ಆದಾಯ ಕೂಡ ನಿಮಗೆ ಸಿಗುತ್ತದೆ. ಈ ಸಂಪೂರ್ಣ ಅವಧಿಯಲ್ಲಿ ನೀವು ಬಡ್ಡಿಯ ಮೇಲೆ ಬಡ್ಡಿಯನ್ನು ಪಡೆಯುತ್ತೀರಿ. ನೀವು ಎಷ್ಟು ಬೇಗ ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ಪ್ರಯೋಜನವನ್ನು ಪಡೆಯುತ್ತೀರಿ. 'ಕಂಪೌಂಡಿಂಗ್' ಲಾಭ ಪಡೆಯಲು, ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಮಾಡಬೇಕು.