ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜುಪಿಟರ್, ಐಕ್ಯೂಬ್, ಆರ್ಬಿಟರ್ ಮತ್ತು ರೈಡರ್ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ, ತನ್ನ ಜನಪ್ರಿಯ ಸ್ಪೋರ್ಟಿ ಸ್ಕೂಟರ್ ಎನ್‌ಟಾರ್ಕ್ 125 ರ ದರವನ್ನು ಕಡಿತಗೊಳಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯ ದಿಗ್ಗಜ ಸಂಸ್ಥೆಯಾದ 'ಟಿವಿಎಸ್ ಮೋಟಾರ್ ಕಂಪನಿ' (TVS Motor Company) ತನ್ನ ವಿವಿಧ ಮಾಡೆಲ್‌ಗಳ ಬೆಲೆಯಲ್ಲಿ ಮಹತ್ವದ ಪರಿಷ್ಕರಣೆ ಮಾಡಿದೆ. ಕಂಪನಿಯು ತನ್ನ ಜನಪ್ರಿಯ ಜುಪಿಟರ್, ಐಕ್ಯೂಬ್, ಆರ್ಬಿಟರ್ ಮತ್ತು ರೈಡರ್ ವಾಹನಗಳ ಬೆಲೆಯನ್ನು 550 ರೂಪಾಯಿಯಿಂದ ಹಿಡಿದು ಭಾರಿ 13,580 ರೂಪಾಯಿಯವರೆಗೆ ಹೆಚ್ಚಿಸಿದೆ. ಆದರೆ ಇದೇ ವೇಳೆ, ತನ್ನ ಸ್ಪೋರ್ಟಿ ಸ್ಕೂಟರ್ 'ಎನ್‌ಟಾರ್ಕ್ 125' (Ntorq 125) ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಅದರ ದರದಲ್ಲಿ ಕಡಿತ ಮಾಡಿದೆ.
26
ಟಿವಿಎಸ್ ಜುಪಿಟರ್ 110 ಮತ್ತು 125 ಸಿಸಿ ಬೆಲೆ ಏರಿಕೆ
ಟಿವಿಎಸ್‌ನ ಅತ್ಯಂತ ಜನಪ್ರಿಯ ಫ್ಯಾಮಿಲಿ ಸ್ಕೂಟರ್ ಆದ ಜುಪಿಟರ್ 110 ರ ಡ್ರಮ್ ವೇರಿಯೆಂಟ್ ಬೆಲೆ ಸಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಇದರ ನೂತನ ಎಕ್ಸ್-ಶೋರೂಂ ಬೆಲೆ ₹73,975 ಆಗಿದೆ. ಇದರ ಸ್ಪೆಷಲ್ ಎಡಿಷನ್ ಬೆಲೆ ₹1,950 ಏರಿಕೆಯಾಗಿದ್ದು, ಈಗ ₹88,850 ಕ್ಕೆ ಸಿಗಲಿದೆ. ಇನ್ನು ಜುಪಿಟರ್ 125 ನ ಡ್ರಮ್ ಅಲಾಯ್ ವೇರಿಯೆಂಟ್ ಬೆಲೆಯಲ್ಲಿ ₹2,410 ಹೆಚ್ಚಳವಾಗಿದ್ದು, ಇದರ ಹೊಸ ಎಕ್ಸ್-ಶೋರೂಂ ಬೆಲೆ ₹81,110 ಕ್ಕೆ ತಲುಪಿದೆ.
36
ಟಿವಿಎಸ್ ಐಕ್ಯೂಬ್ (iQube) ಇವಿ ಎಷ್ಟು ದುಬಾರಿ?
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಭಾರಿ ಮಾರಾಟವಾಗುವ 'ಟಿವಿಎಸ್ ಐಕ್ಯೂಬ್' ನ ವಿವಿಧ ವೇರಿಯೆಂಟ್‌ಗಳ ಬೆಲೆಯಲ್ಲೂ ಏರಿಕೆಯಾಗಿದೆ. ಐಕ್ಯೂಬ್ 2.2 kWh ವೇರಿಯೆಂಟ್ ಬೆಲೆಯಲ್ಲಿ ₹500 ಹೆಚ್ಚಳವಾಗಿದ್ದರೆ, ಇದರ ಟಾಪ್-ಸ್ಪೆಕ್ ST 5.3 kWh ವೇರಿಯೆಂಟ್‌ನಲ್ಲಿ ಗರಿಷ್ಠ ₹10,400 ಬೆಲೆ ಏರಿಕೆಯಾಗಿದೆ. ಇದರೊಂದಿಗೆ ಐಕ್ಯೂಬ್ ಟಾಪ್ ಮಾಡೆಲ್‌ನ ಹೊಸ ಎಕ್ಸ್-ಶೋರೂಂ ಬೆಲೆ ₹1,72,384 ಆಗಿದೆ.
ಟಿವಿಎಸ್ ಆರ್ಬಿಟರ್ (Orbiter) ಸಿರೀಸ್‌ಗೆ ದೊಡ್ಡ ದರ ಏರಿಕೆ ಶಾಕ್
ಟಿವಿಎಸ್‌ನ ಸಂಪೂರ್ಣ ಪೋರ್ಟ್‌ಫೋಲಿಯೋದಲ್ಲಿಯೇ ಅತ್ಯಂತ ದೊಡ್ಡ ಮತ್ತು ಶಾಕಿಂಗ್ ಬೆಲೆ ಏರಿಕೆ 'ಆರ್ಬಿಟರ್' ಸಿರೀಸ್‌ನಲ್ಲಿ ಕಂಡುಬಂದಿದೆ. ಆರ್ಬಿಟರ್ ವಿ1 (Orbiter V1) ಮಾಡೆಲ್ ಬೆಲೆ ₹7,000 ಏರಿಕೆಯಾಗಿದ್ದರೆ, ಆರ್ಬಿಟರ್ ವಿ2 (Orbiter V2) ಮಾಡೆಲ್ ಬೆಲೆಯಲ್ಲಿ ಭಾರಿ ₹13,580 ಹೆಚ್ಚಳ ಮಾಡಲಾಗಿದೆ. ಈ ಭಾರಿ ಏರಿಕೆಯ ನಂತರ ಆರ್ಬಿಟರ್ ವಿ2 ನೂತನ ಎಕ್ಸ್-ಶೋರೂಂ ಬೆಲೆ ₹1,18,480 ಆಗಿದೆ.
56
ಕಮ್ಯೂಟರ್ ಬೈಕ್ 'ಟಿವಿಎಸ್ ರೈಡರ್ 125' ಹೊಸ ದರ
ಯುವಕರ ನೆಚ್ಚಿನ ಕಮ್ಯೂಟರ್ ಮೋಟರ್‌ಸೈಕಲ್ ಆದ 'ಟಿವಿಎಸ್ ರೈಡರ್ 125' (TVS Raider 125) ನ ಡ್ರಮ್ ಮತ್ತು ಸಿಂಗಲ್ ಸೀಟ್ ವೇರಿಯೆಂಟ್‌ಗಳ ಆರಂಭಿಕ ಬೆಲೆಯಲ್ಲಿ ₹550 ಏರಿಕೆ ಮಾಡಲಾಗಿದೆ. ಇದರಿಂದಾಗಿ ಇವುಗಳ ನೂತನ ಎಕ್ಸ್-ಶೋರೂಂ ಬೆಲೆ ಅನುಕ್ರಮವಾಗಿ ₹83,410 ಮತ್ತು ₹89,020 ಆಗಿದೆ. ಇದಲ್ಲದೆ, ರೈಡರ್‌ನ ಸ್ಪ್ಲಿಟ್ ಸೀಟ್ ಮತ್ತು iGO ವೇರಿಯೆಂಟ್‌ಗಳ ಬೆಲೆಯಲ್ಲೂ ₹1,320 ರವರೆಗೆ ಏರಿಕೆ ಕಂಡುಬಂದಿದೆ.
66
ಸ್ಪೋರ್ಟಿ ಸ್ಕೂಟರ್ 'ಟಿವಿಎಸ್ ಎನ್‌ಟಾರ್ಕ್ 125' ದರ ಕಡಿತದ ಸಮಾಧಾನ
ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಯನ್ನು ನೀಡುವ ಉದ್ದೇಶದಿಂದ ಟಿವಿಎಸ್ ತನ್ನ ಪ್ರಸಿದ್ಧ ಸ್ಪೋರ್ಟಿ ಸ್ಕೂಟರ್ 'ಎನ್‌ಟಾರ್ಕ್ 125' ರ ಎಲ್ಲಾ ವೇರಿಯೆಂಟ್‌ಗಳ ಬೆಲೆಯಲ್ಲಿ ನೇರವಾಗಿ ₹1,650 ಕಡಿತಗೊಳಿಸಿ ಗ್ರಾಹಕರಿಗೆ ದೊಡ್ಡ ಸಮಾಧಾನ ನೀಡಿದೆ. ಬೆಲೆ ಕಡಿತದ ನಂತರ ಎನ್‌ಟಾರ್ಕ್ 125 ಡಿಸ್ಕ್ ವೇರಿಯೆಂಟ್ ₹83,350 ಕ್ಕೆ ಹಾಗೂ ಟಾಪ್-ಸ್ಪೆಕ್ XT ವೇರಿಯೆಂಟ್ ₹1,01,500 ರ ಕಡಿಮೆ ಎಕ್ಸ್-ಶೋರೂಂ ಬೆಲೆಗೆ ಗ್ರಾಹಕರಿಗೆ ಲಭ್ಯವಾಗಲಿದೆ.