ಕರ್ನಾಟಕದಲ್ಲಿ ದಸರಾ ಹಬ್ಬದ ಭರ್ಜರಿ ಆಫರ್ ಘೋಷಿಸಿದ ಯಮಹಾ, ಮುಗಿಬಿದ್ದ ಗ್ರಾಹಕರು

Published : Sep 18, 2025, 08:52 PM IST

ಕರ್ನಾಟಕದಲ್ಲಿ ದಸರಾ ಹಬ್ಬದ ಭರ್ಜರಿ ಆಫರ್ ಘೋಷಿಸಿದ ಯಮಹಾ, ಮುಗಿಬಿದ್ದ ಗ್ರಾಹಕರು, ಕ್ಯಾಶ್‌ಬ್ಯಾಗ್, ಇನ್ಶೂರೆನ್ಸ್ ಜೊತೆಗೆ ಜಿಎಸ್‌ಟಿ ಲಾಭವವನ್ನೂ ಗ್ರಾಹಕರಿಗೆ ನೀಡಲಾಗುತ್ತಿದೆ. ಯಾವ ಬೈಕ್ ಸ್ಕೂಟರ್ ಮೇಲೆ ಘೋಷಿರುವ ಆಫರ್ ಏನು?

PREV
15
ಕರ್ನಾಟಕದಲ್ಲಿ ದಸರಾ ಹಬ್ಬದ ಆಫರ್

ಕರ್ನಾಟಕದಲ್ಲಿ ದಸರಾ ಹಬ್ಬದ ಆಫರ್

ಕರ್ನಾಟಕದಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಮೈಸೂರು ದಸರಾದಿಂದ ಆರಂಭಗೊಂಡು ಮಂಗಳೂರು ದಸರಾ, ಕೊಡಗು ದಸರಾ ಸೇರಿದಂತೆ ಜಿಲ್ಲೆ ಜಿಲ್ಲೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.ಈ ಹಬ್ಬದ ಸಂಭ್ರಮ ಹೆಚ್ಚಿಸಲು ಯಮಹಾ ಇಂಡಿಯಾ ಇದೀಗ ತನ್ನ ಸ್ಕೂಟರ್ ಹಾಗೂ ಬೈಕ್ ಮೇಲೆ ಭರ್ಜರಿ ಆಫರ್ ಘೋಷಿಸಿದೆ.

25
ಯಮಹಾ ವಿಶೇಷ ಆಫರ್‌ನಲ್ಲಿ ಏನೆಲ್ಲಾ ಲಾಭ?

ಯಮಹಾ ವಿಶೇಷ ಆಫರ್‌ನಲ್ಲಿ ಏನೆಲ್ಲಾ ಲಾಭ?

ಯಮಹಾ ತನ್ನ ಜನಪ್ರಿಯ ಮೋಟಾರ್‌ ಸೈಕಲ್‌ ಗಳು ಹಾಗೂ ಸ್ಕೂಟರ್‌ ಗಳ ಮೇಲೆ ಜಿಎಸ್‌ಟಿ ಲಾಭಗಳು, ವಿಮಾ ಆಫರ್‌ ಮತ್ತು ಕ್ಯಾಶ್‌ ಬ್ಯಾಕ್‌ ಒದಗಿಸುವ ಮೂಲಕ ಹಲವಾರು ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಈ ಹಬ್ಬದ ಸಂಭ್ರಮದಲ್ಲಿ ಯಮಹಾ ವಾಹನ ಖರೀದಿಗೆ ಸೂಕ್ತ ಸಮಯ ಎಂದು ಯಮಹಾ ಇಂಡಿಯಾ ಮೋಟಾರ್ ಹೇಳಿದೆ.

35
ಯಮಹಾದ ನವರಾತ್ರಿ ವಿಶೇಷ ಆಫರ್‌ ಗಳು:

ಯಮಹಾದ ನವರಾತ್ರಿ ವಿಶೇಷ ಆಫರ್‌ ಗಳು:

* R15 V4: ಈ ವಾಹನದ ಮೇಲೆ Rs. 15,734 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ

* MT-15: ಈ ವಾಹನದ ಮೇಲೆ Rs. 14,964 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ

* FZ-S Fi ಹೈಬ್ರಿಡ್: ಈ ವಾಹನದ ಮೇಲೆ Rs. 12,031 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,501 ಮೌಲ್ಯದ ವಿಮಾ ಪ್ರಯೋಜನ

* Fascino 125 ಹೈಬ್ರಿಡ್: Rs. 8,509 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 5,401 ಮೌಲ್ಯದ ವಿಮಾ ಪ್ರಯೋಜನ

* RayZR 125 Fi: Rs. 7,759 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 3,799 ವರೆಗೆ ಪ್ರಯೋಜನ

ಕಾರು ಮಾತ್ರವಲ್ಲ ಇದೀಗ ಭಾರತದ ಮೊದಲ ಹೈಬ್ರಿಡ್ ಬೈಕ್ ಯಮಹಾ FZ-S Fi ಬಿಡುಗಡೆ

45
ಯಮಹಾದ ಪ್ರೀಮಿಯಂ ಮೋಟಾರ್‌ ಸೈಕಲ್‌

ಯಮಹಾದ ಪ್ರೀಮಿಯಂ ಮೋಟಾರ್‌ ಸೈಕಲ್‌ ಹಾಗೂ ಸ್ಕೂಟರ್

ಯಮಹಾದ ಪ್ರೀಮಿಯಂ ಮೋಟಾರ್‌ ಸೈಕಲ್‌ ಗಳು ಮತ್ತು ಸ್ಕೂಟರ್‌ ಗಳ ಜೊತೆ ಈ ಸಲದ ನವರಾತ್ರಿ ಮತ್ತು ದಸರಾ ಹಬ್ಬವನ್ನು ಆಚರಿಸಿ. ಪ್ರತೀ ರೈಡ್ ನಲ್ಲಿಯೂ ಹೆಚ್ಚು ಹುಮ್ಮಸ್ಸನ್ನು ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ತಕ್ಷಣವೇ ನಿಮ್ಮ ಹತ್ತಿರದ ಯಮಹಾ ಡೀಲರ್‌ ಶಿಪ್‌ ಗೆ ಭೇಟಿ ನೀಡಿ ಮತ್ತು ಈ ಹಬ್ಬದ ಆಫರ್‌ ಗಳನ್ನು ಪಡೆದುಕೊಳ್ಳಿ.

55
ಕೈಗೆಟುಕುವ ದರದಲ್ಲಿ ಯಮಹಾ

ಕೈಗೆಟುಕುವ ದರದಲ್ಲಿ ಯಮಹಾ

ಯಮಹಾ ಹಬ್ಬದ ಆಫರ್ ಘೋಷಿಸುತ್ತಿದ್ದಂತೆ ಗ್ರಾಹಕರು ಇದೀಗ ಖರೀದಿಗೆ ಮುಗಿ ಬಿದ್ದಿದ್ದಾರೆ. ಸೆಪ್ಟೆಂಬರ್ 22 ರಿಂದ ಜಿಎಸ್‌ಟಿ ಲಾಭವೂ ಗ್ರಾಹಕರ ಕೈಸೇರಲಿದೆ. ಹೀಗಾಗಿ ಯಮಹಾ ದ್ವಿಚಕ್ರ ವಾಹನ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. 

Read more Photos on
click me!

Recommended Stories