TVS: ಭಾರಿ ಡಿಮ್ಯಾಂಡ್ ಸೃಷ್ಟಿಸಿದ ಲೇಟೆಸ್ಟ್ ಸ್ಕೂಟರ್; 53 ಕೀ.ಮೀ ಮೈಲೇಜ್ ಕೊಡುವ ಸ್ಕೂಟರ್‌ಗೆ ಮುಗಿಬಿದ್ದ ಜನ! ಇಷ್ಟು ಕಡಿಮೆ ಬೆಲೆಗೆ ಸಿಗತ್ತಾ ಈ ಬೈಕ್?

Published : Jul 28, 2026, 04:14 PM IST

ಕಂಪನಿಯ ಪ್ರಕಾರ ಈ ಸ್ಕೂಟರ್ ಲೀಟರ್‌ಗೆ ಸರಿಸುಮಾರು 53.8 ಕಿ.ಮೀ ಮೈಲೇಜ್ ನೀಡಲಿದ್ದು, 113.3 ಸಿಸಿ ಎಂಜಿನ್, ಆಧುನಿಕ ಎಲ್‌ಇಡಿ ಡಿಆರ್‌ಎಲ್‌ಗಳು, ಡಿಜಿಟಲ್ ಹಾಗೂ ಬ್ಲೂಟೂತ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದಲ್ಲೇ ಪೆಟ್ರೋಲ್ ತುಂಬಿಸುವ ಸೌಲಭ್ಯ ಹೊಂದಿದೆ.

PREV
14
ಟಿವಿಎಸ್‌ನಿಂದ ದಾಖಲೆ ಮಟ್ಟದ ವಾಹನ ಮಾರಾಟ!

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ದಟ್ಟ ಛಾಪು ಮೂಡಿಸಿರುವ ಟಿವಿಎಸ್ (TVS) ಸಂಸ್ಥೆಯು ಜೂನ್ 2026 ರಲ್ಲಿ ಸಾರ್ವಕಾಲಿಕ ದಾಖಲೆಯ ಮಾರಾಟ ಕಂಡಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 2,81,012 ವಾಹನ ಮಾರಾಟ ಮಾಡಿದ್ದ ಸಂಸ್ಥೆಯು, ಈ ವರ್ಷ ಜೂನ್‌ನಲ್ಲಿ ಬರೋಬ್ಬರಿ 4,11,014 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡಾ 46.26 ರಷ್ಟು ಭಾರಿ ಏರಿಕೆ ದಾಖಲಿಸಿದೆ. ಕಂಪನಿಯ ಈ ಬೃಹತ್ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತೀಯ ಗ್ರಾಹಕರ ನೆಚ್ಚಿನ 'ಟಿವಿಎಸ್ ಜೂಪಿಟರ್' ಸ್ಕೂಟರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.

24
ಪ್ರಥಮ ಸ್ಥಾನದಲ್ಲಿ ಜೂಪಿಟರ್!

ಸಂಸ್ಥೆಯ ಮಾರಾಟ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಟಿವಿಎಸ್ ಜೂಪಿಟರ್ ಜೂನ್ ತಿಂಗಳೊಂದರಲ್ಲೇ ಬರೋಬ್ಬರಿ 1,36,805 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಮಾರಾಟ ಶೇಕಡಾ 26.69 ರಷ್ಟು ಹೆಚ್ಚಾಗಿದೆ. ಕಂಪನಿಯ ಪ್ರಕಾರ ಈ ಸ್ಕೂಟರ್ ಲೀಟರ್‌ಗೆ ಸರಿಸುಮಾರು 53.8 ಕಿ.ಮೀ ಮೈಲೇಜ್ ನೀಡಲಿದ್ದು, 113.3 ಸಿಸಿ ಎಂಜಿನ್, ಆಧುನಿಕ ಎಲ್‌ಇಡಿ ಡಿಆರ್‌ಎಲ್‌ಗಳು, ಡಿಜಿಟಲ್ ಹಾಗೂ ಬ್ಲೂಟೂತ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದಲ್ಲೇ ಪೆಟ್ರೋಲ್ ತುಂಬಿಸುವ ಸೌಲಭ್ಯ ಹೊಂದಿದೆ. ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕೌಟುಂಬಿಕ ಸ್ಕೂಟರ್ ಅತ್ಯಂತ ಕೈಗೆಟುಕುವ ಆರಂಭಿಕ ಬೆಲೆಯಲ್ಲಿ ಲಭ್ಯವಿರುವುದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ.

34
ಯುವಕರ ಫೇವರೆಟ್ ಸ್ಪೋರ್ಟ್ಸ್ ಬೈಕ್!

ಕಂಪನಿಯ ಇತರ ವಾಹನಗಳೂ ಸಹ ಮಾರಾಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿವೆ. ಯುವಕರ ಫೇವರೆಟ್ ಸ್ಪೋರ್ಟ್ಸ್ ಬೈಕ್ 'ಟಿವಿಎಸ್ ಅಪಾಚೆ' 55,382 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸಾಮಾನ್ಯ ಜನರ ಹಾಗೂ ಸಣ್ಣ ವ್ಯಾಪಾರಿಗಳ ನೆಚ್ಚಿನ 'ಟಿವಿಎಸ್ ಎಕ್ಸ್‌ಎಲ್ 100' ವಾಹನವು 50,155 ಯುನಿಟ್ ಮಾರಾಟವಾಗಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇವೆರಡೂ ಮಾದರಿಗಳು ಕ್ರಮವಾಗಿ ಶೇಕಡಾ 33.82 ಮತ್ತು ಶೇಕಡಾ 50.39 ರಷ್ಟು ಪ್ರಗತಿ ಸಾಧಿಸಿವೆ. ಇನ್ನು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲೂ ಟಿವಿಎಸ್ ಸಂಸ್ಥೆ ಬಂಪರ್ ಬೆಳವಣಿಗೆ ಕಂಡಿದೆ. ಕಂಪನಿಯ 'ಟಿವಿಎಸ್ ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಜೂನ್‌ನಲ್ಲಿ 47,331 ಯುನಿಟ್‌ಗಳು ಮಾರಾಟವಾಗುವ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡಾ 232 ರಷ್ಟು ಬೃಹತ್ ಜಿಗಿತ ಕಂಡಿದೆ. ಇದರೊಂದಿಗೆ ಅತ್ಯಂತ ಟ್ರೆಂಡಿ ಲುಕ್ ಹೊಂದಿರುವ 'ಟಿವಿಎಸ್ ಎನ್‌ಟಾರ್ಕ್' ಸ್ಕೂಟರ್ 37,762 ಯುನಿಟ್‌ಗಳ ಮಾರಾಟದೊಂದಿಗೆ ಟಾಪ್-5 ಪಟ್ಟಿಗೆ ಲಗ್ಗೆ ಇಟ್ಟಿದೆ.

44
ದೇಶಾದ್ಯಂತ ಬೇಡಿಕೆ!

ಇವುಗಳ ಹೊರತಾಗಿ ಕಂಪನಿಯ 'ಟಿವಿಎಸ್ ರೈಡರ್' (36,983 ಯುನಿಟ್), 'ರೇಡಾನ್' (12,920 ಯುನಿಟ್), 'ಸ್ಪೋರ್ಟ್' (11,560 ಯುನಿಟ್), 'ರೋನಿನ್' (10,157 ಯುನಿಟ್), 'ಜೆಸ್ಟ್' (10,104 ಯುನಿಟ್) ಹಾಗೂ 'ಅಪಾಚೆ ಆರ್‌ಟಿಎಕ್ಸ್/310' (1,855 ಯುನಿಟ್) ವಾಹನಗಳು ಸಹ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಒಟ್ಟಾರೆಯಾಗಿ, ಜೇಬಿಗೆ ಹೊರೆಯಾಗದ ಬೆಲೆ, ಭರ್ಜರಿ ಮೈಲೇಜ್ ಹಾಗೂ ಆಧುನಿಕ ತಂತ್ರಜ್ಞಾನದ ಸಮ್ಮಿಲನದಿಂದಾಗಿ ಟಿವಿಎಸ್ ದ್ವಿಚಕ್ರ ವಾಹನಗಳಿಗೆ ದೇಶಾದ್ಯಂತ ಅಪಾರ ಬೇಡಿಕೆ ವ್ಯಕ್ತವಾಗುತ್ತಿದೆ.

Read more Photos on
click me!

Recommended Stories