ಏಪ್ರಿಲ್ 1ರಿಂದ ಬದಲಾವಣೆ; ಹಣ ಉಳಿಸಿಕೊಳ್ಳಲು ಪ್ರತಿ ಭಾರತೀಯ ತಿಳಿಯಬೇಕಾಗಿರೋ 6 ವಿಷಯಗಳಿವು!
ಏಪ್ರಿಲ್ ತಿಂಗಳು ಶುರುವಾಗಿದೆ, ಹೊಸ ಆರ್ಥಿಕ ವರ್ಷದ ಬಂದಿದೆ. ಹೀಗಾಗಿ ಒಂದಷ್ಟು ಬದಲಾವಣೆಯಾಗಿದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು.
ಏಪ್ರಿಲ್ ತಿಂಗಳು ಶುರುವಾಗಿದೆ, ಹೊಸ ಆರ್ಥಿಕ ವರ್ಷದ ಬಂದಿದೆ. ಹೀಗಾಗಿ ಒಂದಷ್ಟು ಬದಲಾವಣೆಯಾಗಿದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು.
ಏಪ್ರಿಲ್ 1ರಿಂದ ಹಣಕಾಸು ನೀತಿಯಲ್ಲಿ ಒಂದಷ್ಟು ಬದಲಾವಣೆ ಆಗುವುದು. ಹೀಗಾಗಿ ಈ ಕೆಳಗಿನ ವಿಷಯಗಳನ್ನು ಅನೇಕರು ತಿಳಿದುಕೊಳ್ಳಬೇಕು.
ಒಂದು ಹಣಕಾಸು ವರ್ಷದಲ್ಲಿ ಪಾವತಿಯು ರೂ. 20,000 ಮೀರಿದರೆ, 10% ದರದಲ್ಲಿ ಮಾಡುವ ಯಾವುದೇ ಸಂಬಳ, ಸಂಭಾವನೆ, ಬೋನಸ್ ಅಥವಾ ಕಮಿಷನ್ ಪಾವತಿಗಳಿಗೆ ಟಿಡಿಎಸ್ ಕಡಿತಗೊಳಿಸಬೇಕಾಗುತ್ತದೆ.
ಒಟ್ಟೂ ಆದಾಯವು, ತೆರಿಗೆಯ ಆದಾಯಕ್ಕಿಂತ ಕಡಿಮೆ ಇದ್ದರೆ, ಸೇವಿಂಗ್ಸ್ ಎಫ್‌ಡಿ ಅಕೌಂಟ್ ಮೇಲೆ ತೆರಿಕೆ ಹಾಕೋಕೆ ಆಗೋದಿಲ್ಲ.
ಐಟಿಆರ್‌ನಲ್ಲಿ ಕ್ರಿಪ್ಟೋ ವಹಿವಾಟುಗಳನ್ನು ಮರೆಮಾಡುವಂತಿಲ್ಲ ಏಕೆಂದರೆ ಕಂಪನಿಗಳು ಅವುಗಳನ್ನು ತೆರಿಗೆ ಅಧಿಕಾರಿಗಳಿಗೆ ಕಡ್ಡಾಯವಾಗಿ ಬಹಿರಂಗಪಡಿಸಬೇಕು.
ಏಪ್ರಿಲ್ 1 ರಿಂದ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಯುಪಿಐ ಐಡಿಗಳನ್ನು ಎನ್‌ಪಿಸಿಐ ತೆಗೆದುಹಾಕಲಿದೆ. ಇದು ಒಂದಷ್ಟು ಬದಲಾವಣೆ ತರುವುದು.
ಅನೇಕ ಪ್ರದೇಶಗಳಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ನಿರಂತರವಾಗಿ ಪಡೆಯಲು ಪಡಿತರ ಚೀಟಿ ಇ-ಕೆವೈಸಿ (ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಕಡ್ಡಾಯವಾಗಿದೆ. ಹಾಗೆ ಮಾಡಿಲ್ಲ ಅಂದ್ರೆ ಪಡಿತರ ಚೀಟಿ ನಿಷ್ಕ್ರಿಯತೆ ಅಥವಾ ರದ್ದತಿಗೆ ಕಾರಣವಾಗಬಹುದು.ಇದರ ಪರಿಣಾಮವಾಗಿ ಪ್ರಯೋಜನಗಳ ನಷ್ಟವಾಗಬಹುದು.
kyc ಇಲ್ಲದಿರೋ Fastag ಡಿಆಕ್ಟಿವೇಟ್ ಆಗುವುದು ಅಥವಾ ಬ್ಲ್ಯಾಕ್‌ಲಿಸ್ಟ್ ಆಗುವುದು. KYC ಅಂದರೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ಎಂದರ್ಥ. ಇದು ಬ್ಯಾಂಕ್‌ಗಳು ಗ್ರಾಹಕರ ಗುರುತು ಮತ್ತು ವಿಳಾಸದ ಬಗ್ಗೆ ಮಾಹಿತಿಯನ್ನು ಪಡೆಯುವ ಪ್ರಕ್ರಿಯೆ