Published : Mar 08, 2025, 07:38 AM ISTUpdated : Mar 08, 2025, 07:43 AM IST
Gold And Silver Price Today: ಮಹಿಳಾ ದಿನಾಚರಣೆಯ ಪ್ರಯುಕ್ತ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮಹಿಳೆಯರು ಉಳಿತಾಯದ ಹಣದಲ್ಲಿ ಚಿನ್ನಾಭರಣ ಖರೀದಿಸಲು ಇದು ಸಕಾಲ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದಿನನಿತ್ಯದ ಖರ್ಚುಗಳಲ್ಲಿ ನಾಲ್ಕು ಕಾಸು ಉಳಿಸಲು ಮಹಿಳೆಯರು ಪ್ರಯತ್ನಿಸುತ್ತಾರೆ. ಹೀಗೆ ಉಳಿಸಿದ ಹಣದಿಂದಲೇ ತಮಗಿಷ್ಠದ ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಇಂದು ಮಹಿಳಾ ದಿನಾಚರಣೆಯಾಗಿದ್ದು, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
27
ಮಹಿಳಾ ದಿನಾಚರಣೆಗೆ ನಿಮ್ಮ ಸಂಗಾತಿ ಅಥವಾ ತಾಯಿ ಅಥವಾ ಸೋದರಿ ಅಥವಾ ಸ್ನೇಹಿತೆಗೆ ಏನಾದ್ರೂ ಗಿಫ್ಟ್ ಕೊಡಿಸುವ ಪ್ಲಾನ್ ಇದ್ರೆ ಚಿನ್ನವನ್ನೇ ಕೊಡಿಸಬಹುದು. ಬೆಲೆ ಇಳಿಕೆಯಾಗಿರುವ ಚಿನ್ನದ ಬೆಲೆ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
37
ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,989 ರೂಪಾಯಿ
8 ಗ್ರಾಂ: 63,912 ರೂಪಾಯಿ
10 ಗ್ರಾಂ: 79,890 ರೂಪಾಯಿ
100 ಗ್ರಾಂ: 7,98,900 ರೂಪಾಯಿ
47
ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,715 ರೂಪಾಯಿ
8 ಗ್ರಾಂ: 69,720 ರೂಪಾಯಿ
10 ಗ್ರಾಂ: 87,150 ರೂಪಾಯಿ
100 ಗ್ರಾಂ: 8,71,500 ರೂಪಾಯಿ
57
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 79,890 ರೂಪಾಯಿ, ಮುಂಬೈ: 79,890 ರೂಪಾಯಿ, ದೆಹಲಿ: 80,004 ರೂಪಾಯಿ, ಕೋಲ್ಕತ್ತಾ: 79,890 ರೂಪಾಯಿ, ಬೆಂಗಳೂರು: 79,890 ರೂಪಾಯಿ, ಹೈದರಾಬಾದ್: 79,890 ರೂಪಾಯಿ
67
ಎಷ್ಟು ದರ ಇಳಿಕೆ?
ಇಂದು 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ 100 ರೂ.ಗಳವರೆಗೆ ಇಳಿಕೆಯಾಗಿದೆ. ಚಿನ್ನದ ಬೆಲೆ ಇಳಿಕೆ ನಗರದಿಂದ ನಗರಕ್ಕೆ ಬದಲಾಗುತ್ತಿರುತ್ತದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ. ಏರಿಕೆ ಕಂಡು ಬಂದಿದೆ.
77
ದೇಶದಲ್ಲಿ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 992 ರೂಪಾಯಿ
100 ಗ್ರಾಂ: 9,920 ರೂಪಾಯಿ
1 ಕೆಜಿ: 99,200 ರೂಪಾಯಿ