ಚಿನ್ನದ ಬೆಲೆ ಏರುತ್ತಿರುವಾಗ ಗಿಲ್ಟ್ ಆಭರಣಗಳ ವ್ಯಾಪಾರ ಪ್ರಾರಂಭಿಸಿದರೆ ಒಳ್ಳೆಯ ಲಾಭ ಗಳಿಸಬಹುದು. ಅಂದರೆ ರೋಲ್ಡ್ ಗೋಲ್ಡ್ ಆಭರಣಗಳು ತಯಾರಿಕೆ ಮಾರಾಟವು ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹೊತ್ತಲ್ಲಿ ಉತ್ತಮ ಲಾಭ ತರುವ ವ್ಯಾಪಾರವಾಗಿದೆ ಏಕೆಂದರೆ ಬೆಲೆ ಏರಿಕೆಯಿಂದ ಚಿನ್ನ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಜೊತೆಯಲ್ಲೇ ಉಳ್ಳವರು ಚಿನ್ನ ಧರಿಸುವುದಕ್ಕೂ ಭಯಪಡುತ್ತಿದ್ದಾರೆ. ಏಕೆಂದರೆ ಚಿನ್ನದಂಥ ದುಬಾರಿ ವಸ್ತುಗಳನ್ನು ಧರಿಸಿ ಕಳೆದುಕೊಳ್ಳಲು, ಕಳ್ಳರ ಪಾಲಾಗಲು ಬಯಸುವುದಿಲ್ಲ. ಆದ್ರೆ ಚಿನ್ನದ ಬದಲಿಗೆ ಮಹಿಳೆಯರು ರೋಲ್ದ್ ಗೋಲ್ಡ್ ಬಗ್ಗೆ ಹೆಚ್ಚು ಒಲುವು ತೋರಿಸುತ್ತಿದ್ದಾರೆ. ಚಿನ್ನದಂತೆ ಕಾಣುವ ರೋಲ್ಡ್ ಗೋಲ್ಡ್ ಧರಿಸಲು ಕಂಫರ್ಟ್ ಒಂದು ವೇಳೆ ಕಳೆದುಹೋದರೂ ಚಿಂತೆ ಪಡಬೇಕಿಲ್ಲ. ಅದು ದೊಡ್ಡ ಮೊತ್ತದ ಚಿನ್ನವೂ ಅಲ್ಲ.ವಲ್ಲ